‘ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು ಭಾರತೀಯರು’; ನೇರ ಮಾತುಗಳಲ್ಲಿ ಹೇಳಿದ ಕಂಗನಾ ರಣಾವತ್

ಕಂಗನಾ ಈ ವಿಚಾರದ ಬಗ್ಗೆ ಮಾತನಾಡಿದ್ದು ಇದೇ ಮೊದಲೇನು ಅಲ್ಲ. ಇಂಡಿಯಾ ಎಂಬುದನ್ನು ಭಾರತ ಎಂದು ಮಾಡಬೇಕು ಎಂಬುದು ಅವರು ಈ ಮೊದಲಿನಿಂದಲೂ ಇಡುತ್ತಾ ಬಂದಿರುವ ಬೇಡಿಕೆ. 2021ರಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ‘ಇಂಡಿಯಾ ಅನ್ನೋದು ಬ್ರಿಟಿಷರು ಕೊಟ್ಟ ಹೆಸರು’ ಎಂದು ಅವರು ಹೇಳಿದ್ದರು.

‘ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು ಭಾರತೀಯರು’; ನೇರ ಮಾತುಗಳಲ್ಲಿ ಹೇಳಿದ ಕಂಗನಾ ರಣಾವತ್
ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on: Sep 06, 2023 | 7:47 AM

ಇಂಡಿಯಾ ಹೆಸರನ್ನು ‘ಭಾರತ’ (Bharat) ಎಂದು ಬದಲಾಯಿಸಲಾಗುವುದು ಎನ್ನುವ ಸುದ್ದಿ ಹರಿದಾಡಿದೆ. ದೇಶದ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನವು ವಿಚಾರಕ್ಕೆ ಕುರಿತಂತೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ಕಂಗನಾ ರಣಾವತ್ (Kangana Ranaut) ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು ಭಾರತೀಯರು’ ಎಂದು ಅವರು ಹೆಸರು ಬದಲಾವಣೆ ವಿಚಾರವನ್ನು ಬೆಂಬಲಿಸಿದ್ದಾರೆ. ಅವರ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ. ‘ಕಂಗನಾ ಬಿಜೆಪಿ ಬೆಂಬಲಿಗರು ಅನ್ನೋದು ಗೊತ್ತಿದೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಹೆಸರಿನಲ್ಲಿ (ಇಂಡಿಯಾ) ಪ್ರೀತಿಸಲು ಏನಿದೆ? ಮೊದಲನೆಯದಾಗಿ ಅವರಿಗೆ (ಬ್ರಿಟಿಷರಿಗೆ) ಸಿಂಧು ಎಂಬುದನ್ನು ಉಚ್ಚರಿಸಲು ಬರುತ್ತಿರಲಿಲ್ಲ. ಹೀಗಾಗಿ, ಇಂಡಸ್ ಎಂದು ಕರೆದರು. ಆ ಬಳಿಕ ಕೆಲವರು ಹಿಂದೋಸ್ ಎಂದರೆ, ಇನ್ನೂ ಕೆಲವರು ಇಂಡೋಸ್ ಎಂದರು. ಕೊನೆಗೆ ಇಂಡಿಯಾ ಎಂದು ಮಾಡಿದರು. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ರಾಜ್ಯಗಳು ಭಾರತ ಎಂಬ ಒಂದು ಖಂಡದ ಅಡಿಯಲ್ಲಿ ಬಂದವು. ಆದರೆ ಅವರು (ಬ್ರಿಟಿಷರು) ನಮ್ಮನ್ನು ಇಂದೂ, ಸಿಂಧು ಎಂದು ಕರೆದಿದ್ದು ಏಕೆ’ ಎಂಬುದಾಗಿ ಕಂಗನಾ ಪ್ರಶ್ನೆ ಮಾಡಿದ್ದಾರೆ.

‘ಭಾರತ ಎಂಬ ಹೆಸರು ಎಷ್ಟು ಅರ್ಥಪೂರ್ಣವಾಗಿದೆ. ಆದರೆ ಇಂಡಿಯಾ ಎಂಬುದರ ಅರ್ಥವೇನು? ನಮ್ಮನ್ನು ರೆಡ್ ಇಂಡಿಯನ್ಸ್ ಎಂದು ಕರೆಯುತ್ತಿದ್ದರು. ಈ ಮೊದಲು ಬಳಕೆ ಆಗುತ್ತಿದ್ದ ಇಂಗ್ಲಿಷ್‌ನಲ್ಲಿ ಇದರ ಅರ್ಥ ಗುಲಾಮರು ಎಂದು. ಇಂಡಿಯನ್ಸ್ ಎಂದು ಹೆಸರು ಇಟ್ಟಿದ್ದು ಬ್ರಿಟಿಷರು. ಅದು ಅವರು ನಮಗೆ ನೀಡಿದ ಗುರುತು. ಹಳೆಯ ದಿನಗಳ ನಿಘಂಟಿನಲ್ಲಿ ಸಹ ಇಂಡಿಯನ್ಸ್ ಎಂಬುದರ ಅರ್ಥವನ್ನು ಗುಲಾಮ ಎಂದು ಉಲ್ಲೇಖಿಸಲಾಗಿತ್ತು. ಅವರು ಅದನ್ನು ಇತ್ತೀಚೆಗೆ ಬದಲಾಯಿಸಿದರು. ಇದು ನಮ್ಮ ಹೆಸರಲ್ಲ ನಾವು ಇಂಡಿಯನ್ಸ್ ಅಲ್ಲ ಭಾರತೀಯರು’ ಎಂದು ಹೇಳಿದ್ದಾರೆ ಕಂಗನಾ.

ಇದನ್ನೂ ಓದಿ: ಚಂದ್ರಮುಖಿ ಆಗಿ ಬಂದ ಕಂಗನಾ ರಣಾವತ್; ಪುನರ್ಜನ್ಮದ ಕಥೆ ಹೇಳಲಿದೆ ‘ಚಂದ್ರಮುಖಿ 2’ ಸಿನಿಮಾ

ಕಂಗನಾ ಈ ವಿಚಾರದ ಬಗ್ಗೆ ಮಾತನಾಡಿದ್ದು ಇದೇ ಮೊದಲೇನು ಅಲ್ಲ. ಇಂಡಿಯಾ ಎಂಬುದನ್ನು ಭಾರತ ಎಂದು ಮಾಡಬೇಕು ಎಂಬುದು ಅವರು ಈ ಮೊದಲಿನಿಂದಲೂ ಇಡುತ್ತಾ ಬಂದಿರುವ ಬೇಡಿಕೆ. 2021ರಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ‘ಇಂಡಿಯಾ ಅನ್ನೋದು ಬ್ರಿಟಿಷರು ಕೊಟ್ಟ ಹೆಸರು’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?