ಗೆಳೆಯನ ಸಿನಿಮಾದಲ್ಲಿ ಪ್ರಭಾಸ್ ಪಾತ್ರ, ಸಿನಿಮಾ ಸಾಮಾನ್ಯದ್ದಲ್ಲ
Prabhas: ಕಣ್ಣಪ್ಪನ ಕುರಿತಾದ ಕತೆಯಲ್ಲಿ ನಟ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ನಟಿಸಬೇಕು ಎಂಬುದು ಪ್ರಭಾಸ್ ಆಸೆಯಾಗಿತ್ತು, ಆದರೆ ಈಗ ಗೆಳೆಯನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಭಾಸ್ (Prabhas) ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್ ಪಟ್ಟದಿಂದ, ಪ್ಯಾನ್ ವರ್ಲ್ಡ್ ಸ್ಟಾರ್ ಆಗುವತ್ತ ದೃಷ್ಟಿ ನೆಟ್ಟಿದ್ದಾರೆ. ಭಾರಿ ಬಜೆಟ್ನ ಸ್ಪೈಲಿಷ್ ಮೇಕಿಂಗ್ನ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದರ ನಡುವೆ, ಪ್ರಭಾಸ್ ಪೌರಾಣಿಕ ಕತೆಯುಳ್ಳ ಸಿನಿಮಾದ ಭಾಗವಾಗುತ್ತಿದ್ದಾರೆ. ಇದಕ್ಕೆ ಕಾರಣ ಗೆಳೆತನ ಮತ್ತು ದೇವರ ಮೇಲಿನ ಭಕ್ತಿ.
ಶಿವನ ಅಪ್ರತಿಮ ಭಕ್ತನಾದ ಕಣ್ಣಪ್ಪ ಅಥವಾ ಬೇಡರ ಕಣ್ಣಪ್ಪನ ಚರಿತ್ರೆಯನ್ನು ತೆರೆಯ ಮೇಲೆ ತರಲಾಗುತ್ತಿದ್ದು, ತೆಲುಗಿನ ನಟ ವಿಷ್ಣು ಮಂಚು ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ತಿಂಗಳು ‘ಕಣ್ಣಪ್ಪ’ ಚಿತ್ರದ ಮುಹೂರ್ತ ಶಿವನ ದೇವಾಲಯದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ವಿಷ್ಣು ಮಂಚು ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶಿವ ಭಕ್ತ ಕಣ್ಣಪ್ಪನ ಕತೆ ಈ ಹಿಂದೆಯೂ ಕೆಲವು ಬಾರಿ ತೆರೆಗೆ ಬಂದಿದೆಯಾದರೂ ಈಗ ಮತ್ತೊಮ್ಮೆ ಆಧುನಿಕ ತಂತ್ರಜ್ಞಾನಗಳ ಬಳಸಿಕೊಂಡು ತೆರೆಗೆ ಬರುತ್ತಿದೆ.
ಇದನ್ನೂ ಓದಿ:ಪ್ರಭಾಸ್ಗೆ ಅನುಷ್ಕಾ ಶೆಟ್ಟಿ ಎಸೆದ ಸವಾಲು ರಾಮ್ ಚರಣ್ ವರ್ಗ, ಹಂಚಿಕೊಂಡ ರೆಸಿಪಿ ಯಾವುದು?
ಭಾರತದ ದೊಡ್ಡ ಸೂಪರ್ ಸ್ಟಾರ್ ಪ್ರಭಾಸ್ ಈಗ ಈ ಸಿನಿಮಾದ ಭಾಗವಾಗಿದ್ದಾರೆ. ಕಣ್ಣಪ್ಪನ ಚರಿತ್ರೆಯ ಸಿನಿಮಾದಲ್ಲಿ ನಟ ಪ್ರಭಾಸ್ ಒಂದು ವಿಶೇಷ ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಪ್ರಭಾಸ್ ಅವರು ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಸೇರ್ಪಡೆಯು ಈ ಚಿತ್ರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ‘ಕಣ್ಣಪ್ಪ’ ಸಿನಿಮಾದಲ್ಲಿ ಪ್ರಭಾಸ್ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಹಿರಂಗವಾಗಿ ಹೇಳಿಲ್ಲವಾದರೂ, ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಣ್ಣಪ್ಪನ ಪಾತ್ರದಲ್ಲಿ ತಾವು ನಟಿಸಬೇಕು ಎಂಬ ಆಸೆಯನ್ನು ಪ್ರಭಾಸ್ ಇರಿಸಿಕೊಂಡಿದ್ದರು, ಆದರೆ ಈಗ ಮಂಚು ವಿಷ್ಣು ಆ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.
ಪ್ರಭಾಸ್ ಪ್ರಸ್ತುತ ‘ಸಲಾರ್’ ಹಾಗೂ ‘ಕಲ್ಕಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಸಲಾರ್’ ಸಿನಿಮಾ ಇದೇ ತಿಂಗಳು 17ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ. ಇನ್ನು ‘ಕಲ್ಕಿ’ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಅದಾದ ಬಳಿಕ ಮಾರುತಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಹಿಂದಿ ಸಿನಿಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Sun, 10 September 23




