AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವರ್​ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?

Rajamouli-Mahesh Babu: ರಾಜಮೌಳಿ ತಮ್ಮ ಹೊಸ ಸಿನಿಮಾದ ಎರಡನೇ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೊದಲ ಪೋಸ್ಟರ್​​ನಲ್ಲಿ ಶಿವ ಮತ್ತು ನಂದಿಯ ಡಾಲರ್ ಹೊರತಾಗಿ ಏನೂ ಇರಲಿಲ್ಲ. ಆದರೆ ಈ ಬಾರಿ ತಮ್ಮ ಸಿನಿಮಾದ ಪವರ್​ಫುಲ್ ವಿಲನ್​​ನ ಪವರ್​​ಫುಲ್ ಪೋಸ್ಟರ್ ಅನ್ನೇ ಬಿಡುಗಡೆ ಮಾಡಿದ್ದಾರೆ. ಇಲ್ಲಿದೆ ನೋಡಿ, ರಾಜಮೌಳಿ ಸಿನಿಮಾದ ವಿಲನ್ ಕುರಿತಾದ ಮಾಹಿತಿ...

ಪವರ್​ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?
Kumbha
ಮಂಜುನಾಥ ಸಿ.
|

Updated on:Nov 07, 2025 | 1:35 PM

Share

ರಾಜಮೌಳಿಯ (Rajamouli) ಮುಂದಿನ ಸಿನಿಮಾಕ್ಕಾಗಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಯಾವ ಗುಟ್ಟುಗಳನ್ನೂ ಸಹ ರಾಜಮೌಳಿ ಈ ವರೆಗೆ ಬಿಟ್ಟುಕೊಟ್ಟಿರಲಿಲ್ಲ. ಕೇವಲ ಒಂದು ಪೋಸ್ಟರ್ ಅಷ್ಟೆ ಈ ಹಿಂದೆ ಬಿಡುಗಡೆ ಆಗಿತ್ತು. ಇಂದು (ನವೆಂಬರ್ 07) ಸಿನಿಮಾದ ವಿಲನ್ ಪೋಸ್ಟರ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ ರಾಜಮೌಳಿ.

ರಾಜಮೌಳಿಯ ಸಿನಿಮಾಗಳಲ್ಲಿ ವಿಲನ್​​ಗಳಳಿಗೆ ಹೀರೋಗಳಷ್ಟೆ ಪ್ರಾಧಾನ್ಯತೆ ಇರುತ್ತದೆ. ಅತ್ಯುತ್ತಮ ನಟರನ್ನೇ ವಿಲನ್ ಪಾತ್ರಕ್ಕೆ ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ, ‘ಈಗ’ ಸಿನಿಮಾನಲ್ಲಿ ಸುದೀಪ್, ‘ಬಾಹುಬಲಿ’ ಸಿನಿಮಾನಲ್ಲಿ ರಾಣಾ ದಗ್ಗುಬಾಟಿ, ‘ಆರ್​​ಆರ್​​ಆರ್’ನಲ್ಲಿ ಹಾಲಿವುಡ್ ನಟ, ಇದೀಗ ರಾಜಮೌಳಿ ತಮ್ಮ ಮುಂದಿನ ಸಿನಿಮಾನಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ವಿಲನ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಪೃಥ್ವಿರಾಜ್ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ರಾಜಮೌಳಿ ಸಿನಿಮಾಗಳಲ್ಲಿ ವಿಲನ್​​ಗಳು ದೈತ್ಯ ದೇಹಿಗಳಾಗಿ ಕಾಣಿಸಿಕೊಳ್ಳುವುದು ಹೆಚ್ಚು ಆದರೆ ಈ ಸಿನಿಮಾನಲ್ಲಿ ಪೃಥ್ವಿರಾಜ್ ಅಂಗವಿಕಲನ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಸಿನಿಮಾದ ಪ್ರಮುಖ ವಿಲನ್ ಆಗಿದ್ದರೂ ಸಹ ಅವರದ್ದು ಅಂಗವಿಕಲನ ಪಾತ್ರ. ಆದರೆ ತಂತ್ರಜ್ಞಾನದ ನೆರವಿನಿಂದ ತಾನು ಅಂದುಕೊಂಡಿದ್ದನ್ನು ಸಾಧಿಸಲು ಹೊರಟಿರುವ ಪಾತ್ರವದು.

ಇದನ್ನೂ ಓದಿ:ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್​: ಯಾವಾಗ?

ಈಗ ಬಿಡುಗಡೆ ಆಗಿರುವ ಪೋಸ್ಟರ್​​ನಲ್ಲಿ ಪೃಥ್ವಿರಾಜ್ ಸುಕುಮಾರ್ ವೀಲ್​ಚೇರ್​​ ಮೇಲೆ ಕೂತು ಕೋಪದಿಂದ ಮುನ್ನುಗ್ಗುತ್ತಿದ್ದಾರೆ. ಅವರ ಎರಡು ಕಾಲುಗಳು, ಒಂದು ಕೈ ಬಡಲಾಗಿ ಸ್ವಾಧೀನ ಇಲ್ಲದಿರುವುದು ತಿಳಿಯುತ್ತಿದೆ. ಆದರೆ ಅವರು ಕೂತಿರುವ ವ್ಹೀಲ್​​ಚೇರ್ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಭರ್ತಿಯಾಗಿದೆ. ಅವರ ವ್ಹೀಲ್​​ ಚೇರ್​​ಗೆ ನಾಲ್ಕು ಕೈಗಳಿವೆ. ‘ಸ್ಪೈಡರ್​​ಮ್ಯಾನ್’ ಸಿನಿಮಾದ ವಿಲನ್ ಡಾ ಅಕ್ಟೋಪಸ್ ಬೆನ್ನಿಗೆ ಇದ್ದ ಕೈಗಳನ್ನು ಇವು ಹೋಲುತ್ತಿವೆ. ವ್ಹೀಲ್​ ಚೇರ್​​ಗೆ ದೊಡ್ಡ ಕುರ್ಚಿ ಇದೆ. ದೊಡ್ಡ ಚಕ್ರಗಳು ಇವೆ. ಒಟ್ಟಾರೆ ಪೃಥ್ವಿರಾಜ್ ಬಹಳ ಬುದ್ಧಿವಂತ, ತಂತ್ರಜ್ಞಾನ ಪರಿಣಿತ ವಿಲನ್ ರೀತಿ ಪೋಸ್ಟರ್​​ನಲ್ಲಿ ಕಾಣುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ‘ಕುಂಭ’.

ಪೋಸ್ಟರ್ ಹಂಚಿಕೊಂಡಿರುವ ರಾಜಮೌಳಿ, ಪೃಥ್ವಿರಾಜ್ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಪೃಥ್ವಿರಾಜ್ ಸುಕುಮಾರ್ ಅವರ ಮೊದಲ ಶಾಟ್ ತೆಗೆದ ಕೂಡಲೇ ಅವರ ಬಳಿಗೆ ಹೋಗಿ, ‘ನನಗೆ ಪರಿಚಯವಿರುವ ನಟರಲ್ಲೇ ಅತ್ಯುತ್ತಮ ನಟ ನೀವು’ ಎಂದು ಹೇಳಿದೆ’ ಎಂದಿದ್ದಾರೆ ರಾಜಮೌಳಿ. ಮುಂದುವರೆದು, ‘ಈ ದುಷ್ಟ, ನಿರ್ದಯಿ, ಪ್ರಭಾವಶಾಲಿ ವಿಲನ್ ಕುಂಭಾ ಪಾತ್ರಕ್ಕೆ ಜೀವ ತುಂಬಿದ್ದು ನಿರ್ದೇಶಕನಾಗಿ ತುಂಬಾ ತೃಪ್ತಿಕರವಾಗಿತ್ತು. ಈ ಪಾತ್ರಕ್ಕೆ ಜೀವ ತುಂಬಲ ಒಪ್ಪಿಕೊಂಡಿದ್ದಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Fri, 7 November 25

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್