ಜಿ20 ಶೃಂಗಸಭೆಯಲ್ಲಿ ‘ಆರ್​ಆರ್​ಆರ್ ಸಿನಿಮಾ​ ನನ್ನನ್ನು ಆಕರ್ಷಿಸಿದೆ’ ಎಂದ ಬ್ರೆಜಿಲ್ ಅಧ್ಯಕ್ಷ

|

Updated on: Sep 10, 2023 | 3:15 PM

ಜಿ20 ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ ಕೂಡ ಭಾಗವಹಿಸಿದ್ದರು. ಅವರು ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಜಿ20 ಶೃಂಗಸಭೆಯಲ್ಲಿ ‘ಆರ್​ಆರ್​ಆರ್ ಸಿನಿಮಾ​ ನನ್ನನ್ನು ಆಕರ್ಷಿಸಿದೆ’ ಎಂದ ಬ್ರೆಜಿಲ್ ಅಧ್ಯಕ್ಷ
ಮೋದಿ, ಲೂಲಾ-ಆರ್​ರ್​​ಆರ್​
Follow us on

‘ಆರ್​ಆರ್​ಆರ್’ ಸಿನಿಮಾ (RRR Movie) ಮಾಡಿರುವ ಮೋಡಿ ತುಂಬಾನೇ ದೊಡ್ಡದು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಎಸ್​ಎಸ್​ ರಾಜಮೌಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈಗ ಈ ಚಿತ್ರದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ ಮಾತನಾಡಿದ್ದಾರೆ. ಶೃಂಗಸಭೆಯಲ್ಲಿ ಅವರು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿ20 ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ ಕೂಡ ಭಾಗವಹಿಸಿದ್ದರು. ಅವರು ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಈ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ.

‘ಆರ್​ಆರ್​ಆರ್​ ಮೂರು ಗಂಟೆಯ ಫೀಚರ್ ಸಿನಿಮಾ. ಹಲವು ಫನ್ನಿ ದೃಶ್ಯ ಇದೆ. ಅದ್ಭುತ ನೃತ್ಯವಿದೆ. ಬ್ರಿಟಿಷರ ಆಡಳಿತದ ಬಗ್ಗೆ ತೀವ್ರ ಟೀಕೆಯೂ ಇದೆ. ಈ ಚಿತ್ರ ವಿಶ್ವಾದ್ಯಂತ ಬ್ಲಾಕ್​ಬಸ್ಟರ್ ಸಿನಿಮಾ ಆಗಬೇಕು ನನ್ನ ಅಭಿಪ್ರಾಯ. ಭಾರತದ ಬಗ್ಗೆ ಯಾರೇ ಪ್ರಸ್ತಾಪಿಸಿದರೂ ನೀವು ‘ಆರ್​ಆರ್​ಆರ್’​ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ. ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ’ ಎಂದಿದ್ದಾರೆ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ.


ಇದನ್ನೂ ಓದಿ: ‘ಆರ್​ಆರ್​ಆರ್’ ಸೀಕ್ವೆಲ್ ಬಗ್ಗೆ ಮುಖ್ಯ ಮಾಹಿತಿ ರಿವೀಲ್ ಮಾಡಿದ ರಾಜಮೌಳಿ ತಂದೆ

‘ಆರ್​ಆರ್​ಆರ್’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 3:03 pm, Sun, 10 September 23