
ಶಿವರಾಜ್‌ಕುಮಾರ್ ಅವರು (Shivarajkumar) ಕನ್ನಡದ ಬ್ಯುಸಿ ಹೀರೋಗಳಲ್ಲಿ ಒಬ್ಬರು. ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಬ್ಯುಸಿ ಆಗಿದ್ದಾರೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದಕ್ಕೆ ಈಗ ಹೊಸ ಸೇರ್ಪಡೆಯೊಂದು ಆಗುತ್ತಿದೆ. ಆರ್. ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಶಿವರಾಜ್‌ಕುಮಾರ್ ಹಾಗೂ ಆರ್. ಚಂದ್ರು ಬಾಂಧವ್ಯ ಹಳೆಯದು. 2010ರಲ್ಲಿ ರಿಲೀಸ್ ಆದ ಶಿವರಾಜ್‌ಕುಮಾರ್ ನಟನೆಯ ‘ಮೈಲಾರಿ’ ಚಿತ್ರವನ್ನು ಚಂದ್ರು ಅವರೇ ನಿರ್ದೇಶನ ಮಾಡಿದ್ದರು. 2023ರಲ್ಲಿ ‘ಕಬ್ಜ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಬಣ್ಣ ಹಚ್ಚಿದ್ದರು. ಈಗ ಹೊಸ ಕಥೆಯೊಂದಿಗೆ ಶಿವಣ್ಣ ಅವರನ್ನು ಚಂದ್ರು ಅಪ್ರೋಚ್ ಮಾಡಿದ್ದಾರೆ ಎಂದು ‘ಸಿನಿಮಾ ಎಕ್ಸ್ಪ್ರೆಸ್’ ವರದಿ ಮಾಡಿದೆ.
ರಾಮ್ ಚರಣ್ ನಟನೆಯ ತೆಲುಗಿನ‘ಪೆದ್ದಿ’ ಸಿನಿಮಾ ಜೂನ್ 4ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಶಿವಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೈಲರ್ 2’ ಚಿತ್ರದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ. ‘ಗುಮ್ಮಡಿ ನರಸಯ್ಯ’, ‘ಡ್ಯಾಡ್’, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಗಳು ಶಿವರಾಜ್‌ಕುಮಾರ್ ಬಳಿ ಇವೆ. ಇದರ ಜೊತೆಗೆ ಈಗ ಹೊಸದೊಂದು ಸೇರ್ಪಡೆ ಆಗಿದೆ. ಆರ್ ಚಂದ್ರು ನಿರ್ದೇಶನದ ಹೊಸ ಸಿನಿಮಾಗೆ ಇನ್ನಷ್ಟೇ ಟೈಟಲ್ ಫೈನಲ್ ಆಗಬೇಕಿದೆ.
‘ಕಬ್ಜ’ ಬಳಿಕ ಚಂದ್ರು ಅವರು ನಿರ್ದೇಶನಕ್ಕೆ ಇಳಿದಿಲ್ಲ. ಕಳೆದ ಕೆಲ ವರ್ಷಗಳಿಂದ ಅವರು ಕೆಲವು ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಶಿವಣ್ಣ ಕೈಯಲ್ಲೂ ಅನೇಕ ಚಿತ್ರಗಳಿದ್ದು, ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ
ಶಿವಣ್ಣ ಅವರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ಶೂಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ, ಬೇರೆ ರಾಜ್ಯಗಳಿಗೆ ತೆರಳಿ ಅವರು ಶೂಟ್ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.