Shubha Poonja: ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ; ರಘು ಗೌಡ ಹೀಗ್ಯಾಕಾದ್ರು?
Bigg Boss Kannada: ಮನೆಯವರಿಗೆ ನೀಡಿರುವ ಸೌಲಭ್ಯಗಳನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ಹೀಗಾಗಿ ಕೆಲವರು ಹಣ್ಣು-ಹಂಪಲು ತಿಂದುಕೊಂಡು ದಿನ ಕಳೆಯುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ 17 ಸ್ಪರ್ಧಿಗಳು ಎಂಟ್ರಿ ತೆಗೆದುಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸೇರಿದಾಗ ಒಬ್ಬರಿಗೊಬ್ಬರಿಗೆ ಪರಿಚಯವಿರಲಿಲ್ಲ. ಈಗ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿ 50 ದಿನಗಳು ಕಳೆದಿವೆ. ಈಗ ಒಬ್ಬರಿಗೊಬ್ಬರು ತುಂಬಾನೇ ಆಪ್ತರಾಗಿದ್ದಾರೆ. ಯಾರೊಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋದರೂ ಸ್ಪರ್ಧಿಗಳಿಗೆ ತುಂಬಾನೇ ಬೇಸರ ಆಗೋದು ಗ್ಯಾರಂಟಿ. ಈಗ ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ ಎಂದು ರಘು ಹೇಳಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ಸಖತ್ ಜಾಲಿಯಾಗಿರುತ್ತಾರೆ. ಅವರು ಎಲ್ಲರ ಜತೆಗೂ ಉತ್ತಮವಾಗಿ ಬೆರೆಯುತ್ತಾರೆ. ಕೆಲವರ ಜತೆಗೆ ಶುಭಾ ಹೆಚ್ಚು ಸಲುಗೆ ಹೊಂದಿದ್ದಾರೆ. ರಘು ಗೌಡ, ಮಂಜು ಪಾವಗಡ ಹಾಗೂ ರಾಜೀವ್ ಜತೆ ಶುಭಾ ಹೆಚ್ಚು ಆಪ್ತರಾಗಿರುತ್ತಾರೆ. ಈಗ ಅಡುಗೆ ಮನೆಯಲ್ಲಿ ನಡೆದ ಘಟನೆ ಒಂದು ಎಲ್ಲರ ಗಮನ ಸೆಳೆದಿದೆ.
ಮನೆಯವರಿಗೆ ನೀಡಿರುವ ಸೌಲಭ್ಯಗಳನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ಇದನ್ನು ಮರಳಿ ಪಡೆಯೋಕೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡುತ್ತಿದ್ದಾರೆ. ಈ ಟಾಸ್ಕ್ನಲ್ಲಿ ಕೆಲವರಿಗೆ ಗ್ಯಾಸ್ ಸಿಕ್ಕಿಲ್ಲ. ಹೀಗಾಗಿ ಅವರು ಹಣ್ಣು-ಹಂಪಲು ತಿಂದುಕೊಂಡು ದಿನ ಕಳೆಯುತ್ತಿದ್ದಾರೆ.
ಅದೇ ರೀತಿ ಶುಭಾ ಸೇಬು ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಸೇಬುಹಣ್ಣು ಕತ್ತರಿಸುವಾಗ ಕೊಳೆತ ಸೇಬು ಹಣ್ಣು ಸಿಕ್ಕಿದೆ. ಬೇರೆಯವರಿಗೋಸ್ಕರ ನಾನು ತ್ಯಾಗ ಮಾಡುತ್ತೇನೆ. ಈ ಕೊಳೆತ ಸೇಬು ಹಣ್ಣನ್ನು ನಾನು ತಿನ್ನುತ್ತೇನೆ ಎಂದು ಶುಭಾ ಅದನ್ನು ತಿನ್ನಲು ಮುಂದಾಗಿದ್ದಾರೆ.
ಇದನ್ನು ನೋಡಿದ ರಘು ಗೌಡ ಕೊಳೆತ ಹಣ್ಣನ್ನು ತಿನ್ನುವುದನ್ನು ತಡೆಯೋಕೆ ಮುಂದಾಗಿದ್ದಾರೆ. ಆದಾಗ್ಯೂ ಶುಭಾ ಹಣ್ಣು ತಿನ್ನುವುದನ್ನು ನಿಲ್ಲಿಸಲಿಲ್ಲ. ಆಗ ರಘು, ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ. ನಾನು ಕೊಳೆತ ಹಣ್ಣನ್ನು ತಿಂದು ಸಾಯುತ್ತೇನೆ ಎಂದು ನಾಟಕ ಮಾಡಿದ್ದಾರೆ. ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
View this post on Instagram
ಇದನ್ನೂ ಓದಿ: Kichcha Sudeep: ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಸುದೀಪ್; ಈ ವಾರವೂ ಬಿಗ್ ಬಾಸ್ಗೆ ಕಿಚ್ಚ ಗೈರು
Published On - 4:47 pm, Fri, 23 April 21