ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆದ ಶ್ರೀಕಾಂತ್ ತಿವಾರಿ; ಜೈದೀಪ್ ವಿಲನ್
ಟ್ರೇಲರ್ನಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್ನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಸಾಕಷ್ಟು ಆ್ಯಕ್ಷನ್ಗಳು ಕೂಡ ಇವೆ.

ಅತ್ಯಂತ ಯಶಸ್ವಿ ಸೀರಿಸ್ಗಳಲ್ಲಿ ಮನೋಜ್ ಬಾಜ್ಪಾಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಕೂಡ ಒಂದು. ಈಗಾಗಲೇ ಎರಡು ಸರಣಿಗಳು ಇದರಲ್ಲಿ ಬಂದಿವೆ. ಈಗ ಮೂರನೇ ಸರಣಿ ಬರೋಕೆ ರೆಡಿ ಆಗಿದೆ. ನವೆಂಬರ್ 21ರಂದು ‘ಫ್ಯಾಮಿಲಿ ಮ್ಯಾನ್ 3’ ಬರಲಿದೆ. ಅದಕ್ಕೂ ಮೊದಲು ವೆಬ್ ಸೀರಿಸ್ನ ಟ್ರೇಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುವ ರೀತಿಯಲ್ಲಿ ಇದೆ. ಜೈದೀಪ್ ವಿಲನ್ ಪಾತ್ರ ಮಾಡುತ್ತಿದ್ದಾರೆ.
ಶ್ರೀಕಾಂತ್ ತಿವಾರಿ (ಮನೋಜ್) ತಾನು ಮಾಡುತ್ತಿರುವ ಕೆಲಸ ಏನು ಎಂಬುದನ್ನು ಮನೆಯವರಿಂದ ಮುಚ್ಚಿಟ್ಟಿದ್ದ. ಈಗ ಅನಿವಾರ್ಯವಾಗಿ ಅದನ್ನು ಹೇಳಲೇಬೇಕಾಗಿದೆ. ‘ನಾನೋರ್ವ ಏಜೆಂಟ್’ ಎಂದು ಹೇಳಿದಾಗ ‘ಟ್ರಾವೆಲ್ ಏಜೆಂಟ್ ಅಲ್ವ’ ಎಂಬ ಪ್ರಶ್ನೆ ಮಗನಿಂದ ಬರುತ್ತದೆ. ಇದನ್ನು ಕೇಳಿ ನಗಬೇಕೋ ಅಥವಾ ಅಳಬೇಕೋ ಎಂಬುದು ಶ್ರೀಕಾಂತ್ಗೆ ಗೊತ್ತಾಗೋದಿಲ್ಲ.
ಟ್ರೇಲರ್ನಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್ನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಸಾಕಷ್ಟು ಆ್ಯಕ್ಷನ್ಗಳು ಕೂಡ ಇವೆ.
agent Srikant Tiwari 𝚛̶𝚎̶𝚙̶𝚘̶𝚛̶𝚝̶𝚒̶𝚗̶𝚐̶ ̶𝚘̶𝚗̶ ̶𝚍̶𝚞̶𝚝̶𝚢̶ ̶ is on the run 👀#TheFamilyManOnPrime, New Season, November 21@rajndk @sumank @TussharSeyth @Sumitaroraa @BajpayeeManoj @JaideepAhlawat @NimratOfficial #Priyamani @sharibhashmi @ashleshaat… pic.twitter.com/BQQuPQWqC6
— prime video IN (@PrimeVideoIN) November 7, 2025
‘ಪಾತಾಳ್ ಲೋಕ್’ ರೀತಿಯ ವೆಬ್ ಸೀರಿಸ್ಗಳಲ್ಲಿ ನಟಿಸಿದ್ದ ಜೈದೀಪ್ ಅಹ್ಲಾವತ್ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಪ್ರಿಯಾಮಣಿ, ಶರೀಬ್ ಹಷ್ಮಿ ಸೇರಿದಂತೆ ಅನೇಕ ಕಲಾವಿದರು ಈ ಸರಣಿಯಲ್ಲೂ ಮುಂದುವರಿದಿದ್ದಾರೆ. ಈ ಸರಣಿಗೆ ರಾಜ್ ಹಾಗೂ ಡಿಕೆ ನಿರ್ದೇಶನ ಇದೆ.
ಇದನ್ನೂ ಓದಿ: ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್
‘ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಡೋ ಕಷ್ಟಗಳು ಒಂದೆರಡಲ್ಲ. ಅದು ಈ ಸರಣಿಯಲ್ಲೂ ಮುಂದುವರಿದಿದೆ. ಶ್ರೀಕಾಂತ್ ಹಾಗೂ ಜೆಕೆ ನಡುವಿನ ಕೆಮಿಸ್ಟ್ರಿ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:45 pm, Fri, 7 November 25




