Updated on: Jul 11, 2023 | 11:11 AM
ನಂದಮೂರಿ ಬಾಲಕೃಷ್ಣ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಅಭಿಮಾನಿಗಳನ್ನು ಕಂಡರೆ ಸಾಕಷ್ಟು ಪ್ರೀತಿ ಇದೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.
ಬಾಲಯ್ಯ ಅವರು ಇತ್ತೀಚೆಗೆ ಪತ್ನಿ ವಸುಂಧರಾ ಅವರೊಂದಿಗೆ ಅಮೆರಿಕಕ್ಕೆ ತೆರಳಿದ್ದಾರೆ. ಈ ವೇಳೆ ಅವರ ಅಭಿಮಾನಿಯೊಬ್ಬರು ಆಗಮಿಸಿ, ತಮ್ಮ ಬರ್ತ್ಡೇ ಎಂದು ಹೇಳಿಕೊಂಡಿದ್ದಾರೆ.
ಬಾಲಯ್ಯ ಅವರು ತಡಮಾಡದೇ ಆ ಯುವತಿಯ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಭಾಗಿ ಆಗಿದ್ದಾರೆ. ಕೇಕ್ ಕತ್ತರಿಸಿ ಆ ಯುವತಿಗೆ ಶುಭ ಕೋರಿದ್ದಾರೆ.
ಬಾಲಯ್ಯನ ಅಭಿಮಾನಿಗೆ ಇದು ತಮ್ಮ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವ ಸಿಹಿಯಾದ ಜನ್ಮದಿನ ಆಯಿತು. ಈ ಫೋಟೋಗಳನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಬಾಲಯ್ಯ ಅವರಿಂದ ಆಶೀರ್ವಾದ ಪಡೆದ ಯುವತಿ
ಬಾಲಯ್ಯ ಸದ್ಯ ಅನಿಲ್ ರವಿಪುಡಿ ನಿರ್ದೇಶನದಲ್ಲಿ ‘ಭಗವಂತ್ ಕೇಸರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
‘NBK109’ ಅನೌನ್ಸ್ ಆಗಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿಯೂ ಫ್ಯಾನ್ಸ್ ಕಾದಿದ್ದಾರೆ.