AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಮಿಲಿ ಜತೆ ‘ಜವಾನ್​’ ಚಿತ್ರ ನೋಡಲಿರುವ ಮಹೇಶ್​ ಬಾಬು; ‘ನಾನೂ ಬರ್ತೀನಿ’ ಎಂದ ಶಾರುಖ್​ ಖಾನ್​

ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ‘ಜವಾನ್​’ ಬಿಡುಗಡೆ ಆಗುತ್ತಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ಜೋರಾಗಿದೆ. ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಹೈಪ್​ ಸಿಕ್ಕಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಮಹೇಶ್​ ಬಾಬು.

ಫ್ಯಾಮಿಲಿ ಜತೆ ‘ಜವಾನ್​’ ಚಿತ್ರ ನೋಡಲಿರುವ ಮಹೇಶ್​ ಬಾಬು; ‘ನಾನೂ ಬರ್ತೀನಿ’ ಎಂದ ಶಾರುಖ್​ ಖಾನ್​
ಮಹೇಶ್​ ಬಾಬು, ಶಾರುಖ್​ ಖಾನ್​
ಮದನ್​ ಕುಮಾರ್​
|

Updated on:Sep 06, 2023 | 5:07 PM

Share

ನಟ ಮಹೇಶ್​ ಬಾಬು (Mahesh Babu) ಅವರು ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆ ನಂಟು ಹೊಂದಿದ್ದಾರೆ. ಬಾಲಿವುಡ್​ ನಟ ಶಾರುಖ್​ ಖಾನ್​ ಜೊತೆಗೂ ಅವರಿಗೆ ಸ್ನೇಹ ಇದೆ. ಈಗ ಶಾರುಖ್​ ಖಾನ್​​ ನಟನೆಯ ‘ಜವಾನ್​’ ಸಿನಿಮಾ (Jawan Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಮಹೇಶ್​ ಬಾಬು ಶುಭ ಕೋರಿದ್ದಾರೆ. ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತಮಿಳುನಾಡು, ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರದ ಕ್ರೇಜ್​ ಜೋರಾಗಿದೆ. ಮಹೇಶ್​ ಬಾಬು ಅವರು ಕೂಡ ಫ್ಯಾಮಿಲಿ ಸಮೇತರಾಗಿ ‘ಜವಾನ್​’ ನೋಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್ ಖಾನ್​ (Shah Rukh Khan) ಅವರು ‘ನಾನೂ ಬರ್ತೀನಿ’ ಎಂದು ಟ್ವೀಟ್​ ಮಾಡಿದ್ದಾರೆ.

ಕಾಲಿವುಡ್​ನ ಸ್ಟಾರ್​ ನಿರ್ದೇಶಕ ಅಟ್ಲಿ ಅವರು ‘ಜವಾನ್’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಸೌತ್​ ಸಿನಿಮಾರಂಗದ ಸೊಗಡು ಕಾಣಿಸಲಿದೆ. ನಯನತಾರಾ, ವಿಜಯ್​ ಸೇತುಪತಿ ಸೇರಿದಂತೆ ದಕ್ಷಿಣ ಭಾರತದ ಅನೇಕರು ನಟಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಹೈಪ್​ ಸಿಕ್ಕಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಮಹೇಶ್​ ಬಾಬು. ಅವರು ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

ಇದನ್ನೂ ಓದಿ: ‘ಜವಾನ್​ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಲಿದೆ’: ಭವಿಷ್ಯ ನುಡಿದ ಮನೋಜ್​ ದೇಸಾಯಿ

‘ಈ ಸಮಯ ಜವಾನ್​ಗೋಸ್ಕರ್​. ಶಾರುಖ್​ ಖಾನ್​ ಅವರ ಪವರ್​ ದೊಡ್ಡ ಪರದೆಯಲ್ಲಿ ಕಾಣಲಿದೆ. ಎಲ್ಲ ಮಾರುಕಟ್ಟೆಯಲ್ಲಿ ಈ ಸಿನಿಮಾ ಸಾರ್ವತ್ರಿಕ ಯಶಸ್ಸು ಗಳಿಸಲಿ ಎಂದು ಜವಾನ್​ ತಂಡಕ್ಕೆ ಹಾರೈಸುತ್ತೇನೆ. ಇಡೀ ಕುಟುಂಬದ ಜೊತೆ ಕುಳಿತು ಈ ಸಿನಿಮಾವನ್ನು ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಟ್ವೀಟ್​ ಮಾಡಿದ್ದಾರೆ. ಇದರಿಂದ ಶಾರುಖ್​ ಖಾನ್​ಗೆ ಮತ್ತು ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

ಮಹೇಶ್​ ಬಾಬು ಟ್ವೀಟ್​:

ಶಾರುಖ್​ ಖಾನ್​ ಪ್ರತಿಕ್ರಿಯೆ:

‘ಧನ್ಯವಾದಗಳು ನನ್ನ ಗೆಳಯ. ನಿಮಗೆ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ನಂಬಿಕೆ ನನಗಿದೆ. ನೀವು ಯಾವಾಗ ಚಿತ್ರಮಂದಿರಕ್ಕೆ ಹೋಗುತ್ತೀರಿ ಅಂತ ಹೇಳಿ. ನಾನು ಕೂಡ ನಿಮ್ಮೊಂದಿಗೆ ಬಂದು ಸಿನಿಮಾ ನೋಡುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪ್ರೀತಿಯ ಅಪ್ಪುಗೆ ಮತ್ತು ಹಾರೈಕೆಗಳು’ ಎಂದು ಶಾರುಖ್​ ಖಾನ್​ ಅವರು ಟ್ವೀಟ್​ ಮಾಡಿದ್ದಾರೆ. ಇಬ್ಬರ ಸ್ನೇಹ ನೋಡಿ ಅಭಿಮಾನಿಗಳಿಗೆ ಸಂತಸ ಪಟ್ಟಿದ್ದಾರೆ.

ಇದನ್ನೂ ಓದಿ: ಎಷ್ಟಾಗಬಹುದು ‘ಜವಾನ್’ ಮೊದಲ ದಿನದ ಕಲೆಕ್ಷನ್? ಬಿಡುಗಡೆಗೂ ಮೊದಲೇ ಲೆಕ್ಕಾಚಾರ ಶುರು

‘ಜವಾನ್​’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ಜೋರಾಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಸ್ಟಾರ್​ ಕಲಾವಿದರ ಸಂಗಮ ಆಗಿರುವುದರಿಂದ ನಿರೀಕ್ಷೆಯ ಮಟ್ಟ ಹೆಚ್ಚಾಗಿದೆ. ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ಬಹಳ ಅದ್ದೂರಿಯಾಗಿ ‘ಜವಾನ್​’ ಸಿದ್ಧವಾಗಿದೆ. ‘ಪಠಾಣ್​’ ರೀತಿಯೇ ಈ ಚಿತ್ರ ಕೂಡ ಸಾವಿರಾರೂ ಕೋಟಿ ರೂಪಾಯಿ ಗಳಿಸಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:11 pm, Wed, 6 September 23

ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ