ಮತ್ತೆ ಭರ್ಜರಿ ಸ್ಟೆಪ್ ಹಾಕಿದ ಕನ್ನಡದ ಬೆಡಗಿ ಶ್ರೀಲೀಲಾ; ನಟಿಯ ವಯ್ಯಾರ ನೋಡಿ..
ನಟಿ ಶ್ರೀಲೀಲಾ ಅವರು ಕನ್ನಡದ ‘ಕಿಸ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಬಳಿಕ ಅವರಿಗೆ ತೆಲುಗು ಚಿತ್ರದಿಂದ ಆಫರ್ ಬಂತು. ಈಗ ಅವರ ಕೈಯಲ್ಲಿ ಎಂಟು ಸಿನಿಮಾಗಳಿವೆ. ಈ ಪೈಕಿ ‘ಸ್ಕಂದ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬೋಯಪತಿ ಶ್ರೀನು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಕಳೆದ ವರ್ಷ ರಿಲೀಸ್ ಆದ ರವಿ ತೇಜ ಹಾಗೂ ಶ್ರೀಲೀಲಾ (Sreeleela) ನಟನೆಯ ‘ಧಮಾಕ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಶ್ರೀಲೀಲಾಗೆ ಬೇಡಿಕೆ ಹೆಚ್ಚಿತು. ಸದ್ಯ ಹಲವು ತೆಲುಗು ಪ್ರಾಜೆಕ್ಟ್ನಲ್ಲಿ ಅವರು ಬ್ಯುಸಿ ಇದ್ದಾರೆ. ನಟಿ ಶ್ರೀಲೀಲಾ ಅವರು ಡ್ಯಾನ್ಸ್ ಮಾಡೋಕೂ ಸೈ ಎನ್ನುವವರು. ಅವರ ನಟನೆಯ ‘ಸ್ಕಂದ’ ಚಿತ್ರದ ಹೊಸ ಸಾಂಗ್ ‘ಗಂಡರಬಾಯ್..’ (Gandarabai Song) ಲಿರಿಕಲ್ ಹಾಡಿನ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಶ್ರೀಲೀಲಾ ಹಾಗೂ ರಾಮ್ ಪೋತಿನೇನಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಫುಲ್ ವಿಡಿಯೋ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ನಟಿ ಶ್ರೀಲೀಲಾ ಅವರು ಕನ್ನಡದ ‘ಕಿಸ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಬಳಿಕ ಅವರಿಗೆ ತೆಲುಗು ಚಿತ್ರದಿಂದ ಆಫರ್ ಬಂತು. ಈಗ ಅವರ ಕೈಯಲ್ಲಿ ಎಂಟು ಸಿನಿಮಾಗಳಿವೆ. ಈ ಪೈಕಿ ‘ಸ್ಕಂದ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ‘ಅಖಂಡ’ದಂಥ ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಬೋಯಪತಿ ಶ್ರೀನು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಾಂಗ್ ಮೂಲಕ ಸದ್ದು ಮಾಡಲು ರೆಡಿ ಆಗಿದೆ.
‘ಗಂಡರಬಾಯ್..’ ಎಂದು ರಾಮ್ ಹಾಗೂ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಕೆಲವು ಸ್ಟಿಲ್ಸ್ ಹಾಗೂ ದೃಶ್ಯಗಳನ್ನು ಸೇರಿಸಿ ಪ್ರೋಮೋ ಮಾಡಲಾಗಿದೆ. ಈ ಪ್ರೋಮೋ ಗಮನ ಸೆಳೆಯುತ್ತಿದೆ. ಸಾಂಗ್ ಸೂಪರ್ ಹಿಟ್ ಆಗುವ ಎಲ್ಲಾ ಸೂಚನೆ ಸಿಕ್ಕಿದೆ. ಇತ್ತೀಚೆಗೆ ರಿಲೀಸ್ ಆದ ‘ಕಾವಾಲಾ..’ ಹಾಡು ಸಖತ್ ಸದ್ದು ಮಾಡಿದೆ. ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಈ ಹಾಡು ಫೇಮಸ್ ಆಗಿದೆ. ಈಗ ‘ಗಂಡರಬಾಯ್.. ಹಾಡು ಕೂಡ ಸದ್ದು ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮತ್ತೊಮ್ಮೆ ಡ್ಯಾನ್ಸ್ ಫ್ಲೋರ್ಗೆ ಬೆಂಕಿ ಹಚ್ಚಿದ ಶ್ರೀಲೀಲಾ ಸ್ಕಂದ; ಸಿನಿಮಾ ಹಾಡು ಬಿಡುಗಡೆ
‘ಸ್ಕಂದ’ ಸಿನಿಮಾ ಸೆಪ್ಟೆಂಬರ್ 15ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಪ್ರಚಾರ ನೀಡುವ ಕೆಲಸವನ್ನು ತಂಡ ಪ್ರಾರಂಭಿಸಿದೆ. ಶ್ರೀನಿವಾಸ ಚಿತ್ತುರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಎಸ್. ಥಮನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




