Urfi Javed: ಚೂಯಿಂಗ್​ ಗಮ್​ನಿಂದ ಸಿದ್ಧವಾಯ್ತು ಉರ್ಫಿ ಜಾವೇದ್​ ಬಟ್ಟೆ; ಅಸಹ್ಯ ಎಂದು ಕಮೆಂಟ್​ ಮಾಡಿದ ನೆಟ್ಟಿಗರು

Chewing Gum: ಇದನ್ನು ಸರಿಯಾಗಿ ಬಟ್ಟೆ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಯಾರೋ ಜಗಿದು ಬಿಟ್ಟ ಕೆಜಿಗಟ್ಟಲೆ ಚೂಯಿಂಗ್​ ಗಮ್​ಗಳನ್ನು ದೇಹಕ್ಕೆ ಅಂಟಿಸಿಕೊಂಡು ಬಂದಂತಿದೆ ಉರ್ಫಿ ಜಾವೇದ್ ವೇಷ.

Urfi Javed: ಚೂಯಿಂಗ್​ ಗಮ್​ನಿಂದ ಸಿದ್ಧವಾಯ್ತು ಉರ್ಫಿ ಜಾವೇದ್​ ಬಟ್ಟೆ; ಅಸಹ್ಯ ಎಂದು ಕಮೆಂಟ್​ ಮಾಡಿದ ನೆಟ್ಟಿಗರು
ಉರ್ಫಿ ಜಾವೇದ್
Follow us
ಮದನ್​ ಕುಮಾರ್​
|

Updated on: May 09, 2023 | 6:43 PM

ನಟಿ ಉರ್ಫಿ ಜಾವೇದ್​ (Urfi Javed) ಅವರ ಸಿನಿಮಾ, ಸೀರಿಯಲ್​ಗಿಂತಲೂ ಹೆಚ್ಚಾಗಿ ಸುದ್ದಿ ಆಗೋದು ಬಟ್ಟೆ ಕಾರಣಕ್ಕೆ. ಬೇರೆ ಯಾರೂ ಊಹಿಸದ ರೀತಿಯಲ್ಲಿ ಅವರು ಬಟ್ಟೆ ಧರಿಸುತ್ತಾರೆ. ಯಾವಾಗ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಅವರಿಗಿಂತ ಅವರ ಉಡುಗೆ ತೊಡುಗೆಯೇ (Urfi Javed Dress) ಹೆಚ್ಚು ಹೈಲೈಟ್​ ಆಗುತ್ತದೆ. ಪ್ರತಿ ದಿನವೂ ಸೋಶಿಯಲ್​ ಮೀಡಿಯಾದಲ್ಲಿ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗುತ್ತವೆ. ಎಷ್ಟೇ ಟ್ರೋಲ್​ ಮಾಡಿದರೂ ಉರ್ಫಿ ಜಾವೇದ್​ ಅವರು ತಲೆ ಕೆಡಿಸಿಕೊಳ್ಳುವವರಲ್ಲ. ದಿನದಿಂದ ದಿನಕ್ಕೆ ಅವರ ಪ್ರಯೋಗಗಳು ಮಿತಿ ಮೀರುತ್ತಿವೆ. ಈಗ ಅವರು ಚೂಯಿಂಗ್​ ಗಮ್​ (Chewing Gum) ಬಳಸಿ ಡ್ರೆಸ್​ ಮಾಡಿಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ. ‘ಚೀ ಅಹಸ್ಯ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ವಸ್ತ್ರ ವಿನ್ಯಾಸದಲ್ಲಿ ಉರ್ಫಿ ಜಾವೇದ್​ ಮಾಡಿದ ಪ್ರಯೋಗಗಳು ಒಂದೆರಡಲ್ಲ. ಕಸದ ಚೀಲ, ಗೋಣಿ ಚೀಲ, ಹಣ್ಣು, ತರಕಾರಿ, ಮೊಬೈಲ್​ ಫೋನ್​, ಗಾಜಿನ ಚೂರು, ಎಕ್ಸ್​ ರೇ ಶೀಟ್​, ಮಲ್ಲಿಗೆ ಹೂವು, ತಟ್ಟೆ-ಲೋಟ.. ಹೀಗೆ ಹಲವಾರು ವಸ್ತುಗಳನ್ನು ಬಳಸಿ ತಯಾರಿಸಿದ ಬಗೆಬಗೆಯ ಬಟ್ಟೆಗಳನ್ನು ಅವರು ಧರಿಸಿದ್ದುಂಟು. ಆದರೆ ಚೂಯಿಂಗ್​ ಗಮ್​ನಿಂದ ಬಟ್ಟೆ ಮಾಡಿಕೊಂಡಿರುವುದು ಇದೇ ಮೊದಲು.

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​
View this post on Instagram

A post shared by Uorfi (@urf7i)

ಇದನ್ನು ಸರಿಯಾಗಿ ಬಟ್ಟೆ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಯಾರೋ ಜಗಿದು ಬಿಟ್ಟ ಕೆಜಿಗಟ್ಟಲೆ ಚೂಯಿಂಗ್​ ಗಮ್​ಗಳನ್ನು ದೇಹಕ್ಕೆ ಅಂಟಿಸಿಕೊಂಡು ಬಂದಂತಿದೆ ಉರ್ಫಿ ಜಾವೇದ್​ ವೇಷ. ಇದನ್ನು ನೋಡಿದ ಬಹುತೇಕರಿಗೆ ವಾಕರಿಕೆ ಬಂದಿದೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ‘ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕೋ..’ ಎಂದು ಅನೇಕರು ಗೊಣಗಿಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಜಾವೇದ್​ ಬಟ್ಟೆ ನೋಡಿ ಹೌಹಾರಿದ ಹೋಟೆಲ್​ ಸಿಬ್ಬಂದಿ; ‘ನೋ ಎಂಟ್ರಿ’ ಎಂದಿದ್ದಕ್ಕೆ ನಟಿ ಗರಂ

ಯಾರು ಎಷ್ಟೇ ಟೀಕೆ ಮಾಡಿದರೂ ಉರ್ಫಿ ಜಾವೇದ್​ ಅವರ ಹುಚ್ಚಾಟಕ್ಕೆ ಬ್ರೇಕ್​ ಬಿದ್ದಿಲ್ಲ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 41 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳಿಗೆ ಲಕ್ಷಾಂತರ ಲೈಕ್ಸ್​ ಬರುತ್ತವೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳ ವಲಯದಲ್ಲೂ ಉರ್ಫಿ ಜಾವೇದ್​ ಬಗ್ಗೆ ಚರ್ಚೆ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಖ್ಯಾತಿ ಪಡೆದಿದ್ದಾರೆ.

ಇದನ್ನೂ ಓದಿ: 15ರ ಬಾಲಕಿ ಆಗಿದ್ದಾಗಲೇ ಅಶ್ಲೀಲ ಜಾಲತಾಣದಲ್ಲಿ ಬಂದಿತ್ತು ಉರ್ಫಿ ಜಾವೇದ್​ ಫೋಟೋ; ಎದುರಿಸಿದ ಕಷ್ಟ ಒಂದೆರಡಲ್ಲ

ಕಿರುತೆರೆಯಲ್ಲಿ ನಟಿಯಾಗಿ ಮಿಂಚಬೇಕು ಎಂಬುದು ಉರ್ಫಿ ಜಾವೇದ್​ ಅವರ ಆಸೆ ಆಗಿತ್ತು. ಆದರೆ ಅಲ್ಲಿ ಅವರಿಗೆ ಸೂಕ್ತ ಅವಕಾಶ ಸಿಗಲಿಲ್ಲ. ಬಳಿಕ ಅವರು ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಸಿ ಜನರಿಗೆ ಪರಿಚಯಗೊಂಡರು. ಈಗ ಬಟ್ಟೆ ವಿಚಾರದಲ್ಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ