ಸಿನಿಮಾ ಆಗಲಿದೆ ಸೋನಿಯಾ ಗಾಂಧಿ ಜೀವನ ಕತೆ: ನಿರ್ಮಾಣ ಯಾರದ್ದು?

Sonia Gandhi book 'Belonging' Memoir & Life Journey: ಸೋನಿಯಾ ಅವರ ಈ ನೆನಪಿನ ಚರಿತ್ರೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ಬಗ್ಗೆ ಗುರುವಾರ ಘೋಷಣೆ ಮಾಡಿದ್ದಾರೆ.

ಸಿನಿಮಾ ಆಗಲಿದೆ ಸೋನಿಯಾ ಗಾಂಧಿ ಜೀವನ ಕತೆ: ನಿರ್ಮಾಣ ಯಾರದ್ದು?
Sonia Gandhi Life

Updated on: Nov 12, 2026 | 5:38 PM

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೆನಪಿನ ಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸೋನಿಯಾ ಅವರ ಈ ನೆನಪಿನ ಚರಿತ್ರೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ಬಗ್ಗೆ ಗುರುವಾರ ಘೋಷಣೆ ಮಾಡಿದ್ದಾರೆ.

ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜಗ್ಗಾ ರೆಡ್ಡಿ ಈ ಘೋಷಣೆ ಮಾಡಿದ್ದು, ಚಿತ್ರದ ನಿರ್ಮಾಣಕ್ಕೆ ಮುಂದೆ ಬಂದು ಕೊಡುಗೆ ನೀಡುವಂತೆ ಸಂಗಾರೆಡ್ಡಿ ಕ್ಷೇತ್ರದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂತಿ ಆಂಜನೇಯಲು, ಸೋನಿಯಾ ಗಾಂಧಿ ಅವರ ಜೀವನ ಕುರಿತಾದ ಸಿನಿಮಾ ನಿರ್ಮಾಣಕ್ಕಾಗಿ 2 ಕೋಟಿ ಹಣದ ಕೊಡುಗೆಯನ್ನು ನೀಡುವುದಾಗಿ ಘೋಷಣೆ ಮಾಡಿದರು.

Loading...

ಚಿತ್ರ ನಿರ್ಮಾಣವನ್ನು ಪ್ರಾರಂಭಿಸಲು 50 ಸದಸ್ಯರ ಸಮಿತಿಯನ್ನು ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದರು. ಈ ಸಮಿತಿಯ ಉಸ್ತುವಾರಿಯನ್ನು ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ವಹಿಸಿಕೊಳ್ಳಲಿದ್ದಾರೆ. ನಾಯಕರು ನಿಧಿ ಸಂಗ್ರಹಿಸುವಂತೆ ಕರೆ ನೀಡಿದ ಅವರು, ‘ನೀವು ಚುನಾವಣೆಗಳಿಗಾಗಿ ಖರ್ಚು ಮಾಡುತ್ತೀರಿ ಅಲ್ಲವೇ? ಇದನ್ನು ಅಂಥದ್ದೇ ಒಂದು ಖರ್ಚು ಎಂದು ಪರಿಗಣಿಸಿ. ಬಜೆಟ್ ಅನ್ನು ಒಟ್ಟುಗೂಡಿಸೋಣ ಮತ್ತು ಒಬ್ಬ ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡೋಣ’ ಎಂದು ಕಾರ್ಯಕರ್ತರಿಗೆ ಹೇಳಿದರು.

ಇದನ್ನೂ ಓದಿ:ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?

ಸಿದ್ಧತೆಗಳು ಪೂರ್ಣಗೊಂಡ ನಂತರ, ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸುವುದಾಗಿ ಅವರು ತಿಳಿಸಿದರು. ಸೋನಿಯಾ ಗಾಂಧಿ ಅವರ ಆತ್ಮಚರಿತೆಯ ಪ್ರತಿಗಳನ್ನು ತರಿಸಿ ಪಕ್ಷದ ಕಾರ್ಯಕರ್ತರಿಗೆ ಹಂಚಲಾಗುವುದು, ಇದರಿಂದ ಅವರ ಜೀವನ ಮತ್ತು ಅನುಭವಗಳನ್ನು ಕಾರ್ಯಕರ್ತರು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದೂ ಜಗ್ಗಾ ರೆಡ್ಡಿ ಹೇಳಿದರು.

ಇಂದಿರಾ ಗಾಂಧಿಯವರ ಸೊಸೆಯಾಗಿ, ರಾಜೀವ್ ಗಾಂಧಿಯವರ ಪತ್ನಿಯಾಗಿ ಮತ್ತು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ತಾಯಿಯಾಗಿ ಸೋನಿಯಾ ಗಾಂಧಿ ಅವರ ಜೀವನದ ವಿವಿಧ ಮಜಲುಗಳನ್ನು ಈ ಚಿತ್ರವು ಚಿತ್ರೀಕರಿಸಲಿದೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಹತ್ಯೆಗಳ ನಂತರ ಆ ಕುಟುಂಬ ಎದುರಿಸಿದ ದುರಂತಗಳು, ಆ ಬಳಿಕ ಸೋನಿಯಾ ಗಾಂಧಿ ಅನುಭವಿಸಿದ ಕಷ್ಟಗಳು, ಅವರು ರಾಹುಲ್ ಮತ್ತು ಪ್ರಿಯಾಂಕರನ್ನು ಬೆಳೆಸಿದ ರೀತಿ ಹಾಗೂ ಅವರ ರಾಜಕೀಯ ಪ್ರಯಾಣವನ್ನು ಈ ಚಿತ್ರವು ಪ್ರೇಕ್ಷಕರ ಮುಂದೆ ತರಲಿದೆ ಎಂದು ಅವರು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Thu, 12 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us