AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿ ಚಿತ್ರ ರಿಲೀಸ್​ ಆದ ದಿನಾಂಕದಲ್ಲೇ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ರಮ್ಯಾ

ಎಲ್ಲರಂತೆ ಸಹಜವಾದ ಜೀವನ ನಡೆಸಬೇಕು ಅಂತ ನಟಿ ರಮ್ಯಾ ನಿರ್ಧರಿಸಿದ್ದಾರೆ. ಈ ಕುರಿತಾಗಿ ಅಭಿಮಾನಿಗಳ ಜೊತೆಯಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಭಿ ಚಿತ್ರ ರಿಲೀಸ್​ ಆದ ದಿನಾಂಕದಲ್ಲೇ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ರಮ್ಯಾ
ನಟಿ ರಮ್ಯಾ - ಅಭಿ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Apr 25, 2021 | 1:01 PM

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರೂ ಸಹ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಭಾನುವಾರ (ಏ.25) ಇನ್​ಸ್ಟಾಗ್ರಾಮ್​ನಲ್ಲಿ ಅವರು ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸಿದರು. ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ರಮ್ಯಾ ಉತ್ತರ ನೀಡಿದರು. ವಿಶೇಷ ಏನೆಂದರೆ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 18 ವರ್ಷ ಕಳೆದಿದೆ.

ಸರಿಯಾಗಿ 18 ವರ್ಷಗಳ ಹಿಂದೆ, ಅಂದರೆ 2003ರ ಏ.25ರಂದು ‘ಅಭಿ’ ಸಿನಿಮಾ ತೆರೆಕಂಡಿತ್ತು. ಪುನೀತ್​ ರಾಜ್​ಕುಮಾರ್​ ಅವರಿಗೆ ಜೋಡಿಯಾಗಿ ನಟಿಸುವ ಮೂಲಕ ರಮ್ಯಾ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟದ್ದರು. ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಆ ಚಿತ್ರ ಬಿಡುಗಡೆ ಆಗುತ್ತಿದ್ದಂತೆಯೇ ರಮ್ಯಾ ಸ್ಟಾರ್​ ಹೀರೋಯಿನ್​ ಆಗಿಬಿಟ್ಟರು. ಅವರು ಚಿತ್ರರಂಗಕ್ಕೆ ಕಾಲಿಟ್ಟು 18 ವರ್ಷ ಕಳೆದಿದೆ. ಅದನ್ನು ಅಭಿಮಾನಿಗಳು ರಮ್ಯಾಗೆ ನೆನಪಿಸಿದ್ದಾರೆ.

‘ವಾವ್​ ನಿಜವಾಗಿಯೂ? ಇದು ಗ್ರೇಟ್​. ಚಿತ್ರರಂಗದಲ್ಲಿ ನಾನು ತುಂಬ ವಿಷಯ ಕಲಿತೆ. ಅದು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು. ಜನಪ್ರಿಯತೆ ಮತ್ತು ಹಣ ನಮ್ಮ ಜೀವನದ ಮಹಾನ್​ ಶಿಕ್ಷಕರು. ಮಾನವೀಯತೆ ಮತ್ತು ಧನ್ಯತೆಯ ಭಾವದಲ್ಲಿ ನಾನು ಈ ಪಯಣವನ್ನು ಹಿಂತಿರುಗಿ ನೋಡುತ್ತೇನೆ’ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಮತ್ತೆ ಸಿನಿಮಾಗಳಲ್ಲಿ ರಮ್ಯಾ ತೊಡಗಿಕೊಳ್ಳಬೇಕು ಎಂಬುದು ಹಲವು ಅಭಿಮಾನಿಗಳ ಬಯಕೆ. ಆದರೆ ಅವರೆಲ್ಲರ ಆಸೆಗಳಿಗೆ ರಮ್ಯಾ ಇಂದು ತಣ್ಣೀರು ಎರಚಿದ್ದಾರೆ. ಖಡಾಖಂಡಿತವಾಗಿ ತಾವು ಮತ್ತೆ ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ನಿಮ್ಮನ್ನು ನಿರಾಸೆಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಆ ಕಾಲ ಯಾವಾಗಲೋ ಮುಗಿಯಿತು’ ಎಂದು ರಮ್ಯಾ ಹೇಳಿದ್ದಾರೆ.

ಹಾಗಾದರೆ ರಮ್ಯಾ ಇನ್ಮುಂದೆ ಪೂರ್ಣಾವಧಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರಾ? ಅದೂ ಸಾಧ್ಯವಿಲ್ಲ. ‘ಇಲ್ಲ, ನನ್ನ ಕಾಲ ಮುಗಿಯಿತು’ ಎಂದು ಅವರು ಉತ್ತರಿಸಿದ್ದಾರೆ. ಸಹಜವಾದ ಜೀವನ ನಡೆಸಬೇಕು ಅಂತ ರಮ್ಯಾ ನಿರ್ಧರಿಸಿದ್ದಾರಂತೆ. ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಾ, ಸಿನಿಮಾ ಮತ್ತು ವೆಬ್​ ಸಿರೀಸ್​ಗಳನ್ನು ನೋಡುತ್ತಾ ಅವರು ಕಾಲ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಕ್ಷೇತ್ರದಿಂದ ಸಂಪೂರ್ಣ ದೂರ ಇರಬೇಕು ಎಂದು ರಮ್ಯಾ ತೆಗೆದುಕೊಂಡಿರುವ ನಿರ್ಧಾರದಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ.

ಇದನ್ನೂ ಓದಿ: Ramya Divya Spandana: ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

ರಮ್ಯಾ-ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಉಳಿದಿದೆ? ಇಲ್ಲಿದೆ ಉತ್ತರ

(Ramya Divya Spandana says she will never come back to film and politics)