ಕೇರಳಕ್ಕೆ ಬಂದ ರಜನಿಕಾಂತ್: ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ
Rajinikanth: ರಜನೀಕಾಂತ್ 50 ವರ್ಷಗಳಿಗಿಂತಲೂ ಹೆಚ್ಚು ಸಮಯ ಚಿತ್ರರಂಗದಲ್ಲಿದ್ದಾರೆ. 50 ವರ್ಷದಿಂದಲೂ ಜನ ಅವರ ಸಿನಿಮಾ ನೋಡುತ್ತಿದ್ದಾರೆ. ಆದರೆ ಇನ್ನೂ ಅವರ ಕ್ರೇಜ್ ಕಡಿಮೆ ಆಗಿಲ್ಲ. ಇದೀಗ ರಜನೀಕಾಂತ್ ಸಿನಿಮಾ ಶೂಟಿಂಗ್ಗೆ ಕೇರಳಕ್ಕೆ ಹೋಗಿದ್ದು, ಅಲ್ಲಿ ಅಭಿಮಾನಿಗಳು ಮೆಚ್ಚಿನ ನಟನ ನೋಡಿ ಸಂಭ್ರಮಪಟ್ಟಿದ್ದಾರೆ. ವಿಡಿಯೋ ನೋಡಿ...

ರಜನಿಕಾಂತ್ (Rajinikanth) ಅವರಿಗೆ ಈಗ 74 ವರ್ಷ. ಈ ವಯಸ್ಸಿನಲ್ಲೂ ಅವರು ಯುವಕನಂತೆ ಕೆಲಸ ಮಾಡುತ್ತಾ ಇದ್ದಾರೆ. ಈಗ ಅವರು ‘ಕೂಲಿ’ ಸಿನಿಮಾ ಕೆಲಸಗಳನ್ನು ಒಂದು ಹಂತಕ್ಕೆ ಮುಗಿಸಿದ್ದಾರೆ. ಇದರ ಜೊತೆಗೆ ಅವರು ‘ಜೈಲರ್ 2’ (Jailer 2) ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಅವರು ಈ ಚಿತ್ರದ ಶೂಟ್ಗೆ ಕೇರಳಕ್ಕೆ ಬಂದಿದ್ದಾರೆ. ರಜನಿ ಅವರನ್ನು ನೊಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
ರಜನಿಕಾಂತ್ ಅವರು ಟೊಯಾಟೋ ಇನೋವಾದಲ್ಲಿ ಬಂದಿಳಿದಿದ್ದಾರೆ. ಅವರನ್ನು ನೋಡುತ್ತಿದ್ದಂತೆ ರಜನಿಕಾಂತ್ ಅವರು ಕೈ ಬೀಸಿದ್ದಾರೆ. ಹೋಟೆಲ್ ಸ್ಟಾಫ್ಗಳು ಕೂಡ ರಜನಿಕಾಂತ್ ಅವರನ್ನು ಕಂಡು ಖುಷಿಪಟ್ಟಿದ್ದಾರೆ. ರಜನಿಕಾಂತ್ ಕೂಡ ಅಭಿಮಾನಿಗಳನ್ನು ಸಾಕಷ್ಟು ಇಷ್ಟಪಡುತ್ತಾರೆ. ಅವರು ಕೂಡ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.
ರಜನಿಕಾಂತ್ ಅವರು ‘ಜೈಲರ್ 2’ ಚಿತ್ರಕ್ಕಾಗಿ ಕೇರಳದಲ್ಲಿ 20 ದಿನಗಳ ಕಾಲ ಶೂಟ್ ಮಾಡಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಅವರು ‘ಜೈಲರ್ 2’ ಚಿತ್ರದ ಶೂಟ್ ಆರಂಭಿಸಿದರು. ಮೊದಲ ಹಂತದ ಶೂಟ್ ಚೆನ್ನೈನಲ್ಲಿ ನಡೆದರೆ ಎರಡನೇ ಹಂತದ ಶೂಟ್ ಕೇರಳದಲ್ಲಿ ನಡೆದಿದೆ.
ಜನವರಿ 14ರಂದು ತಂಡದವರು ‘ಜೈಲರ್ 2’ ಬಗ್ಗೆ ಅಪ್ಡೇಟ್ ಕೊಟ್ಟರು. ಸಂಕ್ರಾಂತಿ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಯಿತು. ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ 650 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದರು. ಎರಡನೇ ಪಾರ್ಟ್ ಕೂಡ ಅವರೇ ಡೈರೆಕ್ಟ್ ಮಾಡುತ್ತಾರೆ ಅನಿರುದ್ಧ್ ರವಿಚಂದ್ರನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
Thalaivar at Attapadi (Kerala)! ✨#Jailer2 shoot 🔥🔥🔥#Coolie #Rajinikanth𓃵 pic.twitter.com/sK0scWOkjF
— 𝐑𝐀𝐓𝐇𝐄𝐄𝐒𝐇 𝐑𝐀𝐉𝐈𝐍𝐈 🤘ॐ†☪ (@realrawrathesh1) April 11, 2025
ಶಿವರಾಜ್ಕುಮಾರ್ ಅವರು ‘ಜೈಲರ್’ನಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಕ್ಲೈಮ್ಯಾಕ್ಸ್ನಲ್ಲಿ ಬಂದು ಅವರು ಇಡೀ ಚಿತ್ರ ಆವರಿಸಿಕೊಂಡರು. ಎರಡನೇ ಪಾರ್ಟ್ನಲ್ಲೂ ಅವರಿಗೆ ಪ್ರಮುಖ ಪಾತ್ರ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರಮ್ಯಾ ಕೃಷ್ಣ ಅವರು ರಜನಿ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲೂ ಅವರ ಪಾತ್ರ ಮುಂದುವರಿದಿದೆ. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ನಲ್ಲಿ ಬಿಡುಗಡೆ ಕಾಣಲಿದೆ ಅನ್ನೋದು ವಿಶೇಷ. ಶಿವಣ್ಣ ನಟನೆಯ ‘45’ ಚಿತ್ರಕ್ಕೆ ಈ ಸಿನಿಮಾ ಸ್ಪರ್ಧೆ ಮಾಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ