4500 ರೂಪಾಯಿಗೆ ಮಾರಾಟ ಆಯ್ತು ‘ಕೂಲಿ’ ಸಿನಿಮಾ ಬ್ಲಾಕ್ ಟಿಕೆಟ್
‘ಕೂಲಿ’ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾದಿರುವ ಹಲವು ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಚೆನ್ನೈನಲ್ಲಿ ಎಲ್ಲ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ದುಬಾರಿ ಬೆಲೆಗೆ ಬ್ಲಾಕ್ ಟಿಕೆಟ್ ಮಾರುತ್ತಿರುವುದು ತಿಳಿದುಬಂದಿದೆ.

‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ನಟನೆಯ ಪ್ರತಿ ಸಿನಿಮಾ ಬಿಡುಗಡೆ ಆದಾಗಲೂ ಅಭಿಮಾನಿಗಳ ಕ್ರೇಜ್ ಜೋರಾಗಿ ಇರುತ್ತದೆ. ‘ಕೂಲಿ’ ಸಿನಿಮಾ (Coolie Movie) ಕೂಡ ಅದೇ ರೀತಿಯ ಕ್ರೇಜ್ ಸೃಷ್ಟಿಸಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆಗಸ್ಟ್ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನ ಮೊದಲ ಶೋ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಅಭಿಮಾನಿಗಳು ರೆಡಿ ಇರುತ್ತಾರೆ. ಟಿಕೆಟ್ ಸಿಗದೇ ಇದ್ದರೆ ಬ್ಲಾಕ್ ಟಿಕೆಟ್ ಖರೀದಿ ಮಾಡುವವರೂ ಇದ್ದಾರೆ. ವರದಿಗಳ ಪ್ರಕಾರ, ಚೈನ್ನೈನಲ್ಲಿ ‘ಕೂಲಿ’ ಸಿನಿಮಾದ ಬ್ಲಾಕ್ ಟಿಕೆಟ್ (Coolie Movie Black Tickets) 4500 ರೂಪಾಯಿಗೆ ಮಾರಾಟ ಆಗಿದೆ.
ಆಗಸ್ಟ್ 14ಕ್ಕೆ ಚೆನ್ನೈನಲ್ಲಿ ‘ಕೂಲಿ’ ಸಿನಿಮಾದ 130ಕ್ಕೂ ಅಧಿಕ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂದು ಆಸೆ ಇಟ್ಟುಕೊಂಡ ಎಷ್ಟೂ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ. ಹಾಗಾಗಿ ಕೆಲವರು ಬ್ಲಾಕ್ ಟಿಕೆಟ್ ಖರೀದಿಸುವುದು ಅನಿವಾರ್ಯ ಆಗಿದೆ. ಚೆನ್ನೈನ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಮೂಲ ಟಿಕೆಟ್ ಬೆಲೆ ಕಡಿಮೆ ಇದೆ. ಆದರೆ ಬ್ಲಾಕ್ನಲ್ಲಿ ದುಬಾರಿಗೆ ಬೆಲೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
‘ಕೂಲಿ’ ಸಿನಿಮಾಗೆ ಈ ಪರಿ ಹೈಪ್ ಹೆಚ್ಚಲು ಕಾರಣ ಕೂಡ ಇದೆ. ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್, ರಚಿತಾ ರಾಮ್, ಸತ್ಯರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ನಿಂದ ನಿರೀಕ್ಷೆ ಹೆಚ್ಚಾಗಿದೆ.
ಬಿಡುಗಡೆಗೂ ಮುನ್ನವೇ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಎನ್ನಲಾಗುತ್ತಿದೆ. ಆ ಪರಿ ಟಿಕೆಟ್ ಬುಕಿಂಗ್ ಆಗುತ್ತಿದೆ. ಬೆಂಗಳೂರಿನಲ್ಲಿ ಕೂಡ ಜನರು ಮುಗಿಬಿದ್ದು ಈ ಸಿನಿಮಾದ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಟಿಕೆಟ್ ದರ ಮುಗಿಲುಮುಟ್ಟಿದೆ. 500, 1000 ರೂಪಾಯಿ ಬೆಲೆಯ ಟಿಕೆಟ್ಗಳು ಕೂಡ ಸೋಲ್ಡ್ ಔಟ್ ಆಗಿವೆ. ಒಟ್ಟಿನಲ್ಲಿ ‘ಕೂಲಿ’ ಸಿನಿಮಾದ ಕ್ರೇಜ್ ಜೋರಾಗಿದೆ.
ಇದನ್ನೂ ಓದಿ: ‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಉಪೇಂದ್ರ ಪಡೆದಿದ್ದೆಷ್ಟು?
ಅದೇ ದಿನ, ಅಂದರೆ ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ‘ಕೂಲಿ’ ಚಿತ್ರಕ್ಕೆ ‘ವಾರ್ 2’ ಪೈಪೋಟಿ ನೀಡುತ್ತಿದೆ. ಎರಡು ಸಿನಿಮಾಗಳ ನಡುವೆ ಸಖತ್ ಸ್ಪರ್ಧೆ ಇದೆ. ಆದರೆ ಟಿಕೆಟ್ ಬುಕಿಂಗ್ ವಿಚಾರದಲ್ಲಿ ‘ವಾರ್ 2’ ಸಿನಿಮಾ ಕೊಂಚ ಹಿಂದುಳಿದಿದೆ. ಮೊದಲ ದಿನ ಯಾವ ರೀತಿಯ ವಿಮರ್ಶೆ ಬರಲಿದೆ ಎಂಬುದರ ಮೇಲೆ ಈ ಸಿನಿಮಾಗಳ ಭವಿಷ್ಯ ನಿರ್ಧಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








