AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನೇಜರ್​ ವರ್ತನೆಯಿಂದ ದೊಡ್ಡ ಸಿನಿಮಾಗಳ ಆಫರ್​ ಕಳೆದುಕೊಂಡಿದ್ದ ‘ಗದರ್​ 2’ ನಟಿ ಅಮೀಷಾ ಪಟೇಲ್​

‘ಆ ಮ್ಯಾನೇಜರ್​ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್​ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ಆದರೆ ಈಗ ‘ಗದರ್​ 2’ ಸಿನಿಮಾ ಮೂಲಕ ಅಮೀಷಾ ಪಟೇಲ್​ ಅವರ ಮೈಲೇಜ್​ ಹೆಚ್ಚಿದೆ. ತಮ್ಮ ಹಳೇ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಮ್ಯಾನೇಜರ್​ ವರ್ತನೆಯಿಂದ ದೊಡ್ಡ ಸಿನಿಮಾಗಳ ಆಫರ್​ ಕಳೆದುಕೊಂಡಿದ್ದ ‘ಗದರ್​ 2’ ನಟಿ ಅಮೀಷಾ ಪಟೇಲ್​
ಅಮೀಷಾ ಪಟೇಲ್​
ಮದನ್​ ಕುಮಾರ್​
|

Updated on: Sep 06, 2023 | 5:06 PM

Share

ಬಾಲಿವುಡ್​ನ ‘ಗದರ್​ 2’ ಸಿನಿಮಾ (Gadar 2) ಸೂಪರ್​ ಹಿಟ್​ ಆಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ದೊಡ್ಡ ಯಶಸ್ಸು ಸಿಕ್ಕಿದೆ. ಅದೇ ರೀತಿ ಈ ಸಿನಿಮಾದ ನಾಯಕಿ ಅಮೀಷಾ ಪಟೇಲ್​ (Ameesha Patel) ಕೂಡ ಸಖತ್​ ಆಗಿ ಮಿಂಚುತ್ತಿದ್ದಾರೆ. ಈ ಗೆಲುವಿಗಾಗಿ ಅವರು ಬಹಳ ವರ್ಷಗಳಿಂದ ಕಾದಿದ್ದರು. ಅವರಿಗೆ ಈ ಮೊದಲೇ ಸಿಗಬೇಕಿದ್ದ ಅನೇಕ ಪ್ರಾಜೆಕ್ಟ್​ಗಳು ತಪ್ಪಿ ಹೋಗಿದ್ದವು ಎಂಬುದು ಈಗ ಬಹಿರಂಗ ಆಗಿದೆ. ಆ ರೀತಿ ಆಗಲು ತಮ್ಮ ಮ್ಯಾನೇಜರ್​ ಕಾರಣ ಎಂದು ಅಮೀಷಾ ಪಟೇಲ್​ ಅವರು ಹೇಳಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali), ಶಾರುಖ್​ ಖಾನ್​ ಮುಂತಾದ ಘಟಾನುಘಟಿಗಳ ಜೊತೆ ಸಿನಿಮಾ ಮಾಡುವ ಅವಕಾಶವನ್ನು ಅಮೀಷಾ ಪಟೇಲ್​ ಕಳೆದುಕೊಂಡಿದ್ದರು ಎಂಬುದು ಅಚ್ಚರಿಯ ವಿಚಾರ.

ಸೆಲೆಬ್ರಿಟಿಗಳು ಹಲವು ಕೆಲಸಕ್ಕೆ ಮ್ಯಾನೇಜರ್​ಗಳನ್ನು ನೇಮಿಸಿಕೊಂಡಿರುತ್ತಾರೆ. ಸಂಭಾವನೆ, ಡೇಟ್ಸ್​, ಅಗ್ರಿಮೆಂಟ್​ ಇತ್ಯಾದಿ ವಿಚಾರಗಳ ಉಸ್ತುವಾರಿಯನ್ನು ಮ್ಯಾನೇಜರ್​ಗಳೇ ನೋಡಿಕೊಳ್ಳುತ್ತಾರೆ. ಒಳ್ಳೆಯ ಮ್ಯಾನೇಜರ್​ ಸಿಕ್ಕರೆ ಸೆಲೆಬ್ರಿಟಿಗಳ ಕೆಲಸ ಸುಲಭ ಆಗುತ್ತದೆ. ಆದರೆ ಅಮೀಷಾ ಪಟೇಲ್​ ಅವರು ಮ್ಯಾನೇಜರ್​ ಮಾಡಿದ ತಪ್ಪಿನಿಂದಾಗಿ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ‘ಗದರ್​ 2’ ಸಿನಿಮಾದ ಗೆಲುವಿನ ಖುಷಿಯಲ್ಲಿ ನಟಿ ಅಮೀಷಾ ಪಟೇಲ್​

‘ಅನೇಕ ಒಳ್ಳೆಯ ಸಿನಿಮಾಗಳಿಗಾಗಿ ಮಾತುಕಥೆ ನಡೆದಿತ್ತು. ಈಗ ಅವುಗಳ ಹೆಸರು ಹೇಳುವುದು ಬೇಡ. ಯಾಕೆಂದರೆ ಆ ಸಿನಿಮಾಗಳು ಈಗಾಗಲೇ ಬಂದುಹೋಗಿವೆ. ದುರಾದೃಷ್ಟವಶಾತ್​ ಆ ಸಮಯದಲ್ಲಿ ನನ್ನ ಮ್ಯಾನೇಜರ್​ ಮತ್ತು ಸಂಜಯ್​ ಲೀಲಾ ಬನ್ಸಾಲಿ ನಡುವೆ ಮನಸ್ತಾಪ ಆಗಿತ್ತು. ಆ ಮ್ಯಾನೇಜರ್​ನಿಂದ ನಾನು ದೂರ ಆದ ಬಳಿಕವೇ ಈ ಎಲ್ಲ ಸಂಗತಿಗಳು ನನಗೆ ಗೊತ್ತಾದವು’ ಎಂದು ಅಮಿಷಾ ಪಟೇಲ್​ ಹೇಳಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ಮಾತ್ರವಲ್ಲದೇ ಯಶ್​ ರಾಜ್​ ಫಿಲ್ಮ್, ಸಾಜಿದ್​ ನಾಡಿಯದ್ವಾಲಾ, ಶಾರುಖ್​ ಖಾನ್​ ಮುಂತಾದವರ ಜೊತೆಗೂ ಕೆಲಸ ಮಾಡುವ ಅವಕಾಶವನ್ನು ಮಿಸ್​ ಮಾಡಿಕೊಂಡ ಬಗ್ಗೆ ಅಮೀಷಾ ಪಟೇಲ್​ ಮಾತನಾಡಿದ್ದಾರೆ.

ಇದನ್ನೂ ಓದಿ: 500 ಕೋಟಿ ರೂಪಾಯಿ ಬಾಚಿಕೊಂಡ ‘ಗದರ್​ 2’ ಸಿನಿಮಾ; ಅದ್ದೂರಿಯಾಗಿ ನಡೆಯಿತು ಪಾರ್ಟಿ

‘ಆ ಮ್ಯಾನೇಜರ್​ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್​ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ‘ಗದರ್​ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್​ಗೆ ಜೋಡಿಯಾಗಿ ಅಮೀಷಾ ನಟಿಸಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಈ ಗೆಲುವಿನಿಂದ ಅವರ ಮುಖದಲ್ಲಿ ನಗು ಮೂಡಿದೆ. ಅವರಿಗೆ ಇದ್ದ ಜನಪ್ರಿಯತೆ ಹೆಚ್ಚಾಗಿದೆ. ಅಮೀಷಾ ಪಟೇಲ್​ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಕೌತುಕ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ