AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಳಿಧರನ್ ಕತೆ, ಕಷ್ಟ ನನಗೆ ಗೊತ್ತು, ಅದು ಎಲ್ಲರಿಗೂ ಗೊತ್ತಾಗಬೇಕು: ಸಚಿನ್ ತೆಂಡೂಲ್ಕರ್

Sachin Tendulkar: ವಿಶ್ವ ಕ್ರಿಕೆಟ್​ನ ಶ್ರೇಷ್ಠ ಸ್ಪಿನ್ನರ್ ಮುರಳೀಧರನ್ ಅವರ ಜೀವನ ಆಧರಿಸಿದ '800' ಸಿನಿಮಾದ ಟ್ರೈಲರ್ ಅನ್ನು ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿನ್, ಮುರಳೀಧರನ್ ಹಾಗೂ ಸನತ್ ಜಯಸೂರ್ಯ ಹಲವು ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಮುರಳಿಧರನ್ ಕತೆ, ಕಷ್ಟ ನನಗೆ ಗೊತ್ತು, ಅದು ಎಲ್ಲರಿಗೂ ಗೊತ್ತಾಗಬೇಕು: ಸಚಿನ್ ತೆಂಡೂಲ್ಕರ್
ಮುರಳಿ-ಸಚಿನ್
ಮಂಜುನಾಥ ಸಿ.
|

Updated on:Sep 06, 2023 | 4:10 PM

Share

ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್, ನಿವೃತ್ತರಾಗಿ 13 ವರ್ಷಗಳಾದವು. ಆದರೆ ಈಗಲೂ ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶ್ರೇಯ ಇರುವುದು ಮುರಳೀಧರನ್ ಹೆಸರಿನಲ್ಲಿಯೇ. ಮೈದಾನದಲ್ಲಿದ್ದಾಗ ಗಂಭೀರವಾಗಿ, ಬೌಲಿಂಗ್ ಮಾಡುವಾಗ ಭೀಕರವಾಗಿ, ಮೈದಾನದ ಹೊರಗೆ ಕೇವಲ ನಗುಮುಖದಲ್ಲಿ ಕಾಣುವ ಮುರಳಿಧರನ್, ಕ್ರಿಕೆಟರ್ ಆಗುವ ಮುನ್ನ ಹಾಗೂ ಕ್ರಿಕೆಟರ್ ಆದ ಬಳಿಕ ಪಟ್ಟ ಕಷ್ಟಗಳಿಗೆ ಲೆಕ್ಕವೇ ಇಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ ಆದ ಮುರಳಿಧರನ್​ರ ಪಯಣ ಈಗ ಸಿನಿಮಾ ಆಗಿದೆ. ಆ ಮೂಲಕ ಕೋಟ್ಯಂತರ ಜನರಲ್ಲಿ ಸ್ಪೂರ್ತಿ ತುಂಬಲು ತಯಾರಾಗಿದೆ. ಗೆಳೆಯನ ಜೀವನ ಆಧರಿಸಿದ ‘800’ ಸಿನಿಮಾ ಟ್ರೈಲರ್ ಅನ್ನು ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದಾರೆ.

ನಿನ್ನೆ (ಸೆಪ್ಟೆಂಬರ್ 06) ನಡೆದ ಕಾರ್ಯಕ್ರಮದಲ್ಲಿ ಮುರಳೀಧರನ್ ಜೀವನ ಆಧರಿತ 800 ಸಿನಿಮಾದ ಟ್ರೈಲರ್ ಅನ್ನು ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಬಹುವರ್ಷದ ಮಿತ್ರ ಮುರಳೀಧರನ್ ಕುರಿತು ಮಾತನಾಡಿದ ಸಚಿನ್, ”ಮುರಳೀಧರನ್ ಕತೆ, ಕಷ್ಟ ನನಗೆ ಗೊತ್ತು, ಅದು ಎಲ್ಲರಿಗೂ ಗೊತ್ತಾಗಬೇಕು” ಎಂದರು. ಈ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ, ಎಲ್ಲರೂ ಸ್ಪೂರ್ತಿ ಪಡೆಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಮುರಳೀಧರನ್ ಜೀವನ ಕುರಿತ ‘800’ ಸಿನಿಮಾ ಟ್ರೈಲರ್

ಕಾರ್ಯಕ್ರಮದಲ್ಲಿ ಶ್ರೀಲಂಕಾದ ಲಿಜೆಂಡ್ ಕ್ರಿಕೆಟರ್ ಸನತ್ ಜಯಸೂರ್ಯ ಸಹ ಹಾಜರಿದ್ದರೂ, ಮೂವರೂ ದಿಗ್ಗಜ ಕ್ರಿಕೆಟರ್​ಗಳು ತಮ್ಮ ಕಾಲದ ಕ್ರಿಕೆಟ್​ನ ಕೆಲ ನೆನಪುಗಳನ್ನು ಮೆಲಕು ಹಾಕಿದರು. ಮುರಳೀಧರನ್ ಎಂಥಹಾ ದಿಗ್ಗಜ ಆಟಗಾರ ಎಂದು ಹೇಳುತ್ತಾ, ಈ ವರೆಗೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 10,500 ಓವರ್​ಗಳನ್ನು ಬೌಲ್ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸುಮಾರು 10 ಸಾವಿರ, ಅದಕ್ಕೂ ಮುನ್ನ ಸುಮಾರು 15 ಸಾವಿರ ಓವರ್​ಗಳನ್ನು ಬೌಲಿಂಗ್ ಮಾಡಿದಬಹುದು ಎಂದರು ಸಚಿನ್. ಅದಕ್ಕೆ ಸನತ್ ಜಯಸೂರ್ಯ ಮಾತು ಸೇರಿಸಿ, ಒಮ್ಮೆಯಂತೂ ಟೆಸ್ಟ್​ ಕ್ರಿಕೆಟ್​ನ ಒಂದು ದಿನದ 90 ಓವರ್​ಗಳಲ್ಲಿ 35 ಓವರ್​ಗಳನ್ನು ಮುರಳಿಯೇ ಬೌಲಿಂಗ್ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.

ಇದನ್ನೂ ಓದಿ:ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ! ಕಾರಣವೇನು ಗೊತ್ತಾ?

ಯಾರು ನಿಮ್ಮ ಬೌಲಿಂಗ್ ಅನ್ನು ಚೆನ್ನಾಗಿ ರೀಡ್ ಮಾಡುತ್ತಿದ್ದರು ಎಂಬ ಪ್ರಶ್ನೆಗೆ, ”ಸಚಿನ್ ಬಹಳ ಚೆನ್ನಾಗಿ ರೀಡ್ ಮಾಡುತ್ತಿದ್ದರು, ಸೀಮ್ ಪೊಸಿಷನ್, ನನ್ನ ಕೈ ಚಲನೆ, ಪಿಚ್ ಎಲ್ಲವನ್ನೂ ರೀಡ್ ಮಾಡಿ ಆಡುತ್ತಿದ್ದರು. ಲಾರಾ ನನ್ನ ವಿರುದ್ಧ ಚೆನ್ನಾಗಿ ಆಡಿದ್ದಾರಾದರೂ ಅವರಿಗೆ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಇನ್ನು ದ್ರಾವಿಡ್ ಅದ್ಭುತವಾದ ಬ್ಯಾಟ್ಸ್​ಮ್ಯಾನ್ ಆದರೆ ಅವರಿಗೂ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಸೆಹ್ವಾಗ್​ಗೆ ಸಹ” ಎಂದರು ಮುರಳೀಧರನ್.

ಯಾವ ಬ್ಯಾಟ್ಸ್​ಮನ್ ಹಾಗೂ ತಂಡಗಳನ್ನು ಔಟ್ ಮಾಡುವುದು ಸುಲಭವಾಗಿತ್ತು ಎಂಬ ಪ್ರಶ್ನೆಗೆ, ಯೂಸಫ್ ಯುಹಾನಾರನ್ನು ಔಟ್ ಮಾಡುವುದು ನನಗೆ ಬಹಳ ಸುಲಭವಾಗಿತ್ತು. ನನ್ನನ್ನು ಕಂಡರೆ ಹೆದರುತ್ತಿದ್ದ ತಂಡಗಳೆಂದರೆ ಅದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎಂದರು ಮುರಳಿಧರನ್. ಇನ್ನು ಸನತ್ ಜಯಸೂರ್ಯ ಮಾತನಾಡಿ, ”ನನಗೆ ವೆಂಕಟೇಶ್ ಪ್ರಸಾದ್ ವಿರುದ್ಧ ಬ್ಯಾಟಿಂಗ್ ಮಾಡಲು ಬಹಳ ಮಜ ಬರುತ್ತಿತ್ತು” ಎಂದು ನೆನಪು ಮಾಡಿಕೊಂಡರು.

‘800’ ಸಿನಿಮಾನಲ್ಲಿ ಬಾಲ್ಯದಿಂದಲೂ ಮುರಳೀಧರನ್ ಪಟ್ಟ ಕಷ್ಟಗಳನ್ನು, ಶ್ರೀಲಂಕಾನಲ್ಲಿ ಅವರು ಎದುರಿಸಿದ ಅವಮಾನ, ಭಯೋತ್ಪಾದನೆ ಎಲ್ಲದನ್ನೂ ದೃಶ್ಯ ರೂಪದಲ್ಲಿ ಕಟ್ಟಿಕೊಡಲಾಗಿದೆ. ಸಿನಿಮಾವನ್ನು ಎಂಎಸ್ ಶ್ರೀಪತಿ ನಿರ್ದೇಶನ ಮಾಡಿದ್ದಾರೆ. ವಿವೇಕ್ ರಂಗಾಚಾರಿ ಮತ್ತು ಟ್ರೈನ್ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಮುರಳೀಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್ ನಟಿಸಿದ್ದಾರೆ.

Published On - 3:58 pm, Wed, 6 September 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್