ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ತುಂಬಾನೇ ಚೈಲ್ಡಿಶ್ ಆಗಿ ನಡೆದುಕೊಳ್ಳುತ್ತಾರೆ. ಮನೆಯಲ್ಲಿ ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಬಿಗ್ ಬಾಸ್ ಮನೆಯ ಪುರುಷ ಸ್ಪರ್ಧಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ. ಎಲ್ಲರೂ ಒಬ್ಬರ ಮೆಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ.
ಶನಿವಾರದ (ಎಪ್ರಿಲ್ 24) ಎಪಿಸೋಡ್ನಲ್ಲಿ ಮುಂಜಾನೆ ಬಿಗ್ ಬಾಸ್ ಸಿಗರೇಟ್ ಕಳುಹಿಸಿದ್ದರು. ಇದನ್ನು ಸ್ಟೋರ್ ರೂಂನಲ್ಲಿ ಇಡಲಾಗಿತ್ತು. ಅರವಿಂದ್ ಅವರ ಸಿಗರೇಟ್ ಪ್ಯಾಕ್ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಸಿಗರೇಟ್ ಪ್ಯಾಕ್ಗಳನ್ನು ಶುಭಾ ಅಡಗಿಸಿಟ್ಟರು. ಅರವಿಂದ್ ತಮ್ಮ ಪಾಲಿಗೆ ಬಂದ ಸಿಗರೇಟ್ ಅನ್ನು ತೆಗೆದುಕೊಂಡು ಬಂದರು.
ರಘು ಗೌಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಸ್ಟೋರ್ ರೂಂಗೆ ಹೋಗಿ ನೋಡಿದರೆ ಅಲ್ಲಿ ಸಿಗರೇಟ್ ಇರಲಿಲ್ಲ. ಇದನ್ನು ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ಅಲ್ಲದೆ, ನಮ್ಮ ಸಿಗರೇಟ್ ಎಲ್ಲೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಅರವಿಂದ್ ಒಬ್ಬರಿಗೆ ಮಾತ್ರ ಸಿಗರೇಟ್ ಕಳುಹಿಸಿ ನಮಗೆ ಸಿಗರೇಟ್ ಕಳುಹಿಸಿಲ್ಲ ಅಂದರೆ ಏನರ್ಥ? ನಮಗೆ ಕೊಟ್ಟಿದ್ದ ಸಿಗರೇಟ್ ಪ್ಯಾಕ್ಅನ್ನು ಬೇರೆಯಾರೋ ಕದ್ದಿದ್ದಾರೆ ಎನಿಸುತ್ತದೆ ಎಂದು ಮಂಜು ಎಲ್ಲರ ಮೇಲೂ ಅನುಮಾನಪಟ್ಟರು. ಬಿಗ್ ಬಾಸ್ ನಮಗೆ ಇನ್ನೂ ಸಿಗರೇಟ್ ಕಳಿಸಿರದೇ ಇರಬಹುದು. ಕಾಯೋಣ ಎನ್ನುವ ಉತ್ತರ ಕೆಲವರಿಂದ ಬಂತು.
ಈ ವೇಳೆ ರಘು, ನೀವು ಸಿಗರೇಟ್ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಎಚ್ಚರಿಕೆ ನೀಡಿದರು. ಕೆಲ ಹೊತ್ತು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವುದು ನಡೆದೇ ಇತ್ತು. ಕೊನೆಗೆ ಶುಭಾ ಪೂಂಜಾ ಅಡಗಿಸಿಟ್ಟ ಸಿಗರೇಟ್ಗಳನ್ನು ನೀಡಿದರು. ಈ ವೇಳೆ ಪ್ರಶಾಂತ್, ಇದೇ ಕೆಲಸ ನಾನು ಮಾಡಿದ್ದರೆ ಇಷ್ಟು ಹೊತ್ತಿಗೆ ಮುಗಿದೇ ಹೋಗಿರುತ್ತಿತ್ತು ಎಂದು ನಕ್ಕರು.
ಇದನ್ನೂ ಓದಿ: Shubha Poonja: ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ; ರಘು ಗೌಡ ಹೀಗ್ಯಾಕಾದ್ರು?
Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್ ಬಾಸ್ ಪಯಣ ಅಂತ್ಯ?