
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಬಾತ್ರಾ (Vikram Batra) ಜೀವನ ಕತೆಯನ್ನಾಧರಿಸಿದ ‘ಶೇರ್ಷಾ’ (Shershaah) ಸಿನಿಮಾಗೆ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ರಿಲೀಸ್ ಆಗಿದ್ದ ಶೇರ್ಷಾ ಸಿನಿಮಾ ಅಮೇಜಾನ್ ಪ್ರೈಂನಲ್ಲಿ (Amazon Prime) ಹೊಸ ದಾಖಲೆ ಬರೆದಿದೆ. ಅಮೇಜಾನ್ ಪ್ರೈಂನಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆಗೆ ಶೇರ್ಷಾ ಪಾತ್ರವಾಗಿದೆ. ಈ ಖುಷಿಯ ವಿಚಾರವನ್ನು ಈ ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರ (Sidharth Malhotra) ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ. 12ರಂದು ರಿಲೀಸ್ ಆಗಿದ್ದ ‘ಶೇರ್ಷಾ‘ ಸಿನಿಮಾದ ಟ್ರೈಲರ್ಗೆ ಆರಂಭಿಕವಾಗಿ ಸಅಕಷ್ಟು ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕರಣ್ ಜೋಹರ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳೇ ಹೆಚ್ಚಿವೆ ಎಂಬ ಟೀಕೆಯೂ ಕೇಳಿಬಂದಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ನಂತರ ಬಹಳ ಉತ್ತಮ ವಿಮರ್ಶೆಗಳು ವ್ಯಕ್ತವಾಗಿತ್ತು. ವಿಕ್ರಮ್ ಬಾತ್ರಾ ಅವರ ಸಂಪೂರ್ಣ ಜೀವನದ ಕತೆಯನ್ನು ಕಟ್ಟಿಕೊಟ್ಟಿರುವ ಈ ಸಿನಿಮಾದಲ್ಲಿನ ವಿಕ್ರಮ್ ಬಾತ್ರಾ ಸಾಹಸ ಮತ್ತು ಪ್ರೇಮಕತೆ ಪ್ರೇಕ್ಷಕರ ಮನಮುಟ್ಟಿತ್ತು.
ಶೇರ್ಷಾ ಸಿನಿಮಾದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರ, ನಿಮ್ಮಲ್ಲರ ಪ್ರೀತಿ, ಅಭಿಮಾನದಿಂದ ನನ್ನ ಮನಸು ತುಂಬಿ ಬಂದಿದೆ. ಶೇರ್ಷಾ ಸಿನಿಮಾಗೆ ನಿಮ್ಮಿಂದ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿ ಬಹಳ ಖುಷಿಯಾಗಿದೆ. ಅಮೇಜಾನ್ ಪ್ರೈಂನಲ್ಲಿ ಅತಿಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾವಾಗಿ ಶೇರ್ಷಾ ಹೊರಹೊಮ್ಮಿದೆ. ಯೇ ದಿಲ್ ಮಾಂಗೆ ಮೋರ್ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಶೇರ್ಷಾ ಸಿನಿಮಾವನ್ನು ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ನಿರ್ಮಿಸಿದ್ದು, ವಿಷ್ಣು ವರ್ಧನ್ ನಿರ್ದೇಶಿಸಿದ್ದರು. ಸಿದ್ಧಾರ್ಥ್ ಮಲ್ಹೋತ್ರ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಯಾರಾ ಅದ್ವಾನಿ ವಿಕ್ರಮ್ ಪ್ರೇಯಸಿ ಡಿಂಪಲ್ ಚೀಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಾಡುಗಳು ಕೂಡ ಬಹಳ ಫೇಮಸ್ ಆಗಿತ್ತು.
ಈ ಸಿನಿಮಾ ರಿಲೀಸ್ ಆದ ಬಳಿಕ ಶೇರ್ಷಾ ನಾಯಕ-ನಾಯಕಿಯರಾದ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅದ್ವಾನಿ ಒಟ್ಟಿಗೇ ಕಾಣಿಸಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದರು. ಶೇರ್ಷಾ ಸಿನಿಮಾದಲ್ಲಿ ಕೂಡ ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿದ್ಧಾರ್ಥ್ ಹಾಗೂ ಕಿಯಾರಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಅಂದಹಾಗೆ, ಶೇರ್ಷಾ ಸಿನಿಮಾದ ಯಶಸ್ಸಿನ ಬಳಿಕ ಸಿದ್ಧಾರ್ಥ್ ಮಲ್ಹೋತ್ರ ಅವರಿಗೆ ಸಿನಿಮಾಗಳ ಆಫರ್ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಹೆಚ್ಚಾಗಿದೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಸಿದ್ಧಾರ್ಥ್ಗೆ ಯಾವ ಸಿನಿಮಾ ಕೂಡ ಹೇಳಿಕೊಳ್ಳವಂತಹ ಯಶಸ್ಸು ನೀಡಿರಲಿಲ್ಲ. ಆದರೆ, ಶೇರ್ಷಾ ಸಿನಿಮಾದಿಂದ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.
‘ಶೇರ್ಷಾ’ ಬೆನ್ನಲ್ಲೇ ಅಭಿಮಾನಿಗಳಿಗೆ ಸಿದ್ಧಾರ್ಥ್-ಕರಣ್ ಕಡೆಯಿಂದ ಹೊಸ ನ್ಯೂಸ್
(Vikram Batra life Story Shershaah is Amazon Prime’s most watched film Sidharth Malhotra and Kiara Advani celebrates record)
Published On - 7:18 pm, Tue, 31 August 21