IPL​ ರದ್ದಾದ ಬಳಿಕ ಆಸೀಸ್​ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್​ಗೆ ಮನವಿ; ನಟನ ಉತ್ತರ ಏನು?

Sonu Sood: ‘ಈಗಲೇ ನಿಮ್ಮ ಬ್ಯಾಗ್​ಗಳನ್ನು ಪ್ಯಾಕ್​ ಮಾಡಿಕೊಳ್ಳಿ’ ಎಂದು ಟ್ವೀಟ್​ ಮಾಡುವ ಮೂಲಕ ತಾವು ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸಲು ಸಿದ್ಧ ಎಂದು ಸೋನು ಸೂದ್​ ತಿಳಿಸಿದ್ದಾರೆ.

IPL​ ರದ್ದಾದ ಬಳಿಕ ಆಸೀಸ್​ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್​ಗೆ ಮನವಿ; ನಟನ ಉತ್ತರ ಏನು?
ಸೋನು ಸೂದ್​
Follow us
ಮದನ್​ ಕುಮಾರ್​
|

Updated on: May 07, 2021 | 11:36 AM

ನಟ ಸೋನು ಸೂದ್​ ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕಳೆದ ವರ್ಷ ಲಾಕ್​ಡೌನ್​ ವೇಳೆ ಶುರುವಾದ ಅವರ ಸಮಾಜಸೇವೆ ಇಂದಿಗೂ ಮುಂದುವರಿದಿದೆ. ಲಾಕ್​ಡೌನ್​ನಿಂದಾಗಿ ತಮ್ಮ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗದೇ ಇರುವ ಎಷ್ಟೋ ಜನರಿಗೆ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್​ ರಿಯಲ್​ ಹೀರೋ ಎನಿಸಿಕೊಂಡಿದ್ದರು. ಕೊರೊನಾ ಹಾವಳಿಯಿಂದ ತತ್ತರಿಸಿರುವ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಐಪಿಎಲ್​ ರದ್ದಾದ ಬಳಿಕ ತಮ್ಮ ದೇಶಕ್ಕೆ ಮರಳಲು ಕಷ್ಟಪಡುತ್ತಿರುವ ಆಸ್ಟ್ರೇಲಿಯಾ ಆಟಗಾರರಿಗೂ ಕೂಡ ಸಹಾಯ ಮಾಡಿ ಎಂದು ಈಗ ಸೋನು ಸೂದ್​ಗೆ ಬೇಡಿಕೆ ಇಡಲಾಗಿದೆ!

ನೆಟ್ಟಿಗರೊಬ್ಬರು ಸೋನು ಸೂದ್​ಗೆ ಈ ಬಗ್ಗೆ ಟ್ವಿಟರ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ‘ಆಸ್ಟ್ರೇಲಿಯಾ ಆಟಗಾರರರನ್ನು ಮನೆಗೆ ಕಳಿಸಲು ಸಹಾಯ ಮಾಡುತ್ತೀರಾ ಸೋನು ಭಾಯ್​?’ ಎಂದು ಕೇಳಲಾಗಿದೆ. ಅದರ ಜೊತೆ ಅವರು ಹಂಚಿಕೊಂಡಿರುವ ಕಾರ್ಟೂನ್​ ಗಮನ ಸೆಳೆಯುತ್ತಿದೆ. ‘ನಮ್ಮನ್ನು ಮನೆಗೆ ಕಳಿಸಲು ನೀವು ಮಧ್ಯೆ ಪ್ರವೇಶಿಸಬೇಕು’ ಎಂದು ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್​ ವಾರ್ನರ್​, ಗ್ಲೆನ್​ ಮ್ಯಾಕ್ಸ್​ವೆಲ್​ ಹಾಗೂ ಸ್ಟೀವ್​ ಸ್ಮಿತ್​ ಅವರು ಸೋನುಗೆ ಮೆಸೇಜ್​ ಮೂಲಕ ವಿನಂತಿ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಕಾರ್ಟೂನ್​ ರಚಿಸಲಾಗಿದೆ.

ಈ ಟ್ವೀಟ್​ಗೆ ಸೋನು ಸೂದ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗಲೇ ನಿಮ್ಮ ಬ್ಯಾಗ್​ಗಳನ್ನು ಪ್ಯಾಕ್​ ಮಾಡಿಕೊಳ್ಳಿ’ ಎಂದು ಟ್ವೀಟ್​ ಮಾಡುವ ಮೂಲಕ ತಾವು ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಆದರೆ ಇದೆಲ್ಲವೂ ಒಂದು ತಮಾಷೆಯ ಸಂಭಾಷಣೆ. ಆ ಕಾರಣಕ್ಕಾಗಿಯೇ ಅವರು ಈ ಟ್ವೀಟ್​ನಲ್ಲಿ ಜೋರಾಗಿ ನಗುವ ಎಮೋಜಿಗಳನ್ನು ಬಳಸಿದ್ದಾರೆ. ಸದ್ಯ ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ.

ಭಾರತದಲ್ಲಿ ಕೊರೊನಾ ವೈರಸ್​ ಹಾವಳಿ ಹೆಚ್ಚಿರುವ ಕಾರಣ ಭಾರತದಿಂದ ಆಸ್ಟ್ರೇಲಿಯಾಗೆ ಬರುವವರ ಮೇಲೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಐಪಿಎಲ್​ ರದ್ದಾದ ಬಳಿಕ ತಮ್ಮ ತವರಿಗೆ ಮರಳಲು ಆಸ್ಟ್ರೇಲಿಯಾ ಆಟಗಾರರಿಗೆ ಕಷ್ಟ ಆಗುತ್ತಿದೆ. ಸದ್ಯ ಅವರನ್ನು ಬೇರೆ ದೇಶಗಳಿಗೆ ಕಳಿಸಿ, ಅಲ್ಲಿ ನಿಗದಿತ ದಿನಗಳವರೆಗೆ ಕ್ವಾರಂಟೈನ್​ನಲ್ಲಿ ಇರಿಸಿದ ನಂತರ ಆಸ್ಟ್ರೇಲಿಯಾಗೆ ಕಳಿಸುವ ಬಗ್ಗೆ ಪ್ರಯತ್ನಗಳು ಜಾರಿಯಲ್ಲಿವೆ.

ಇದನ್ನೂ ಓದಿ:

ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

ವಿವರ ಕಳುಹಿಸು ಸಹೋದರ.. 10 ನಿಮಿಷದಲ್ಲಿ ಸಿಲಿಂಡರ್ ತಲುಪಿಸುತ್ತೇನೆ! ಸುರೇಶ ರೈನಾ ಕಷ್ಟಕ್ಕೆ ನೆರವಾದ ಸೋನು ಸೂದ್

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ