AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಜೂ ಎನ್​ಟಿಆರ್​ಗಾಗಿ ಸಿನಿಮಾ ಮಾಡಲಿದ್ದಾರೆ ರಾಜಮೌಳಿ: ಪ್ರಾರಂಭ ಯಾವಾಗ?

SS Rajamouli-Jr NTR: ಮಹೇಶ್ ಬಾಬು ಜೊತೆಗಿನ ಸಿನಿಮಾಕ್ಕೆ ತಯಾರಾಗುತ್ತಿರುವ ರಾಜಮೌಳಿ ಆ ಸಿನಿಮಾದ ಬಳಿಕ ಮತ್ತೊಮ್ಮೆ ಜೂ ಎನ್​ಟಿಆರ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಮತ್ತೆ ಜೂ ಎನ್​ಟಿಆರ್​ಗಾಗಿ ಸಿನಿಮಾ ಮಾಡಲಿದ್ದಾರೆ ರಾಜಮೌಳಿ: ಪ್ರಾರಂಭ ಯಾವಾಗ?
ರಾಜಮೌಳಿ-ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: Jun 23, 2023 | 9:22 PM

Share

ಎಸ್​ಎಸ್ ರಾಜಮೌಳಿ (SS Rajamouli) ಈಗ ವಿಶ್ವಮಟ್ಟದ ಖ್ಯಾತಿಪಡೆದಿರುವ ನಿರ್ದೇಶಕ. ಮಹೇಶ್ ಬಾಬು (Mahesh Babu) ಜೊತೆಗೆ ಮುಂದಿನ ಸಿನಿಮಾ ಮಾಡಲು ರಾಜಮೌಳಿ ಮುಂದಾಗಿದ್ದು ಚಿತ್ರೀಕರಣಕ್ಕೆ ಬೇಕಾದ ತಯಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣ ಶುರುವಾಗುವ ಮುನ್ನವೇ ಅದರ ನಂತರ ಮಾಡುವ ರಾಜಮೌಳಿ ಮಾಡಲಿರುವ ಸಿನಿಮಾದ ಬಗ್ಗೆ ಗುಲ್ಲು ಎದ್ದಿದ್ದು, ಮಹೇಶ್ ಬಾಬು ಬಳಿಕ ರಾಜಮೌಳಿಯ ಕೈ ಜೂ ಎನ್​ಟಿಆರ್ (Jr NTR) ಹೆಗಲ ಮೇಲೆ ಬೀಳಲಿದೆ ಎನ್ನಲಾಗುತ್ತಿದೆ.

ಮಹೇಶ್ ಬಾಬು ಸಿನಿಮಾ ಮುಗಿಸಿದ ಬಳಿಕ ರಾಜಮೌಳಿ, ಜೂ ಎನ್​ಟಿಆರ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಆರ್​ಆರ್​ಆರ್ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಅವರು ಮಹೇಶ್ ಬಾಬು ಜೊತೆಗೆ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದರು. ಹಾಗಾಗಿ ಈಗಲೂ ಸಹ ಮಹೇಶ್ ಬಾಬು ಜೊತೆಗೆ ಸಿನಿಮಾ ಆರಂಭಿಸುವ ಮುನ್ನವೇ ಜೂ ಎನ್​ಟಿಆರ್ ಜೊತೆ ಮಾಡಲಿರುವ ಸಿನಿಮಾದ ಕತೆ ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಜೂ ಎನ್​ಟಿಆರ್ ಹಾಗೂ ರಾಜಮೌಳಿಯವರದ್ದು ಬಹು ಆಪ್ತಗೆಳೆತನ. ಬಾಹುಬಲಿ ಸಿನಿಮಾ ಪ್ರಚಾರದ ಸಮಯದಲ್ಲಿಯೇ ಈ ಬಗ್ಗೆ ಹೇಳಿಕೊಂಡಿದ್ದ ರಾಜಮೌಳಿ, ಪ್ರಭಾಸ್ ನನ್ನ ಗೆಳೆಯ ಆದರೆ ಜೂ ಎನ್​ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ದರು. ರಾಜಮೌಳಿಯ ಮೊದಲ ಸಿನಿಮಾಕ್ಕೆ ನಾಯಕ ಜೂ ಎನ್​ಟಿಆರ್. ಅದಾದ ಬಳಿಕವೂ ರಾಜಮೌಳಿ ನಿರ್ದೇಶನದ ಸಿಂಹಾದ್ರಿ, ಯಮದೊಂಗ ಹಾಗೂ ಆರ್​ಆರ್​ಆರ್ ಸಿನಿಮಾಗಳಲ್ಲಿ ಜೂ ಎನ್​ಟಿಆರ್ ನಟಿಸಿದ್ದಾರೆ. ರಾಜಮೌಳಿ ಸಹ ತಮಗೆ ಜೂ ಎನ್​ಟಿಆರ್ ನಟನೆ ಬಹಳ ಇಷ್ಟವೆಂದು, ನಟಿಸುವಾಗ ಅವರ ಪ್ರತಿ ಕದಲಿಕೆಯನ್ನೂ ನಾನು ಮುಂದೇ ಊಹಿಸಬಲ್ಲೆ ಅಷ್ಟು ಚೆನ್ನಾಗಿ ನಾವು ಒಬ್ಬರನ್ನೊಬ್ಬರು ಅರಿತುಕೊಂಡಿದ್ದೇವೆ ಎಂದು ರಾಜಮೌಳಿ ಹೇಳಿದ್ದರು.

ಇದನ್ನೂ ಓದಿ:ಜೂ ಎನ್​ಟಿಆರ್ ಅಭಿಮಾನಿಗಳ ಹುಚ್ಚಾಟ, ಸಿಹಾಂದ್ರಿ; ರಿರಿಲೀಸ್​ ವೇಳೆ ಚಿತ್ರಮಂದಿರದೊಳಗೆ ಬೆಂಕಿ

ಇನ್ನು ಜೂ ಎನ್​ಟಿಆರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಜಾಹ್ನವಿ ಕಪೂರ್ ನಾಯಕಿಯಾಗಿದ್ದು, ವಿಲನ್ ಸೈಫ್ ಅಲಿ ಖಾನ್. ಸಿನಿಮಾವನ್ನು ದೊಡ್ಡ ಬಜೆಟ್ ತೊಡಗಿಸಿ ನಿರ್ಮಿಸಲಾಗುತ್ತಿದೆ. ಈ ಸಿನಿಮಾದ ಬಳಿಕ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ರಾಜಮೌಳಿಯ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡಲು ತಯಾರಾಗಿದ್ದು ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಸಾಹಸಮಯ ಸಿನಿಮಾ ಆಗಿದ್ದು ಹಾಲಿವುಡ್​ನ ಇಂಡಿಯಾನಾ ಜೋನ್ಸ್ ಮಾದರಿಯ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದ ಬಹುಭಾಗದ ಚಿತ್ರೀಕರಣ ಅಡವಿಯಲ್ಲಿ ನಡೆಯಲಿರುವುದು ವಿಶೇಷ. ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಗುಂಟೂರು ಖಾರಂ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದ ಬಿಡುಗಡೆ ಬಳಿಕ ರಾಜಮೌಳಿಯೊಟ್ಟಿಗೆ ಸಿನಿಮಾ ಶುರು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ