ಎಷ್ಟಾಗಬಹುದು ‘ಜವಾನ್’ ಮೊದಲ ದಿನದ ಕಲೆಕ್ಷನ್? ಬಿಡುಗಡೆಗೂ ಮೊದಲೇ ಲೆಕ್ಕಾಚಾರ ಶುರು

ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾವು ತೆರೆಗೆ ಬರಲು ಒಂದು ದಿನ ಮಾತ್ರವೇ ಬಾಕಿ ಇದೆ. ಈ ಸಿನಿಮಾದ ಮೊದಲ ದಿನದ (ಸೆ.7) ಕಲೆಕ್ಷನ್ ಬಗ್ಗೆ ಈಗಾಗಲೇ ಚರ್ಚೆ ಜೋರಾಗಿದೆ. ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ‘ಜವಾನ್’ ಚಿತ್ರವು ‘ಪಠಾಣ್’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಲಿದೆ. ಏನಿದು ಲೆಕ್ಕಾಚಾರ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

ಎಷ್ಟಾಗಬಹುದು ‘ಜವಾನ್’ ಮೊದಲ ದಿನದ ಕಲೆಕ್ಷನ್? ಬಿಡುಗಡೆಗೂ ಮೊದಲೇ ಲೆಕ್ಕಾಚಾರ ಶುರು
ಶಾರುಖ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 05, 2023 | 6:49 PM

ನಟ ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಡ್ವಾನ್ಸ್​ ಬುಕ್ಕಿಂಗ್ ಮೂಲಕ ಈಗಾಗಲೇ ಕೋಟಿ ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದೆ. ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ‘ಜವಾನ್’ ಸಿನಿಮಾ (Jawan Movie) ಮೊದಲ ದಿನದ ಕಲೆಕ್ಷನ್​ನಲ್ಲಿ ದಾಖಲೆ ಬರೆಯಲಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ದಿನದ ಗಳಿಕೆಯಲ್ಲಿ ‘ಪಠಾಣ್’ ಸಿನಿಮಾವನ್ನೂ ಇದು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಶಾರುಖ್ ಅಭಿನಯದ ‘ಪಠಾಣ್’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿತ್ತು. ಮೊದಲ ದಿನ 57 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈಗ ‘ಜವಾನ್​’ ಎಷ್ಟು ಕಲೆಕ್ಷನ್​ (Jawan Collection) ಮಾಡಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಜವಾನ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಟ್ರೇಡ್ ವಿಶ್ಲೇಷಕ ಅತುಲ್ ಮೋಹನ್ ಪ್ರತಿಕ್ರಿಯಿಸಿದ್ದಾರೆ. ‘ಜವಾನ್’ ಸಿನಿಮಾ ‘ಪಠಾಣ್’ ಗಳಿಕೆಯನ್ನು ಮೀರಿಸಲಿದೆ. ಹಿಂದಿ ಭಾಷೆಯೊಂದರಲ್ಲೇ ಈ ಚಿತ್ರ 70 ಕೋಟಿ ರೂಪಾಯಿ ಗಳಿಕೆ ಮಾಡಬಹುದು. ಇನ್ನು, ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿದರೆ ಸಿನಿಮಾದ ಮೊದಲ ದಿನದ ಗಳಿಕೆ 80ರಿಂದ 90 ಕೋಟಿ ರೂಪಾಯಿಗೆ ತಲುಪಬಹುದು. ಈ ಸಿನಿಮಾದ ವಿಷಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅತುಲ್​ ಮೋಹನ್​ ಹೇಳಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರವನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟ ಶಾರುಖ್​ ಖಾನ್​ ಅಭಿಮಾನಿಗಳು; ಇಲ್ಲಿದೆ ದೊಡ್ಡ ಪ್ಲ್ಯಾನ್​

ಈ ಕುರಿತು ಬಿಹಾರದ ಪೂರ್ಣಿಯಾ ಜಿಲ್ಲೆಯ ‘ರೂಪ್ ಬನಿ’ ಚಿತ್ರಮಂದಿರದ ಮಾಲೀಕ ವಿಶೇಕ್ ಚೌವ್ಹಾಣ್ ಮಾತನಾಡಿದ್ದಾರೆ. ಮೊದಲ ದಿನದ ಗಳಿಕೆಯಲ್ಲಿ ‘ಪಠಾಣ್’ ಸಿನಿಮಾವನ್ನೂ ‘ಜವಾನ್’ ಮೀರಿಸಲಿದೆ. ಮೊದಲ ದಿನ 65ರಿಂದ 75 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಆದರೆ ‘ಜವಾನ್’ ಸಿನಿಮಾ ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಸಲಿ ಎಂದು ಹಾರೈಸುವೆ. ಬಾಲಿವುಡ್ ಸಿನಿಮಾದ ಗಳಿಕೆ ಹೆಚ್ಚಾದರೆ ಮುಂಬರುವ ದಿನಗಳಲ್ಲಿ ನಿರ್ಮಾಪಕರಿಗೆ ಹಣ ಹೂಡಲು ಧೈರ್ಯ ಸಿಕ್ಕಂತಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಶಾರುಖ್​ ಖಾನ್​ಗೆ ಹೇಳಿ ಜವಾನ್​ ಚಿತ್ರದ ಟಿಕೆಟ್​ ಕೊಡಿಸಿ ಪ್ಲೀಸ್​’: ವಿವೇಕ್​ ಅಗ್ನಿಹೋತ್ರಿ ಬಹಿರಂಗ ಮನವಿ

‘ಪ್ಯಾರಡೈಸ್ ಎಂಟರ್ಟೈನ್​ಮೆಂಟ್’ ಮಾಲೀಕ ರಾಜ್ ಬನ್ಸಾಲ್ ಅವರ ಪ್ರಕಾರ ‘ಜವಾನ್’ ಸಿನಿಮಾ ಮೊದಲ ದಿನ 65 ಕೋಟಿ ರೂಪಾಯಿ ಗಳಿಸಲಿದೆ. ಹಿಂದಿನ ಸಿನಿಮಾದ ಸಕ್ಸಸ್ ಕಾರಣದಿಂದ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಚೆನ್ನಾಗಿ ಆಗುತ್ತಿದೆ. ‘ಪಠಾಣ್’ ಸಿನಿಮಾದ ಯಶಸ್ಸಿನ ಬಳಿಕ ಶಾರುಖ್ ಖಾನ್​ ಹಿಂತಿರುಗಿ ನೋಡುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಜವಾನ್’ ಸಿನಿಮಾ ಕ್ರೇಜ್: ‘ಗೈಟಿ ಗ್ಯಾಲಕ್ಸಿ’ ಚಿತ್ರಮಂದಿರದಲ್ಲಿ ನಿರ್ಮಾಣ ಆಗಲಿದೆ ಹೊಸ ಇತಿಹಾಸ

ನಿರ್ಮಾಪಕ ಹಾಗೂ ಬಾಕ್ಸ್ ಆಫೀಸ್ ವಿಶ್ಲೇಷಕ ಗಿರೀಶ್ ಜೋಹರ್ ‘ಜವಾನ್’ ಸಿನಿಮಾದ ಗಳಿಕೆಯ ಕುರಿತು ಮಾತನಾಡಿದ್ದಾರೆ. ಕೃಷ್ಣ ಜನ್ಮಾಷ್ಟಮಿಯು ಉತ್ತರ ಭಾರತದಲ್ಲಿ ಬಹುದೊಡ್ಡ ಹಬ್ಬ ಆಗಿರುವುದರಿಂದ ಬಹುತೇಕ ಎಲ್ಲಾ ಕಡೆಗಳಲ್ಲಿಯೂ ರಜಾ ಇರುತ್ತದೆ. ಆದ್ದರಿಂದ ‘ಜವಾನ್’ ಮೊದಲ ದಿನ ಅಂದಾಜು 100 ಕೋಟಿ ರೂಪಾಯಿ ಗಳಿಸಲಿದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್