AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆ ಬಾರದವನಾಗಿದ್ದ ರಾಜಮೌಳಿಯನ್ನು ಬದಲಾಯಿಸಿದ್ದು ಅತ್ತಿಗೆಯ ಆ ಒಂದು ಮಾತು

SS Rajamouli: ನಿರ್ದೇಶಕ ರಾಜಮೌಳಿ ಈಗ ವಿಶ್ವದ ಟಾಪ್ ನಿರ್ದೇಶಕರಲ್ಲಿ ಒಬ್ಬರು. ಆದರೆ ಒಂದು ಸಮಯದಲ್ಲಿ ಅವರೂ ಸಹ ನಿಂದನೆಗಳಿಗೆ ಗುರಿಯಾದವರೇ.

ಕೆಲಸಕ್ಕೆ ಬಾರದವನಾಗಿದ್ದ ರಾಜಮೌಳಿಯನ್ನು ಬದಲಾಯಿಸಿದ್ದು ಅತ್ತಿಗೆಯ ಆ ಒಂದು ಮಾತು
ರಾಜಮೌಳಿ
ಮಂಜುನಾಥ ಸಿ.
|

Updated on: Jun 13, 2023 | 6:48 PM

Share

ನಿರ್ದೇಶಕ ಎಸ್​ಎಸ್ ರಾಜಮೌಳಿ (SS Rajamouli) ಇಂದು ಕೋಟ್ಯಂತರ ಯುವಕರನ್ನು, ಸಿನಿಮಾ ಕರ್ಮಿಗಳಿಗೆ ಸ್ಪೂರ್ತಿ. ಅವರಂಥಾಗುವ ಕನಸು ಹೊತ್ತ ಕೋಟ್ಯಂತರ ಜನ ಇಂದು ಭಾರತದಲ್ಲಿ ವಿಶ್ವದಾದ್ಯಂತ ಇದ್ದಾರೆ. ಅವರಿಗೆ ದೊರೆತ ಯಶಸ್ಸಿನ ಅರ್ಧ ಸಿಕ್ಕರೂ ಸಾಕು ಎಂದುಕೊಳ್ಳುತ್ತಿರುವ ಸಿನಿಮಾ ಕರ್ಮಿಗಳಿದ್ದಾರೆ. ಅವರನ್ನು ಗುರುವಂತೆ ಪೂಜಿಸುವ ತಂತ್ರಜ್ಞರಿದ್ದಾರೆ. ಅತ್ಯಂತ ಶ್ರಮಪಟ್ಟು, ಫ್ಯಾಷೊನೇಟ್ ಆಗಿ ಸಿನಿಮಾ ಮಾಡುವ ನಿರ್ದೇಶಕ ರಾಜಮೌಳಿ. ಸೆಟ್​ನಲ್ಲಿ ಬಹಳ ಸಕ್ರಿಯವಾಗಿ ಕೆಲಸ ಮಾಡುವ ರಾಜಮೌಳಿ ಒಂದು ಸಮಯದಲ್ಲಿ ಸಂಬಂಧಿಗಳಿಂದ ನಾಲಾಯಕ್ ಎನಿಸಿಕೊಂಡಿದ್ದರಂತೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ರಾಜಮೌಳಿ, ”ನಮ್ಮ ಕುಟುಂಬ ಒಂದು ಕಾಲದಲ್ಲಿ ಬಹಳ ಶ್ರೀಮಂತ ಕುಟುಂಬ. ನಮ್ಮ ತಾತ, ತಂದೆಯರದ್ದು ಸುಮಾರು 360 ಎಕರೆ ಜಮೀನು ಕರ್ನಾಟಕದಲ್ಲಿ ಇತ್ತು. ಆದರೆ ನನಗೆ ಸುಮಾರು 10-11 ವರ್ಷವಾಗುವ ವೇಳೆಗೆ ಎಲ್ಲ ಜಮೀನು ಕಳೆದುಕೊಂಡಿದ್ದೆವು. ಆ ಬಳಿಕ ನಾವು ಚೆನ್ನೈಗೆ ಹೋದೆವು. ಅಲ್ಲಿ ನಾವು 13 ಜನ ಕೇವಲ ಸಿಂಗಲ್ ಬೆಡ್​ರೂಂ ಮನೆಯಲ್ಲಿ ವಾಸಿಸುತ್ತಿದ್ದೆವು. ಅಲ್ಲಿದ್ದಾಗ ಪ್ರತಿದಿನವೂ ನಮಗೆ ಈ ತಿಂಗಳ ಬಾಡಿಗೆ ಹೇಗೆ ಕಟ್ಟುವುದು ಎಂಬುದೇ ಚಿಂತೆಯಾಗಿತ್ತು” ಎಂದು ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

”ಆ ಹದಿಮೂರು ಜನರಲ್ಲಿ ನಮ್ಮ ಅಣ್ಣ ಒಬ್ಬನೇ ಕೆಲಸ ಮಾಡುತ್ತಿದ್ದಿದ್ದು. ಅವನೊಬ್ಬನ ಸಂಪಾದನೆಯಿಂದಲೇ ಇಡೀ ಮನೆ ನಡೆಯಬೇಕಿತ್ತು. ಅದೇ ಸಮಯದಲ್ಲಿ ನಮ್ಮ ಅಣ್ಣ ಮದುವೆಯಾದ. ನಮ್ಮ ಅತ್ತಿಗೆ ಮನೆಗೆ ಬಂದಳು. ನಾವು ಅತ್ತಿಗೆಯನ್ನು ಅತ್ತಿಗೆ ಎನ್ನುತ್ತಿರಲಿಲ್ಲ ಅಮ್ಮ ಎಂದೆ ಕರೆಯುತ್ತಿದ್ದೆವು. ನನಗೆ 22 ವರ್ಷಗಳಾದರೂ ನಾನು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸುಮಾರು ಐದು ವರ್ಷಗಳ ಕಾಲ ನಮ್ಮಪ್ಪ ನನ್ನನ್ನು ಏನಾದರೂ ಮಾಡು ಎಂದು ಹೇಳುತ್ತಲೇ ಇದ್ದರು. ಆದರೆ ನಾನು ಅವರಿಂದ ನುಣುಚಿಕೊಂಡು ಓಡಾಡುತ್ತಿದ್ದೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ” ಎಂದು ತಮ್ಮ ನಿರುದ್ಯೋಗದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.

ಇದನ್ನೂ ಓದಿ:ರಾಜಮೌಳಿಯನ್ನು ನಂಬಿ 300-400 ಕೋಟಿ ಸಾಲ, ತಿಂಗಳಿಗೆ 5 ಕೋಟಿಗೂ ಹೆಚ್ಚು ಬಡ್ಡಿ

”ಅದೇ ಸಮಯದಲ್ಲಿ ನನ್ನ ಚಿಕ್ಕಮ್ಮ ಒಬ್ಬರು. ರಾಜಮೌಳಿ ಒಳ್ಳೆಯನು ಆದರೆ ಕೆಲಸಕ್ಕೆ ಬಾರದವನು ಎಂದೇನೋ ಹೇಳಿಬಿಟ್ಟಿದ್ದರು. ಅದು ನಮ್ಮ ಅತ್ತಿಗೆಯ ಕಿವಿಗೆ ಬಿತ್ತು. ಅತ್ತಿಗೆ ಬಹಳ ಬೇಸರ ಮಾಡಿಕೊಂಡು, ನನ್ನ ಮಗನನ್ನು ಹೀಗೆ ಬೇರೊಬ್ಬರು ಬೈಯ್ಯುವುದು ನನ್ನಿಂದ ಸಹಿಸಿಕೊಳ್ಳಲಾಗುವುದಿಲ್ಲ ಎಂದರು. ಅವರ ಅದೊಂದೇ ಮಾತು ನನ್ನನ್ನು ಹೇಗೋ ಬದಲಾಯಿಸಿಬಿಟ್ಟಿತು. ಅಲ್ಲಿಂದ ನಾನು ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದೆ” ಎಂದಿದ್ದಾರೆ ರಾಜಮೌಳಿ.

ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಕರ್ನಾಟಕದ ರಾಯಚೂರಿನಲ್ಲಿದ್ದವರು. ಇಲ್ಲಿ ಕೃಷಿ ಸಹ ಮಾಡುತ್ತಿದ್ದರು ಆದರೆ ಜಮೀನು ಕಳೆದುಕೊಂಡು ಚೆನ್ನೈಗೆ ಸ್ಥಳಾಂತರಗೊಂಡರು. ಆರಂಭದಲ್ಲಿ ಬಹಳ ಕಷ್ಟದ ದಿನಗಳನ್ನು ರಾಜಮೌಳಿ ಕಂಡಿದ್ದಾರೆ. ಹಣವಿಲ್ಲದ ಕಾರಣ ಅವರ ಮನೆಯ ಸುತ್ತ ಮುತ್ತಲಿನ ಹಲವು ಅಂಗಡಿಗಳಲ್ಲಿ ಸಾಲವನ್ನು ಅವರ ಕುಟುಂಬದವರು ಪಡೆದಿದ್ದರಂತೆ. ಒಮ್ಮೆ ಹೋದ ಅಂಗಡಿಗೆ ಮತ್ತೆ ಹೋದರೆ ಹಳೆ ಸಾಲ ಕೇಳುತ್ತಾರೆ ಎಂದು ಬೇರೆ ಅಂಗಡಿಗೆ ಹೋಗುತ್ತಿದ್ದರಂತೆ ರಾಜಮೌಳಿ. ಹೀಗೆ ನಾನಾ ಕಷ್ಟಗಳನ್ನು ಅನುಭವಿಸಿ ಬೆಳೆದು ನಿಂತವರು ರಾಜಮೌಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್