AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಪುರದಲ್ಲೂ ರಜನೀ ಹವಾ, ‘ಕೂಲಿ’ ಸಿನಿಮಾ ನೋಡಲು ರಜೆ ಘೋಷಣೆ

Coolie movie: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಾಳೆ (ಆಗಸ್ಟ್ 14) ಬಿಡುಗಡೆ ಆಗುತ್ತಿದೆ. ಭಾರತದ ಹಲವು ಪ್ರಮುಖ ನಗರಗಳಲ್ಲಿ ಮೊದಲ ದಿನದ ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ. ಕೆಲವು ಕಂಪೆನಿಗಳು ಸಿಬ್ಬಂದಿಗೆ ರಜೆ ನೀಡಿ ಸಿನಿಮಾ ನೋಡಲು ಸಹಕರಿಸಿವೆ. ಸಿಂಗಪುರದಲ್ಲೂ ಸಹ ಕೆಲ ಕಂಪೆನಿಗಳು ಸಿಬ್ಬಂದಿಗೆ ರಜೆ ನೀಡಿವೆ.

ಸಿಂಗಪುರದಲ್ಲೂ ರಜನೀ ಹವಾ, ‘ಕೂಲಿ’ ಸಿನಿಮಾ ನೋಡಲು ರಜೆ ಘೋಷಣೆ
Coolie Movie
ಮಂಜುನಾಥ ಸಿ.
|

Updated on: Aug 13, 2025 | 12:30 PM

Share

ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾದ ಹವಾ ಬಲು ಜೋರಾಗಿ ಹಬ್ಬಿದೆ. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿವೆ. ಅಂದಹಾಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ‘ಕೂಲಿ’ ಹವಾ ಬಲು ಜೋರಾಗಿಯೇ ಇದೆ.

ರಜನೀಕಾಂತ್​ ಭಾರತದಲ್ಲಿ ಮಾತ್ರ ಸ್ಟಾರ್ ಅಲ್ಲ, ಅವರ ಅಭಿಮಾನಿಗಳು ವಿಶ್ವದೆಲ್ಲೆಡೆ ಇದ್ದಾರೆ. ಭಾರತದಲ್ಲಿ ಕೆಲವು ಕಂಪೆನಿಗಳು ರಜನೀಕಾಂತ್​ರ ಸಿನಿಮಾಕ್ಕಾಗಿ ಈಗಾಗಲೇ ರಜೆಯನ್ನೇ ಘೋಷಿಸಿಬಿಟ್ಟಿವೆ. ರಜನಿಯ ಹವಾ ಎಷ್ಟಿದೆಯೆಂದರೆ ವಿದೇಶದಲ್ಲೂ ಸಹ ಕೇವಲ ‘ಕೂಲಿ’ ಸಿನಿಮಾ ವೀಕ್ಷಿಸಲೆಂದು ಕಂಪೆನಿಗಳು ತಮ್ಮ ಎಲ್ಲ ಸಿಬ್ಬಂದಿಗೆ ರಜೆ ಘೋಷಣೆ ಮಾಡಿದೆ.

ಹೌದು, ಸಿಂಗಪುರದ ಕೆಲ ಕಂಪೆನಿಗಳು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆ ಆಗುವ ದಿನದಂದು ತಮ್ಮ ಸಿಬ್ಬಂದಿಗೆ ರಜೆ ನೀಡಿವೆ. ಸಿಂಗಪುರದ ಫಾರ್ಮರ್ ಕನ್​ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್​ಬಿ ಮಾರ್ಟ್​ ಹೆಸರಿನ ಕಂಪೆನಿಗಳು ಆಗಸ್ಟ್ 14 ರಂದು ತಮ್ಮ ಸಿಬ್ಬಂದಿಗೆ ರಜೆ ನೀಡಿವೆ. ಈ ಬಗ್ಗೆ ಸರ್ಕ್ಯುಲರ್ (ಸುತ್ತೋಲೆ) ಅನ್ನು ಸಹ ಹೊರಡಿಸಿವೆ.

ಇದನ್ನೂ ಓದಿ:4500 ರೂಪಾಯಿಗೆ ಮಾರಾಟ ಆಯ್ತು ‘ಕೂಲಿ’ ಸಿನಿಮಾ ಬ್ಲಾಕ್ ಟಿಕೆಟ್

ಸಿಂಗಪುರದ ಫಾರ್ಮರ್ ಕನ್​ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ತಮಿಳು ಸಿಬ್ಬಂದಿಗೆ ಆಗಸ್ಟ್ 14 ರಂದು ಸಂಬಳ ಸಹಿತ ರಜೆಯನ್ನು ಘೋಷಣೆ ಮಾಡಿದೆ. ರಜನೀಕಾಂತ್ ಅವರ ‘ಕೂಲಿ’ ಸಿನಿಮಾ ವೀಕ್ಷಿಸಲೆಂದೇ ಈ ರಜೆ ನೀಡುತ್ತಿರುವುದಾಗಿ ಸರ್ಕ್ಯುಲರ್​​ನಲ್ಲಿ ಉಲ್ಲೇಖಿಸಿದೆ. ಇನ್ನು ಎಸ್​ಬಿ ಮಾರ್ಟ್​ ಎನ್ನುವ ಮಳಿಗೆ ಸಹ ‘ಕೂಲಿ’ ಸಿನಿಮಾ ಬಿಡುಗಡೆ ಇರುವ ಕಾರಣ ಅರ್ಧ ದಿನ ರಜೆ ಘೋಷಣೆ ಮಾಡಿದೆ. ‘ಕೂಲಿ’ ಸಿನಿಮಾ ಬಿಡುಗಡೆ ಕಾರಣ, ಆಗಸ್ಟ್ 14 ರಂದು ಮಳಿಗೆಯು ಬೆಳಿಗ್ಗೆ 7 ರಿಂದ 11:45ತ ವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಸುತ್ತೋಲೆ ಹೊರಡಿಸಿದೆ.

ಇನ್ನು ಭಾರತದಲ್ಲಿ ವಿಶೇಷವಾಗಿ ಚೆನ್ನೈನಲ್ಲಿ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ‘ಕೂಲಿ’ ಸಿನಿಮಾ ವೀಕ್ಷಿಸಲು ವಿಶೇಷ ರಜೆಯನ್ನು ಮಂಜೂರು ಮಾಡಿವೆ. ರಜನೀಕಾಂತ್ ಅವರ ಸಿನಿಮಾಗಳು ಬಿಡುಗಡೆ ಆಗುವಾಗ ಹೀಗೆ ಕಂಪೆನಿಗಳು ರಜೆ ನೀಡುವುದು ಸಾಮಾನ್ಯ. ಈ ಹಿಂದೆ ರಜನೀಕಾಂತ್ ಅವರ ‘ಕಬಾಲಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಸಹ ಹೀಗೆ ಹಲವು ಕಂಪೆನಿಗಳು ವಿಶೇಷ ರಜೆಯನ್ನು ಮಂಜೂರು ಮಾಡಿದ್ದವು. ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!