
ಎಸ್ಎಸ್ ರಾಜಮೌಳಿ ಸಿನಿಮಾ ಅನೌನ್ಸ್ ಮಾಡಿದರು ಎಂದರೆ ಅದರ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗುತ್ತವೆ. ಪಾತ್ರಧಾರಿಗಳ ಪರಿಚಯಿಸಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಆದರೆ, ಈ ಬಾರಿ ಯಾಕೋ ರಾಜಮೌಳಿ (Rajamouli) ಅದೃಷ್ಟ ಕೈ ಕೊಟ್ಟಂತೆ ಕಾಣುತ್ತಿದೆ. ಅವರು ತಮ್ಮ ಹೊಸ ಸಿನಿಮಾದ ವಿಲನ್ ಪಾತ್ರವನ್ನು ಪರಿಚಯಿಸಿದ್ದಾರೆ. ಈ ಪಾತ್ರದ ಪೋಸ್ಟರ್ ಸಿನಿಮಾಗೆ ಹೈಪ್ ನೀಡುವ ಬದಲು ಟ್ರೋಲಿಗರಿಗೆ ಆಹಾರ ಆಗಿದ್ದಾರೆ.
‘ಎಸ್ಎಸ್ಎಂಬಿ 29’ ಹೆಸರಿನ ಸಿನಿಮಾನ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾದ ಟೈಟಲ್ ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ. ಅದಕ್ಕೂ ಮೊದಲು ಚಿತ್ರದ ವಿಲನ್ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ರಾಜಮೌಳಿ ಅವರು ಪರಿಚಯಿಸಿದರು.
‘ಕುಂಭ’ ಹೆಸರಿನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಅವರು ಚೇರ್ ಮೇಲೆ ಕುಳಿತಿದ್ದಾರೆ. ಆ ಚೇರ್ ವಿಚಿತ್ರವಾಗಿದೆ. ಅದಕ್ಕೆ ಎರಡು ಚಕ್ರ ಇದೆ. ಪೃಥ್ವಿರಾಜ್ ಕಾಲು ಸರಿ ಇಲ್ಲ ಎಂಬುದು ಪೋಸ್ಟರ್ನಲ್ಲಿ ಕಾಣಿಸುತ್ತದೆ. ಈ ಚೇರ್ಗೆ ಚಿತ್ರ ವಿಚಿತ್ರವಾದ ಕೈಗಳಿವೆ. ಇದು ಯಾವುದೋ ಹಾಲಿವುಡ್ ಸಿನಿಮಾದಿಂದ ಕದಿಯಲ್ಪಟ್ಟ ಪೋಸ್ಟರ್ ಎಂಬ ಆರೋಪ ಒಂದು ಕಡೆಯಾದರೆ, ಟ್ರೋಲ್ಗಳ ಕಾಟ ಮತ್ತೊಂದು ಕಡೆ.
ಇದನ್ನೂ ಓದಿ: ಪವರ್ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?
ಸದ್ಯ ಈ ಪೋಸ್ಟರ್ ಸಾಕಷ್ಟು ಟ್ರೋಲ್ಗಳನ್ನು ಎದುರಿಸುತ್ತಿದೆ. ಈ ಪೋಸ್ಟರ್ಗೆ ವಿವಿಧ ರೀತಿಯ ಟ್ರೋಲ್ಗಳು ಎದುರಾಗುತ್ತಿವೆ. ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಕೆ ಮಾಡಿಕೊಂಡು ಈ ಪೋಸ್ಟರ್ ಅನ್ನು ಟೀಕಿಸುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.