SS Rajamouli: ಡಬಲ್ ರೋಲ್​ನಲ್ಲಿ ಮಿಂಚಿದ ನಟ ಎಸ್​.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್​ಡೇಟ್?

ನಿರ್ದೇಶನದಲ್ಲಿ ಪಳಗಿರುವ ರಾಜಮೌಳಿ ಅವರಿಗೆ ಹೇಗೆ ನಟಿಸಬೇಕು ಎಂಬುದು ಗೊತ್ತಿದೆ. ಈ ಮೊದಲು ‘ಬಾಹುಬಲಿ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು

SS Rajamouli: ಡಬಲ್ ರೋಲ್​ನಲ್ಲಿ ಮಿಂಚಿದ ನಟ ಎಸ್​.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್​ಡೇಟ್?
ರಾಜಮೌಳಿ

Updated on: Jun 29, 2023 | 7:09 AM

ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪಡೆದ ನಂತರದಲ್ಲಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಈಗ ರಾಜಮೌಳಿ ಅವರು ಡಬಲ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಅಂದಹಾಗೆ, ರಾಜಮೌಳಿ ಅವರು ಯಾವುದೋ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರು ಅಭಿನಯಿಸಿರೋದು ಮೊಬೈಲ್ ಕಂಪೆನಿಯ ಜಾಹೀರಾತೊಂದರಲ್ಲಿ. ಈ ವಿಡಿಯೋ ವೈರಲ್ ಆಗುತ್ತಿದೆ. ರಾಜಮೌಳಿ ಅವರು ಸಿನಿಮಾದಲ್ಲೂ ನಟಿಸಬೇಕು ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ.

ರಾಜಮೌಳಿ ಅವರಿಗೆ ನಟನೆ ಹೊಸದೇನು ಅಲ್ಲ. ನಿರ್ದೇಶನದಲ್ಲಿ ಪಳಗಿರುವ ಅವರಿಗೆ ಹೇಗೆ ನಟಿಸಬೇಕು ಎಂಬುದು ಗೊತ್ತಿದೆ. ಈ ಮೊದಲು ‘ಬಾಹುಬಲಿ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು.  ಎಲ್ಲಕ್ಕಿಂತ ಮುಖ್ಯವಾಗಿ ಜನಪ್ರಿಯತೆ ಇದೆ. ಈ ಕಾರಣಕ್ಕೆ ಅನೇಕ ಕಂಪನಿಗಳು ಜಾಹೀರಾತಿಗಾಗಿ ರಾಜಮೌಳಿ ಅವರಿಗೆ ಆಹ್ವಾನ ನೀಡುತ್ತಿವೆ. ಈ ಪೈಕಿ ಮೊಬೈಲ್ ಕಂಪನಿಯ ಅಡ್ವಟೈಸ್​ಮೆಂಟ್​ನಲ್ಲಿ ಅವರು ನಟಿಸಿದ್ದಾರೆ.

ಇದರಲ್ಲಿ ರಾಜಮೌಳಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಮೌಳಿ ಅವರು ನಿರ್ದೇಶನದ ಜೊತೆ ನಟನೆಯಲ್ಲೂ ಬ್ಯುಸಿ ಆಗಬೇಕು ಎಂಬುದು ಅನೇಕರ ಕೋರಿಕೆ


ಇದನ್ನೂ ಓದಿ: SS Rajamouli: 10 ವರ್ಷ ಒಂದೇ ಪ್ರಾಜೆಕ್ಟ್​​ಮೇಲೆ ಕೆಲಸ ಮಾಡಲಿದ್ದಾರೆ ನಿರ್ದೇಶಕ ರಾಜಮೌಳಿ?

ಪ್ರತಿ ಸಿನಿಮಾ ತೆರೆಕಂಡ ಬಳಿಕ ಮುಂದಿನ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೆ ರಾಜಮೌಳಿ ಅವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ‘ಆರ್​ಆರ್​​ಆರ್​’ ರಿಲೀಸ್ ಆದ ಬಳಿಕ ಅವರ ಮುಂದಿನ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಮಹೇಶ್ ಬಾಬು ಜೊತೆ ಅವರು ಕೈ ಜೋಡಿಸಿದ್ದಾರೆ. ಇತ್ತೀಚೆಗೆ ರಾಜಮೌಳಿ ಅವರು ಕುಟುಂಬದ ಸಮೇತ ಪ್ರವಾಸಕ್ಕೆ ತೆರಳಿದ್ದರು. ತಮಿಳುನಾಡಿನ ತೂತುಕುಡಿಯಲ್ಲಿ ಅವರು ಸಮಯ ಕಳೆದಿದ್ದರು. ಈ ಫೋಟೋ ವೈರಲ್ ಆಗಿತ್ತು.

ಮಹೇಶ್ ಬಾಬು ಅವರ ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳು ವಿಳಂಬ ಆಗುತ್ತಿದೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕವೇ ಅವರು ರಾಜಮೌಳಿ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

 

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us