ಕೊವಿಡ್​ನಿಂದ ಗುಣಮುಖರಾದ ಎರಡೇ ದಿನಕ್ಕೆ ಗಾಯಕ ಅರಿಜೀತ್​​ ಸಿಂಗ್​ ತಾಯಿ ನಿಧನ

Arjit Singh Mother Passed Away: ಅದಿತಿ ಸಿಂಗ್​ ಅವರಿಗೆ ಇತ್ತೀಚೆಗೆ ಕೊವಿಡ್​ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಇತ್ತೀಚೆಗೆ ಗುಣಮುಖರಾಗಿದ್ದರಿಂದ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದರು

ಕೊವಿಡ್​ನಿಂದ ಗುಣಮುಖರಾದ ಎರಡೇ ದಿನಕ್ಕೆ ಗಾಯಕ ಅರಿಜೀತ್​​ ಸಿಂಗ್​ ತಾಯಿ ನಿಧನ
ತಾಯಿ ಜತೆ ಅರ್ಜಿತ್​ ಸಿಂಗ್​

Updated on: May 20, 2021 | 8:39 PM

ಕೊವಿಡ್​ನಿಂದ ಮೃತಪಡುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಾಲಿವುಡ್​, ಸ್ಯಾಂಡಲ್​ವುಡ್, ಕಾಲಿವುಡ್​ ನಟ,ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಕೊವಿಡ್​ಗೆ ಬಲಿಯಾಗುತ್ತಿದ್ದಾರೆ. ಈಗ ಖ್ಯಾತ ಗಾಯಕ ಅರಿಜೀತ್​​ ಸಿಂಗ್​ ತಾಯಿ ಅದಿತಿ ಸಿಂಗ್​ ಕೂಡ ನಿಧನ ಹೊಂದಿದ್ದಾರೆ. ವಿಚಿತ್ರ ಎಂದರೆ, ಕೊವಿಡ್​ನಿಂದ ಗುಣಮುಖರಾದ ಕೆಲವೇ ದಿನದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಅದಿತಿ ಸಿಂಗ್​ ಅವರಿಗೆ ಇತ್ತೀಚೆಗೆ ಕೊವಿಡ್​ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಇತ್ತೀಚೆಗೆ ಗುಣಮುಖರಾಗಿದ್ದರಿಂದ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದರು. ಆದಾಗ್ಯೂ, ಅವರು ಬದುಕಲು ಸಾಧ್ಯವಾಗಿಲ್ಲ.

ಅದಿತಿ ಸಿಂಗ್​ ಅವರಿಗೆ 52 ವರ್ಷ ವಯಸ್ಸಾಗಿತ್ತು. ಸೋಮವಾರ ಪರೀಕ್ಷೆಗೆ ಒಳಗಾದಾಗ ಅವರಿಗೆ ಕೊವಿಡ್​ ನೆಗೆಟಿವ್​ ಬಂದಿತ್ತು. ಈಗ ಸೆರೆಬ್ರಲ್ ಸ್ಟ್ರೋಕ್ ಉಂಟಾದ ಹಿನ್ನೆಲೆಯಲ್ಲಿ ಅವರು ಬುಧವಾರ ನಿಧನಕ್ಕೆ ಒಳಗಾಗಿದ್ದಾರೆ. ಬುಧವಾರ ರಾತ್ರಿ 11 ಗಂಟೆಗೆ ಅದಿತಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಸೆರೆಬ್ರಲ್ ಸ್ಟ್ರೋಕ್ ಕಾರಣ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್ಗೆ ಬಲಿಯಾದರು. ತಮಿಳು ನಟ ಪಾಂಡು ಅವರು ಮೇ 6ರಂದು ನಿಧನರಾದರು. ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಪೋಸ್ಟರ್ ಡಿಸೈನರ್ ಮಸ್ತಾನ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.

ಇದನ್ನೂ ಓದಿ: ‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್​​ಗೆ ಟ್ವಿಸ್ಟ್​; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

Published On - 8:17 pm, Thu, 20 May 21