Updated on:Apr 26, 2023 | 4:46 PM
ನಟಿ ಉರ್ಫಿ ಜಾವೇದ್ ಅವರು ಪ್ರತಿ ಬಾರಿಯೂ ಚಿತ್ರ-ವಿಚಿತ್ರವಾದ ಬಟ್ಟೆ ಧರಿಸಿ ಪೋಸ್ ನೀಡುತ್ತಾರೆ. ಆ ಕಾರಣದಿಂದ ಆಗಾಗ ಅವರು ವಿವಾದ ಮಾಡಿಕೊಂಡಿದ್ದೂ ಇದೆ. ಈಗ ಮತ್ತೆ ಅಂಥ ಘಟನೆ ನಡೆದಿದೆ.
ಸಿಕ್ಕಾಪಟ್ಟೆ ಬೋಲ್ಡ್ ಆಗಿರುವಂತಹ ಬಟ್ಟೆಗಳನ್ನು ಧರಿಸುವ ಕಾರಣಕ್ಕೆ ಉರ್ಫಿ ಜಾವೇದ್ ಅವರು ಟ್ರೋಲ್ ಆಗುತ್ತಾರೆ. ಆದರೆ ಜನರ ಟೀಕೆಗೆ ಅವರು ಎಂದಿಗೂ ಜಗ್ಗಿಲ್ಲ. ಹಾಗಿದ್ದರೂ ಅವರಿಗೆ ಕೆಲವು ಕಹಿ ಅನುಭವ ಆಗುತ್ತಲೇ ಇವೆ.
ಇತ್ತೀಚೆಗೆ ಉರ್ಫಿ ಜಾವೇದ್ ಅವರನ್ನು ನೋಡಿ ಹೋಟೆಲ್ ಸಿಬ್ಬಂದಿ ಹೌಹಾರಿದ್ದಾರೆ. ಇಂಥ ಬಟ್ಟೆ ಹಾಕಿಕೊಂಡು ಬಂದರೆ ಹೋಟೆಲ್ ಒಳಗೆ ಬರುವಂತಿಲ್ಲ ಎಂದು ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಉರ್ಫಿಗೆ ಬೇಸರ ಆಗಿದೆ.
‘ನನ್ನ ಬಟ್ಟೆಯ ಆಯ್ಕೆಯನ್ನು ನೀವು ಒಪ್ಪದಿದ್ದರೆ ಪರವಾಗಿಲ್ಲ. ಆದರೆ ಅದೇ ಕಾರಣದಿಂದ ನನ್ನನ್ನು ಬೇರೆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಉರ್ಫಿ ಜಾವೇದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಉರ್ಫಿ ಜಾವೇದ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದುಂಟು. ಕೆಲವರು ನಟಿಯ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲವರು ಕಟು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಉರ್ಫಿ ಜಾವೇದ್ ಜನಪ್ರಿಯತೆ ಹೆಚ್ಚುತ್ತಲೇ ಇದೆ.
Published On - 4:46 pm, Wed, 26 April 23