ಕಾವ್ಯಾ ಕ್ಯಾರೆಕ್ಟರ್ಗೆ ಧಕ್ಕೆ ತಂದ ಚಂದ್ರಪ್ರಭಗೆ ಚಳಿಬಿಡಿಸಿದ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಮಸಿ ಬಳಿಯುವ ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ನಡೆಯುವಾಗ ಚಂದ್ರಪ್ರಭ ಅವರು ಕಾವ್ಯಾ ಹಾಗೂ ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಈ ಮಾತು ಅದೆಷ್ಟು ಕೆಟ್ಟದಾಗಿತ್ತು ಎಂದರೆ ಕಾವ್ಯಾ ಬೇಸರ ಮಾಡಿಕೊಂಡರು. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಚಂದ್ರಪ್ರಭ ಅವರು ಯಾವಾಗ ಏನು ಮಾತನಾಡುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಅವರು ಏನು ಮಾತನಾಡುತ್ತಾರೆ ಎಂಬ ಪರಿಜ್ಞಾನ ಅವರಿಗೇ ಇರೋದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಾ ಇದೆ. ಕಳೆದ ವಾರ ಅವರು ಕಾವ್ಯಾ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದನ್ನು ಸುದೀಪ್ ಅವರು ಖಂಡಿಸಿ, ಚಂದ್ರಪ್ರಭಗೆ ಮೈಚಳಿ ಬಿಡಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಮಸಿ ಬಳಿಯುವ ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ನಡೆಯುವಾಗ ಚಂದ್ರಪ್ರಭ ಅವರು ಕಾವ್ಯಾ ಹಾಗೂ ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಈ ಮಾತು ಅದೆಷ್ಟು ಕೆಟ್ಟದಾಗಿತ್ತು ಎಂದರೆ ಕಾವ್ಯಾ ಬೇಸರ ಮಾಡಿಕೊಂಡರು. ‘ಕಾವ್ಯಾ ಹಾಗೂ ಗಿಲ್ಲಿ ಒಟ್ಟಾಗಿರುತ್ತಾ ಇದ್ದಾರೆ. ಇವರನ್ನು ಅನೇಕರು ತಪ್ಪಾಗಿ ತಿಳಿದುಕೊಳ್ಳಬಹುದು. ನನ್ನ ತಂಗಿ (ಕಾವ್ಯಾ) ಮದುವೆ ಎಂಬುದು ಬಂದಾಗ ಅದು ಸಮಸ್ಯೆ ತರಬಹುದು’ ಎಂದು ಚಂದ್ರಪ್ರಭ ಹೇಳಿದ್ದರು. ಅವರು ಹೇಳಿದ್ದು ಸರಳ ಎನಿಸಿದರೂ ಅದು ಕಾವ್ಯಾ ಕ್ಯಾರೆಕ್ಟರ್ನ ನಾಶ ಮಾಡುವಂತೆ ಇತ್ತು. ಹೇಳುವಾಗ ಅವರ ಎಕ್ಸ್ಪ್ರೆಷನ್ ಬೇರೆ ರೀತಿಯಲ್ಲಿ ಇತ್ತು.
ಈ ವಿಚಾರ ಸರಿ ಅಲ್ಲ ಎಂದು ಸುದೀಪ್ ಹೇಳಿದರು. ಇದಕ್ಕೆ ಕಾರಣವನ್ನೂ ಸುದೀಪ್ ವಿವರಿಸಿದರು. ಚಂದ್ರಪ್ರಭ ಅವರು, ರಿಷಾ ಜೊತೆ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಕಾವ್ಯಾ ಹಾಗೂ ಗಿಲ್ಲಿ ಕೈ ಕೈ ಹಿಡಿದು ಓಡಾಡುತ್ತಾರೆ ಎಂಬ ವಿಚಾರವನ್ನು ಕೆಟ್ಟದಾಗಿ ಬಣ್ಣಿಸಿದ್ದರು ಚಂದ್ರಪ್ರಭ. ಆದರೆ, ಈ ರೀತಿ ಆರೋಪ ಮಾಡುವ ಅವರೇ, ರಿಷಾ ಜೊತೆ ಕೈ ಕೈ ಹಿಡಿದು ಸುತ್ತಾಡೋದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದರು. ಇದರ ವಿಡಿಯೋನೂ ಹಾಕಿದರು. ಇದಾದ ಬಳಿಕ ಸುದೀಪ್ ಅವರು ‘ತಂಗಿ ಎಂದು ಕರೆಯುವ ನೀವು ಈ ರೀತಿಯ ವಿಚಾರಗಳನ್ನು ವೈಯಕ್ತಿಕವಾಗಿ ಕರೆದು ಹೇಳಬೇಕು’ ಎಂದರು. ಆ ಬಳಿಕ ಅವರು ಕ್ಷಮೆ ಕೇಳಿದರು.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್
ಚಂದ್ರಪ್ರಭ ಅವರು ಯಾವ ಕ್ಷಣಕ್ಕೆ ಯಾವ ರೀತಿ ಮಾತನಾಡುತ್ತಾರೆ ಎಂದು ಅವರಿಗೆ ತಿಳಿಯುವುದಿಲ್ಲ. ಅಷ್ಟು ದೊಡ್ಡ ವೇದಿಕೆ ಮೇಲೆ ಹೇಳಲು ಸಾಕಷ್ಟು ವಿಚಾರ ಇರುವಾಗ ಇದನ್ನು ಏಕೆ ಹೇಳಬೇಕಿತ್ತು ಎಂದು ವೀಕ್ಷಕರು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:07 pm, Sat, 8 November 25



