Richiee Kannada Movie: ಚಂದನವನದಲ್ಲಿ ಮತ್ತೆ ಕೇಳಿಸ್ತಿದೆ ‘ರಿಚ್ಚಿ’ ಹೆಸರು; ಕುನಾಲ್​ ಗಾಂಜಾವಾಲಾ ಹಾಡಿದ ಗೀತೆಯಿಂದ ಹೆಚ್ಚಲಿದೆ ಸದ್ದು

ಕನ್ನಡದಲ್ಲಿ ಕುನಾಲ್​ ಗಾಂಜಾವಾಲಾ ಅವರು ಅನೇಕ ಸೂಪರ್​ ಹಿಟ್​ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಈಗ ಅವರ ಕಂಠದಲ್ಲಿ ‘ರಿಚ್ಚಿ’ ಸಿನಿಮಾದ ಹಾಡು ಮೂಡಿಬಂದಿದ್ದು, ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ.

Richiee Kannada Movie: ಚಂದನವನದಲ್ಲಿ ಮತ್ತೆ ಕೇಳಿಸ್ತಿದೆ ‘ರಿಚ್ಚಿ’ ಹೆಸರು; ಕುನಾಲ್​ ಗಾಂಜಾವಾಲಾ ಹಾಡಿದ ಗೀತೆಯಿಂದ ಹೆಚ್ಚಲಿದೆ ಸದ್ದು
ರಮೋಲಾ, ರಿಚ್ಚಿ, ಕುನಾಲ್ ಗಾಂಜಾವಾಲಾ
Follow us
ಮದನ್​ ಕುಮಾರ್​
|

Updated on: May 10, 2023 | 11:00 AM

ರಕ್ಷಿತ್​ ಶೆಟ್ಟಿ ನಟನೆ, ನಿರ್ದೇಶನದ ‘ಉಳಿದವರು ಕಂಡಂತೆ’ ಸಿನಿಮಾ ನೋಡಿದ ಎಲ್ಲರಿಗೂ ರಿಚ್ಚಿ ಪಾತ್ರ ನೆನಪಿರುತ್ತದೆ. ಈಗ ಆ ವಿಚಾರ ನೆನಪಿಸಿಕೊಳ್ಳಲು ಒಂದು ಕಾರಣ ಇದೆ. ಗಾಂಧಿನಗರದಲ್ಲಿ ಮತ್ತೆ ‘ರಿಚ್ಚಿ’ ಹೆಸರು ಕೇಳಿಬರುತ್ತಿದೆ. ಈ ಬಾರಿಯ ವಿಷಯ ರಕ್ಷಿತ್​ ಶೆಟ್ಟಿಗೆ ಸಂಬಂಧಿಸಿದ್ದಲ್ಲ. ‘ರಿಚ್ಚಿ’ (Richiee) ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಒಂದಷ್ಟು ವಿಶೇಷತೆಗಳಿವೆ. ಈ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದನ ಹೆಸರೇ ರಿಚ್ಚಿ. ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ತಮ್ಮ ಹೆಸರನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿಸಿಕೊಂಡು ಅವರು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ರಿಚ್ಚಿ’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಮೇ 18ರಂದು ಬಿಡುಗಡೆ ಆಗಲಿರುವ ಈ ಹಾಡಿಗೆ ಕುನಾಲ್​ ಗಾಂಜಾವಾಲಾ (Kunal Ganjawala) ಅವರು ಧ್ವನಿ ನೀಡಿದ್ದಾರೆ ಎಂಬುದು ವಿಶೇಷ.

ಕನ್ನಡದಲ್ಲಿ ಕುನಾಲ್​ ಗಾಂಜಾವಾಲಾ ಅವರು ಅನೇಕ ಸೂಪರ್​ ಹಿಟ್​ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಈಗ ಅವರ ಕಂಠದಲ್ಲಿ ‘ರಿಚ್ಚಿ’ ಸಿನಿಮಾದ ಹಾಡು ಮೂಡಿಬಂದಿದ್ದು, ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈ ಹಾಡನ್ನು ಖ್ಯಾತ ಗೀತರಚನಕಾರ ಗೌಸ್ ಫೀರ್ ಬರೆದಿದ್ದಾರೆ. ಅದಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಖ್ಯಾತ ಕೋರಿಯೋಗ್ರಾಫರ್ ಚಿನ್ನಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಹಾಡಿಗಿದೆ. ಈ ಸಿನಿಮಾದಲ್ಲಿ ರಿಚ್ಚಿಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ರಮೋಲಾ ಅವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬಿಡುಗಡೆ ಮಾಡಲಾಗದ 40 ಹಾಡುಗಳು ನನ್ನಲ್ಲೇ ಇವೆ: ಪ್ರಿಯಾಂಕಾ ಚೋಪ್ರಾ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಅನುಭವ ಪಡೆದಿರುವ ರಿಚ್ಚಿ ಅವರು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿರುವ ಅವರು ಮೊದಲ ಹಾಡಿಗೆ ಜನರ ಪ್ರತಿಕ್ರಿಯೆ ಪಡೆಯಲು ಕಾದಿದ್ದಾರೆ. ಸಾಂಗ್​ ಬಿಡುಗಡೆ ಬಳಿಕ ಸಿನಿಮಾದ ರಿಲೀಸ್​ ದಿನಾಂಕವನ್ನು ಅನೌನ್ಸ್​ ಮಾಡಲಾಗುವುದು. ಅಣಜಿ ನಾಗರಾಜ್ ಅರ್ಪಿಸುವ ಈ ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ನಾನೇ ಕಾರಣ ಎಂದ ಅಜಯ್ ದೇವಗನ್

ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ಸಾಹಸ ದೃಶ್ಯಗಳು ಇರಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಜಿತ್ ಕುಮಾರ್ ಎನ್. ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ