AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ಗೆ ಅನುಷ್ಕಾ ಶೆಟ್ಟಿ ಎಸೆದ ಸವಾಲು ರಾಮ್ ಚರಣ್ ವರ್ಗ, ಹಂಚಿಕೊಂಡ ರೆಸಿಪಿ ಯಾವುದು?

Anushka Shetty: ನಟಿ ಅನುಷ್ಕಾ ಶೆಟ್ಟಿ ನಟಿಸಿರುವ 'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಬಿಡುಗಡೆ ಆಗಲಿದ್ದು, ಇದರ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಒಂದನ್ನು ಪ್ರಾರಂಭಿಸಿದ್ದಾರೆ ಅನುಷ್ಕಾ ಶೆಟ್ಟಿ.

ಪ್ರಭಾಸ್​ಗೆ ಅನುಷ್ಕಾ ಶೆಟ್ಟಿ ಎಸೆದ ಸವಾಲು ರಾಮ್ ಚರಣ್ ವರ್ಗ, ಹಂಚಿಕೊಂಡ ರೆಸಿಪಿ ಯಾವುದು?
ಅನುಷ್ಕಾ ಶೆಟ್ಟಿ-ರಾಮ್-ಅನುಷ್ಕಾ
ಮಂಜುನಾಥ ಸಿ.
|

Updated on: Sep 06, 2023 | 6:24 PM

Share

ನಟಿ ಅನುಷ್ಕಾ ಶೆಟ್ಟಿ (Anushka Shetty) ಮೂರು ವರ್ಷಗಳ ಬಳಿಕ ಮತ್ತೆ ಬೆಳ್ಳಿ ತೆರೆಗೆ ಮರಳುತ್ತಿದ್ದಾರೆ. ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ‘ (miss shetty mr shetty) ಹೆಸರಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದು, ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ಶೆಫ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರಚಾರಾರ್ಥ, ಅನುಷ್ಕಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಒಂದನ್ನು ಪ್ರಾರಂಭಿಸಿದ್ದಾರೆ. ಮೊದಲಿಗೆ ಈ ಚಾಲೆಂಜ್ ಅನ್ನು ಗೆಳೆಯ ಪ್ರಭಾಸ್​ಗೆ ಹಾಕಿದ್ದರು, ಅದೀಗ, ರಾಮ್ ಚರಣ್​ಗೆ ವರ್ಗವಾಗಿದೆ.

ಚಾಲೆಂಜ್ ಸರಳ, ಸೆಲೆಬ್ರಿಟಿಗಳು ತಮಗೆ ಇಷ್ಟವಾದ ಅಡುಗೆ ಯಾವುದೆಂದು ತಿಳಿಸಿ, ಅದನ್ನು ಮಾಡುವ ಬಗೆಯನ್ನು ರೆಸಿಪಿಯೊಂದಿಗೆ ಹಂಚಿಕೊಳ್ಳಬೇಕು. ಸವಾಲು ಎಸೆದಿರುವ ಅನುಷ್ಕಾ ಶೆಟ್ಟಿ ಮೊದಲಿಗೆ ತಾವೇ ತಮ್ಮಿಷ್ಟದ ಅಡುಗೆ ರೆಸಿಪಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿಗೆ ಮಂಗಳೂರು ಸ್ಪೆಷಲ್ ನೀರು ದೋಸೆ ಹಾಗೂ ಮಂಗಳೂರು ಚಿಕನ್ ಕರಿ ಬಹಳ ಇಷ್ಟವಂತೆ. ಹಾಗಾಗಿ ಈ ಎರಡನ್ನೂ ಮಾಡುವ ವಿಧಾನವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ನಂತರ ಚಾಲೆಂಜ್ ಅನ್ನು ಪ್ರಭಾಸ್​ಗೆ ವರ್ಗಾಯಿಸಿದ್ದಾರೆ.

ದಶಕಗಳಿಂದಲೂ ಸ್ವೀಟಿ (ಅನುಷ್ಕಾ ಶೆಟ್ಟಿ) ನನಗೆ ಗೊತ್ತು ಆದರೆ ಅವರ ಇಷ್ಟದ ಆಹಾರ ಗೊತ್ತಿರಲಿಲ್ಲ, ಈಗ ಗೊತ್ತಾಯ್ತು ಎಂದಿರುವ ಪ್ರಭಾಸ್, ತಮಗೆ ಇಷ್ಟವಾದ ‘ರೋಯಲ್ಲ ಪಲಾವ್’ ಮಾಡುವ ವಿಧಾನ ಹೇಗೆಂದು ಬರೆದು ಹಂಚಿಕೊಂಡಿದ್ದಾರೆ. ನಂತರ ಈ ರೆಸೆಪಿ ಚಾಲೆಂಜ್ ಅನ್ನು ನಟ, ಗೆಳೆಯ ರಾಮ್ ಚರಣ್​ಗೆ ವರ್ಗಾವಣೆ ಮಾಡಿದ್ದಾರೆ. ಮಾತ್ರವಲ್ಲದೆ, ಅಭಿಮಾನಿಗಳು ತಮ್ಮಿಷ್ಟದ ರೆಸೆಪಿಯನ್ನು ಹಂಚಿಕೊಂಡರೆ ತಮಗೆ ಖುಷಿಯಾಗುತ್ತದೆ ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ: ಮದುವೆ, ಟ್ರೋಲ್​, ಪ್ರಭಾಸ್ ಜೊತೆ ನಟನೆ; ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ ಅನುಷ್ಕಾ ಶೆಟ್ಟಿ

ಪ್ರಭಾಸ್ ಹಾಕಿರುವ ಸವಾಲು ಸ್ವೀಕರಿಸಿರುವ ನಟ ರಾಮ್ ಚರಣ್, ತಮಗೆ ಬಹಳ ಪ್ರಿಯವಾದ ನೆಲ್ಲೂರು ಚಾಪಲ ಪುಲುಸು ಮಾಡುವ ವಿಧಾನ ಹಂಚಿಕೊಂಡು, ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾಕ್ಕೆ ಶುಭ ಕೋರುವ ಜೊತೆಗೆ ಚಾಲೆಂಜ್ ಅನ್ನು ನಟ, ಗೆಳೆಯ ರಾಣಾ ದಗ್ಗುಬಾಟಿಗೆ ವರ್ಗಾವಣೆ ಮಾಡಿದ್ದಾರೆ. ಈಗ ರಾಣಾ ದಗ್ಗುಬಾಟಿ ಯಾವ ರೆಸಿಪಿ ಹಂಚಿಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಇನ್ನು ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಎದುರು ನಾಯಕನಾಗಿ ನವೀನ್ ಪೋಲಿಶೆಟ್ಟಿ ನಟಿಸಿದ್ದಾರೆ. ಮಧ್ಯ ವಯಸ್ಕ ಮಹಿಳೆಯೊಬ್ಬಾಕೆ, ಮಗು ಪಡೆಯಲು ಸೂಕ್ತವಾದ ಯುವಕನಿಗಾಗಿ ಹುಡುಕುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನವೀನ್ ಪೋಲಿಶೆಟ್ಟಿ ಸ್ಟಾಂಡಪ್ ಕಮಿಡಿಯನ್ ಆಗಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಸೆಪ್ಟೆಂಬರ್ 7ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ