ಬಿಗ್ ಬಾಸ್ ಎಂಟನೇ ಸೀಸನ್ ದಿನ ಕಳೆದಂತೆ ರಂಗೇರುತ್ತಿದೆ. ಮನೆಯಲ್ಲಿ ಸಾಕಷ್ಟು ಗುಂಪುಗಳು ಹುಟ್ಟಿಕೊಂಡಿವೆ. ಇದರಿಂದ ಸ್ಪರ್ಧಿಗಳ ನಡುವೆ ಜಗಳ ಹೆಚ್ಚುತ್ತಿದೆ ಎಂಬುದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಆರೋಪ. ಮನೆಯಲ್ಲಿ ನಡೆಯುವ ಪ್ರತಿ ವಿಚಾರಗಳು ವೀಕ್ಷಕರ ಗಮನ ಸೆಳೆಯುತ್ತಲೇ ಇದೆ. ಈ ಮಧ್ಯೆ ಸ್ಪರ್ಧಿಗಳು ಇಡುವ ಚಿತ್ರ ವಿಚಿತ್ರ ಬೇಡಿಕೆಗಳು ವೀಕ್ಷಕರಿಗೆ ಮನರಂಜನೆ ನೀಡುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ಇಟ್ಟ ಹೊಸ ಬೇಡಿಕೆ ಕೇಳಿ ಮನೆಯವರಿಗೆ ಅಳಬೇಕೋ ಅಥವಾ ನಗಬೇಕೋ ಎಂದು ಗೊತ್ತಾಗುತ್ತಿಲ್ಲ.
ಬಿಗ್ ಬಾಸ್ ಮನೆ ಸೇರಿದಾಗಿನಿಂದಲೂ ಶುಭಾ ಪೂಂಜಾ ಒಂದಲ್ಲಾ ಒಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇದ್ದಾರೆ. ಅವರು ನಿತ್ಯ ಬಿಗ್ ಬಾಸ್ ಎದುರು ಹೊಸ ಹೊಸ ಬೇಡಿಕೆ ಇಡುತ್ತಿದ್ದಾರೆ. ಬಿಗ್ ಬಾಸ್ ಎಲ್ಲಾ ಸವಲತ್ತುಗಳನ್ನು ಕಿತ್ತುಕೊಂಡಾಗ, ಬಿಗ್ ಬಾಸ್ ನನಗೆ ಪುರಿ-ಸಾಗೂ ಕಳುಹಿಸಿ, ಬ್ರಶ್ ಕಳುಹಿಸಿ ಎಂದು ಚಿಕ್ಕ ಮಕ್ಕಳಂತೆ ಗೋಗರೆದಿದ್ದರು. ಇದನ್ನು ನೋಡಿದ ದಿವ್ಯಾ ಉರುಡುಗ ಚಿಕ್ಕ ಮಗುವಿನಂತೆ ಶುಭಾ ಅವರನ್ನು ಮುದ್ದಾಡಿದ್ದರು.
ಈಗ ಬಿಗ್ ಬಾಸ್ ಎದುರು ಶುಭಾ ಹೊಸ ಬೇಡಿಕೆ ಇಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕಕ ಜಾಲತಾಣದಲ್ಲಿ ಅನ್ ಸೀನ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಶುಭಾ ಕಡಲೇ ಕಾಯಿ ಬೇಕು ಎಂದು ಕೇಳಿದ್ದಾರೆ. ಶುಭಾ ಅವರ ವಿಚಿತ್ರ ಬೇಡಿಕೆ ಕೇಳಿ ಮನೆ ಮಂದಿ ಕಂಗಾಲಾಗಿದ್ದಾರೆ.
ಶುಭಾಗೆ ಆಗಾಗ ಹಸಿವಾಗುತ್ತದೆ. ಈ ಹಸಿವನ್ನು ನೀಗಿಸಿಕೊಳ್ಳೋಕೆ ಅವರು ಮಾರ್ಗ ಹುಡುಕುತ್ತಿದ್ದಾರೆ. ಈ ಕಾರಣಕ್ಕೆ ಅವರು, ಬಿಗ್ ಬಾಸ್ ಮನೆಯಲ್ಲಿ ಕಡಲೆಕಾಯಿ ಇಡಬಹುದಿತ್ತು ಎಂದಿದ್ದಾರೆ. ಇದು ಮನೆಯವರಿಗೆ ಸಿಲ್ಲಿ ಬೇಡಿಕೆ ಎನಿಸಿದೆ. ಈ ಬಗ್ಗೆ ಮಾತನಾಡಿದ ಅರವಿಂದ್ ಕೆ.ಪಿ., ಹೌದು ನಿನನಗೆ ಕಡಲೆಕಾಯಿ, ಚುರಮುರಿ ಎಲ್ಲವನ್ನೂ ಇಡುತ್ತಾರೆ ಎಂದು ನಕ್ಕಿದ್ದಾರೆ. ಆಗ ಶುಭಾ, ನಾವೇನೂ ಹೆಚ್ಚು ಕೇಳುತ್ತಿಲ್ಲ. ಚಿಕ್ಕ ಪೊಟ್ಟಣದಲ್ಲಿ ಕಡಲೆಕಾಯಿ ನೀಡಿದರೆ ಸಾಕಿತ್ತು. ಆದರೆ, ಬಿಗ್ ಬಾಸ್ ಅದನ್ನು ಕೊಡುತ್ತಿಲ್ಲ. ಇದನ್ನು ಕೇಳಿ ನನಗೆ ತುಂಬಾನೇ ಬೇಸರವಾಯಿತು ಎಂದು ಶುಭಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್ ಸಂಬರಗಿ; ವೀಕೆಂಡ್ನಲ್ಲಿ ಕಾದಿದೆ ಟ್ವಿಸ್ಟ್