Mahesh Babu: ಅಷ್ಟು ಸುಲಭಕ್ಕೆ ಸೆಟ್ಟೇರಲ್ಲ ಮಹೇಶ್ ಬಾಬು-ರಾಜಮೌಳಿ ಸಿನಿಮಾ

|

Updated on: Jul 11, 2023 | 10:29 AM

ಮಹೇಶ್ ಬಾಬು ಅವರು ಯಾವ ಚಿತ್ರಕ್ಕೂ ಹೆಚ್ಚಿನ ಸಿದ್ಧತೆಯನ್ನೇನು ಮಾಡಿಕೊಳ್ಳುವುದಿಲ್ಲ. ಆದರೆ, ರಾಜಮೌಳಿ ಚಿತ್ರಕ್ಕಾಗಿ ಅವರು ಒಂದಷ್ಟು ತಯಾರಿ ಮಾಡಿಕೊಳ್ಳಲೇಬೇಕಿದೆ.

Mahesh Babu: ಅಷ್ಟು ಸುಲಭಕ್ಕೆ ಸೆಟ್ಟೇರಲ್ಲ ಮಹೇಶ್ ಬಾಬು-ರಾಜಮೌಳಿ ಸಿನಿಮಾ
ಮಹೇಶ್ ಬಾಬು-ರಾಜಮೌಳಿ
Follow us on

ಎಸ್​ಎಸ್ ರಾಜಮೌಳಿ (SS Rajamouli) ಅವರು ನಿರ್ದೇಶನಕ್ಕೆ ಇಳಿದರೆ ಅದಕ್ಕೆ ಒಂದಷ್ಟು ವರ್ಷಗಳ ಸಿದ್ಧತೆ ಇರುತ್ತದೆ. ಸಂಪೂರ್ಣವಾಗಿ ಸ್ಕ್ರಿಪ್ಟ್ ರೆಡಿ ಇಟ್ಟುಕೊಂಡೇ ಅವರು ಶೂಟಿಂಗ್​ಗೆ ಇಳಿಯುತ್ತಾರೆ. ಪ್ರತಿ ಹೀರೋ ಕೂಡ ರಾಜಮೌಳಿ ಹೇಳಿದಂತೆ ಕೇಳಲೇಬೇಕು. ಅವರು ಹೇಳಿದ ರೀತಿ ದೇಹವನ್ನು ಹುರಿಗೊಳಿಸಿಕೊಳ್ಳಬೇಕು. ಒಂದಷ್ಟು ಸ್ಟಂಟ್​ ಕಲಿಯಬೇಕು. ಈಗ ರಾಜಮೌಳಿ ಅವರು ಮಹೇಶ್ ಬಾಬು (Mahesh Babu) ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸುಲಭಕ್ಕೆ ಸೆಟ್ಟೇರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ. ಅದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಹೇಶ್ ಬಾಬು ಅವರು ಪ್ರತಿ ಚಿತ್ರದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಲುಕ್ ಅಷ್ಟೇ ಬದಲಾಗುತ್ತದೆಯೇ ಹೊರತು, ದೇಹದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅವರು ಯಾವ ಚಿತ್ರಕ್ಕೂ ಹೆಚ್ಚಿನ ಸಿದ್ಧತೆಯನ್ನೇನು ಮಾಡಿಕೊಳ್ಳುವುದಿಲ್ಲ. ಆದರೆ, ರಾಜಮೌಳಿ ಚಿತ್ರಕ್ಕಾಗಿ ಅವರು ಒಂದಷ್ಟು ತಯಾರಿ ಮಾಡಿಕೊಳ್ಳಲೇಬೇಕಿದೆ. ಇದಕ್ಕಾಗಿ ಅವರು ಒಂದಷ್ಟು ಸಮಯ ಮೀಸಲಿಡಲಿದ್ದಾರೆ ಎಂದು ವರದಿ ಆಗಿದೆ. ಅವರು ಈ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ಮಹೇಶ್ ಬಾಬು ಬ್ಯುಸಿ ಇದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಸಿದ್ಧತೆಗೆ ಅವರು ಬ್ಯಾಂಕಾಕ್​ಗೆ ತೆರಳಲಿದ್ದಾರೆ. ಮಿಕ್ಸ್ ಮಾರ್ಷಲ್ ಆರ್ಟ್ಸ್​, ಟ್ರೆಕ್ಕಿಂಗ್ ಸೇರಿ ಅನೇಕ ಕಲೆ​ಗಳನ್ನು ಅಲ್ಲಿ ಅವರು ಕಲಿತು ಬರಲಿದ್ದಾರೆ. ಎಷ್ಟೇ ಕಷ್ಟ ಆದರೂ ಈ ಸಿದ್ಧತೆ ಬೇಕೇಬೇಕು ಎನ್ನುವ ಸೂಚನೆ ಮಹೇಶ್​ ಬಾಬುಗೆ ರಾಜಮೌಳಿ ಕಡೆಯಿಂದ ಸಿಕ್ಕಿದೆ.

ಇದನ್ನೂ ಓದಿ: ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ನಿಜವಾದ ವಯಸ್ಸೆಷ್ಟು?

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ತರಬೇತಿ ಆರಂಭ ಆಗಲಿದೆ. ಹಾಲಿವುಡ್ ಕೊರಿಯೋಗ್ರಾಫರ್ ಹಾಗೂ ನುರಿತ ಸ್ಟಂಟ್ ತಂಡ ಬ್ಯಾಂಕಾಕ್​ನಲ್ಲಿ ಬೀಡು ಬಿಡಲಿದೆ. ಮೂರು ತಿಂಗಳ ಕಾಲ ಮಹೇಶ್ ಬಾಬು ಅವರಿಗೆ ತರಬೇತಿ ನೀಡುವ ಕೆಲಸ ಆಗಲಿದೆ. ಆ ಬಳಿಕವಷ್ಟೇ ಶೂಟಿಂಗ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ