SS Rajamouli: 10 ವರ್ಷ ಒಂದೇ ಪ್ರಾಜೆಕ್ಟ್ಮೇಲೆ ಕೆಲಸ ಮಾಡಲಿದ್ದಾರೆ ನಿರ್ದೇಶಕ ರಾಜಮೌಳಿ?
ರಾಜಮೌಳಿ ಪ್ರತಿ ಚಿತ್ರಕ್ಕೆ 2-3 ವರ್ಷ ತೆಗೆದುಕೊಳ್ಳುತ್ತಾರೆ. ಒಂದೊಮ್ಮೆ ಮಹಾಭಾರತವನ್ನು ಅವರು 10 ಪಾರ್ಟ್ನಲ್ಲಿ ತರಬೇಕಾದರೆ ಕನಿಷ್ಠ 10 ವರ್ಷ ಮುಡಿಪಿಡಬೇಕು.
ರಾಮಾಯಣ, ಮಹಾಭಾರತದ ಮೇಲೆ ಅನೇಕ ನಿರ್ದೇಶಕರು ಕಣ್ಣಿಟ್ಟಿದ್ದಾರೆ. ಈ ಮಹಾಕಾವ್ಯಗಳನ್ನು ಇಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳು ಬಂದಿವೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್’ ತೆರೆಗೆ ಬರಲು ಸಿದ್ಧಗೊಂಡಿದ್ದು, ಇದು ರಾಮಾಯಣ ಆಧರಿಸಿದೆ. ಈಗ ಎಸ್.ಎಸ್. ರಾಜಮೌಳಿ (SS Rajamouli) ಅವರು ಮಹಾಭಾರತದ ಬಗ್ಗೆ ಮಾತನಾಡಿದ್ದಾರೆ. ಮಹಾಭಾರತವನ್ನು ತೆರೆಮೇಲೆ ತರಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ 10 ಪಾರ್ಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ. ಇದಕ್ಕಾಗಿ ರಾಜಮೌಳಿ ಎಷ್ಟು ವರ್ಷ ತೆಗೆದುಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ಫಿಕ್ಷನ್ ಲೋಕವನ್ನು ಕಟ್ಟಿಕೊಡುವಲ್ಲಿ ರಾಜಮೌಳಿ ಅವರದ್ದು ಎತ್ತಿದ ಕೈ. ‘ಈಗ’, ‘ಬಾಹುಬಲಿ’, ‘ಆರ್ಆರ್ಆರ್’ ಸೇರಿ ಅನೇಕ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈಗ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಬೇಕಿದೆ. ಈ ಚಿತ್ರಕ್ಕೆ ಮಹೇಶ್ ಬಾಬು ನಾಯಕ. ಈಗ ಅವರು ‘ಮಹಾಭಾರತ’ ಮಾಡುವ ಬಗ್ಗೆ ಮತ್ತೊಮ್ಮೆ ಆಸಕ್ತಿ ತೋರಿಸಿದ್ದಾರೆ.
ಮಹಾಭಾರತ ಆಧರಿಸಿ ಈ ಮೊದಲು ಧಾರಾವಾಹಿ ಹಾಗೂ ಸಿನಿಮಾ ಬಂದಿವೆ. ಹಿಂದಿಯಲ್ಲಿ ಮೂಡಿಬಂದ 260 ಎಪಿಸೋಡ್ಗಳ ಮಹಾಭಾರತ ಈಗಲೂ ಜನರಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಈಗ ರಾಜಮೌಳಿ ಅವರು 10 ಪಾರ್ಟ್ಗಳಲ್ಲಿ ಇದನ್ನು ದೊಡ್ಡ ಪರದೆಮೇಲೆ ತರುವ ಪ್ರಯತ್ನದಲ್ಲಿದ್ದಾರೆ.
ಮಹಾಭಾರತವನ್ನು ತೆರೆಮೇಲೆ ತರಬೇಕು ಎಂಬುದು ರಾಜಮೌಳಿ ಅವರ ಹಲವು ವರ್ಷಗಳ ಕನಸು. ಆದರೆ, ಬೇರೆ ಸಿನಿಮಾ ಕೆಲಸಗಳ ಕಾರಣದಿಂದ ಇದನ್ನು ಪರದೆಮೇಲೆ ತರೋಕೆ ಅವರಿಗೆ ಸಾಧ್ಯವಾಗಿಲ್ಲ. ಆದರೆ ಆ ಬಗ್ಗೆ ಅವರಿಗೆ ಇರುವ ಆಸಕ್ತಿ ಕಡಿಮೆ ಆಗಿಲ್ಲ. ರಾಜಮೌಳಿ ಪ್ರತಿ ಚಿತ್ರಕ್ಕೆ 2-3 ವರ್ಷ ತೆಗೆದುಕೊಳ್ಳುತ್ತಾರೆ. ಒಂದೊಮ್ಮೆ ಮಹಾಭಾರತವನ್ನು ಅವರು 10 ಪಾರ್ಟ್ನಲ್ಲಿ ತರಬೇಕಾದರೆ ಕನಿಷ್ಠ 10 ವರ್ಷ ಮುಡಿಪಿಡಬೇಕು. ಇದು ಅವರಿಂದ ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಅದ್ಭುತ ಸಿನಿಮಾ ಆಲೋಚನೆಯಲ್ಲಿದ್ದ ರಾಜಮೌಳಿಗೆ ಪ್ರವೇಶ ನಿರಾಕರಿಸಿತ್ತು ಪಾಕಿಸ್ತಾನ
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಅಪರೂಪದ ಸಾಧನೆ ಮಾಡಿದೆ. ಈ ಚಿತ್ರದ ‘ನಾಟು ನಾಟು..’ ಹಾಡು ಸೂಪರ್ ಹಿಟ್ ಆಯಿತು. ಆಸ್ಕರ್ ಕೂಡ ಗೆದ್ದಿತು. ಒಂದು ವರ್ಷಗಳ ಕಾಲ ಸಿನಿಮಾ ಯಶಸ್ಸನ್ನು ರಾಜಮೌಳಿ ಸಂಭ್ರಮಿಸಿದರು. ಈಗ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿದೆ. ತ್ರಿವಿಕ್ರಂ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಸಿನಿಮಾ ಕೆಲಸ ಮುಗಿದ ಬಳಿಕ ರಾಜಮೌಳಿ ಸಿನಿಮಾ ಕೆಲಸ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ