10 ಪಾರ್ಟ್​ಗಳಲ್ಲಿ ಮಹಾಭಾರತ ಸಿನಿಮಾ, ಅದು ನನ್ನ ಕನಸು: ರಾಜಮೌಳಿ

Rajamouli: ಮಹಾಭಾರತ ಕತೆಯನ್ನು ಸಿನಿಮಾ ಮಾಡುವುದು ನಿರ್ದೇಶಕ ರಾಜಮೌಳಿಯ ಬಹು ವರ್ಷಗಳ ಆಸೆ. ಮಹಾಭಾರತ ಕತೆಯನ್ನು ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.

10 ಪಾರ್ಟ್​ಗಳಲ್ಲಿ ಮಹಾಭಾರತ ಸಿನಿಮಾ, ಅದು ನನ್ನ ಕನಸು: ರಾಜಮೌಳಿ
ರಾಜಮೌಳಿ
Follow us
ಮಂಜುನಾಥ ಸಿ.
|

Updated on: May 09, 2023 | 8:13 PM

ರಾಜಮೌಳಿ (Rajamouli), ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ (Director). ಅದರಲ್ಲಿಯೂ ಪೌರಾಣಿಕ ಕತೆಗಳನ್ನು ಅದ್ಧೂರಿಯಾಗಿ ತೆರೆಗೆ ಅಳವಡಿಸುವಲ್ಲಿ ರಾಜಮೌಳಿಯನ್ನು ಮೀರಿಸುವ ನಿರ್ದೇಶಕರು ಸದ್ಯಕ್ಕಂತೂ ಭಾರತದಲ್ಲಿಲ್ಲ. ಭಾರತದ ಶ್ರೀಮಂತ ಪೌರಾಣಿಕ ಕತೆಗಳಿಗೆ ಬೆಳ್ಳಿ ಪರದೆಯ ಮೇಲೆ ಸೂಕ್ತ ನ್ಯಾಯ ಒದಗಿಸಬಲ್ಲ ನಿರ್ದೇಶಕ ರಾಜಮೌಳಿ ಎಂಬುದು ಬಹುಜನರ ಅಭಿಪ್ರಾಯ. ಸ್ವತಃ ರಾಜಮೌಳಿ ಕೂಡ ಭಾರತದ ಪೌರಾಣಿಕ, ಸಾಂಸ್ಕೃತಿ ಕತೆಗಳ ದೊಡ್ಡ ಅಭಿಮಾನಿ. ಅದರಲ್ಲಿಯೂ ಮಹಾಭಾರತ ಕತೆ ರಾಜಮೌಳಿಗೆ ಬಹು ಅಚ್ಚು-ಮೆಚ್ಚು. ಮಹಾಭಾರತ ಕತೆಯನ್ನು ತೆರೆಗೆ ತರಬೇಕು ಎಂಬುದು ರಾಜಮೌಳಿಯ ಆಸೆ. ಈ ಬಗ್ಗೆ ಸ್ವತಃ ರಾಜಮೌಳಿ ಮಾತನಾಡಿದ್ದಾರೆ.

ಮಹಾಭಾರತ ನನ್ನ ನೆಚ್ಚಿನ ಕತೆ, ಕನಿಷ್ಟ 10 ಪಾರ್ಟ್​ಗಳಲ್ಲಿ ಆ ಕತೆಯನ್ನು ಸಿನಿಮಾ ಮಾಡಬಹುದು. ಅದು ನನ್ನ ಆಸೆ ಸಹ. ಈಗ ನಾನು ಮಾಡುತ್ತಿರುವ ಪ್ರಾಜೆಕ್ಟ್​ಗಳೆಲ್ಲವೂ ಮಹಾಭಾರತವನ್ನು ಸಿನಿಮಾ ಮಾಡುವೆಡೆಗೆ ನನ್ನ ಪಯಣ ಎಂದು ಹೇಳಬಹುದು ಎಂದಿದ್ದಾರೆ. ರಾಜಮೌಳಿ ಈ ಹಿಂದೆ ಹಲವು ಸಂದರ್ಶನಗಳಲ್ಲಿ ಮಹಾಭಾರತ ಹಾಗೂ ರಾಮಾಯಣ ಮಹಾಕಾವ್ಯಗಳ ಬಗ್ಗೆ ಮಾತನಾಡಿದ್ದಿದೆ. ಅವುಗಳನ್ನು ಸಿನಿಮಾ ಮಾಡುವುದು ತಮ್ಮ ಆಸೆ ಎಂದು ಸಹ ಅವರು ಹೇಳಿಕೊಂಡಿದ್ದಾರೆ.

ಈಗಾಗಲೇ ಬಾಹುಬಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಜಮೌಳಿ. ಇದೀಗ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಪಾತ್ರಗಳನ್ನು ಇರಿಸಿಕೊಂಡು ಮಾಡಿರುವ ಆರ್​ಆರ್​ಆರ್ ಸಿನಿಮಾ ಬಹಳ ದೊಡ್ಡ ಹಿಟ್ ಆಗಿದೆ. ಅಂತಾಷ್ಟ್ರೀಯ ಮಟ್ಟದಲ್ಲಿ ರಾಜಮೌಳಿಗೆ ಹೆಸರು ತಂದುಕೊಟ್ಟಿದೆ. ಆರ್​ಆರ್​ಆರ್ ಬಳಿಕ ರಾಜಮೌಳಿ ಅಂತರಾಷ್ಟ್ರೀಯ ಮಟ್ಟದ ನಿರ್ದೇಶಕ ಎಂದು ಹೆಸರುಗಳಿಸಿದ್ದಾರೆ.

ರಾಜಮೌಳಿ ಇದೀಗ ಮಹೇಶ್ ಬಾಬು ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಆರ್​ಆರ್​ಆರ್ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಮಹೇಶ್ ಬಾಬು ಜೊತೆಗೆ ರಾಜಮೌಳಿ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಆರ್​ಆರ್​ಆರ್ ಸಿನಿಮಾ ಊಹಿಸದ ಮಟ್ಟದಲ್ಲಿ ಹಿಟ್ ಆಗಿ ಅಂತರಾಷ್ಟ್ರೀಯ ಖ್ಯಾತಿ ಬಂದ ಬಳಿಕ ಮಹೇಶ್ ಬಾಬು ಸಿನಿಮಾದ ನಿರ್ಮಾಣ ಗುಣಮಟ್ಟದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ರಾಜಮೌಳಿ.

ಇದನ್ನೂ ಓದಿ:ಮಗನ ಚಿತ್ರಕ್ಕೆ ನಿರ್ದೇಶನ ಮಾಡಲು ರಾಜಮೌಳಿಗೆ ಇಲ್ಲ ಆಸಕ್ತಿ; ಓಪನ್​ ಆಗಿ ಹೇಳಿದ ಕಾರ್ತಿಕೇಯ

ಮಹೇಶ್ ಬಾಬು ಅವರೊಟ್ಟಿಗೆ ಸಾಹಸಮಯ ಪ್ರಯಾಣದ ಕತೆಯುಳ್ಳ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಡವಿಯಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ಸನ್ನಿವೇಶಗಳು ಸಾಕಷ್ಟಿವೆಯಂತೆ. ಭಾರತದ ಕೆಲವು ನಗರಗಳು, ಅಮೆಜಾನ್ ಕಾಡುಗಳು, ದುಬೈ ಮರುಭೂಮಿ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆ. ಸಿನಿಮಾದ ಚಿತ್ರೀಕರಣ, ಗುಣಮಟ್ಟದ ಕುರಿತಾಗಿ ಹಾಲಿವುಡ್​ನ ಕೆಲವು ಸಂಸ್ಥೆಗಳೊಟ್ಟಿಗೆ ರಾಜಮೌಳಿ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್