AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ; ಕ್ಷಮೆಯಾ ಅಥವಾ ಟಾಂಟ್?

ಜೀ ಕನ್ನಡ ವಾಹಿನಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ "ಕ್ಷಮೆ" ಕೇಳಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ತಮ್ಮ ಕಾರ್ಯಕ್ರಮಗಳಿಂದ ಪ್ರೇಕ್ಷಕರು ಇತರ ಚಾನೆಲ್‌ಗಳನ್ನು ಮರೆಯುವಂತೆ ಮಾಡಿದ್ದಕ್ಕೆ ಕ್ಷಮೆ ಎಂಬುದು ಪೋಸ್ಟ್‌ನ ಸಾರಾಂಶ. ಆದರೆ, ಅನೇಕರು ಇದನ್ನು ಪ್ರತಿಸ್ಪರ್ಧಿ ವಾಹಿನಿಗಳಿಗೆ ನೀಡಿದ ಟಾಂಟ್ ಎಂದು ವ್ಯಾಖ್ಯಾನಿಸಿದ್ದಾರೆ.

ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ; ಕ್ಷಮೆಯಾ ಅಥವಾ ಟಾಂಟ್?
ಜೀ ಕನ್ನಡ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 08, 2025 | 1:45 PM

Share

ಜೀ ಕನ್ನಡ ವಾಹಿನಿಯು ಹಲವು ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಾ ಬರುತ್ತಿದೆ. ವಿವಿಧ ರೀತಿಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನು ನೀಡುತ್ತಾ ಬರುತ್ತಿದೆ. ಈಗ ಜೀ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್​ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್​ನಲ್ಲಿ ಜೀ ವಾಹಿನಿ ಕ್ಷಮೆ ಕೇಳಿದೆ. ಅಷ್ಟಕ್ಕೂ ಕ್ಷಮೆ ಕೇಳಲು ಅವರು ಮಾಡಿದ ತಪ್ಪೇನು? ಆ ಬಗ್ಗೆ ಇಲ್ಲಿದೆ ತಿಳಿದುಕೊಳ್ಳೋಣ.

ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದೆ. ಧಾರಾವಾಹಿಗಳ ವಿವಿಧ ಪ್ರೋಮೋ ಹಾಗೂ ರಿಯಾಲಿಟಿ ಶೋಗಳ ಪ್ರೋಮೋಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಆದರೆ, ಈಗ ಒಂದು ಹೊಸ ಪೋಸ್ಟ್​ನ ಜೀ ಕನ್ನಡ ಹಂಚಿಕೊಂಡಿದೆ. ಇದು ಕ್ಷಮೆ ಪೋಸ್ಟ್ ಆದರೂ ಕೆಲವರು ಇದನ್ನು ಟಾಂಟ್ ಎಂದು ಕರೆದಿದ್ದಾರೆ.

‘ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ. ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ’ ಎಂದು ಪೋಸ್ಟ್ ಆರಂಭಿಸಲಾಗಿದೆ.

View this post on Instagram

A post shared by Zee Kannada (@zeekannada)

‘ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ಧನ್ಯವಾದಗಳು’ ಎಂದು ಬರೆಯಲಾಗಿದೆ. ಇದು ಅವರ ಪ್ರತಿ ಸ್ಪರ್ಧಿ ಚಾನೆಲ್​ಗಳಿಗೆ ನೀಡಿದ ಟಾಂಟ್ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ

ಜೀ ಕನ್ನಡ ವಾಹಿನಿಯು ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸುತ್ತಾ ಇದೆ. ಕನ್ನಡದ ಟಾಪ್ ಐದರಲ್ಲಿ ಇರುವ ಧಾರಾವಾಹಿಗಳ ಪೈಕಿ ಎಲ್ಲವೂ ಜೀ ಕನ್ನಡ ವಾಹನಿಯದ್ದೇ ಆಗಿರುತ್ತವೆ ಎಂಬುದು ವಿಶೇಷವಾಗಿದೆ. ಈಗ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳು ಶೋಗೆ ಹೊಸ ಸೀಸನ್ ಬರುತ್ತಾ ಇದೆ. ‘ಮಹಾನಟಿ ಶೋ’ಗೆ ಇಂದು (ನವೆಂಬರ್ 8) ಹಾಗೂ ನಾಳೆ (ನವೆಂಬರ್ 9) ಫಿನಾಲೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.