ರಕ್ಷಿತಾ ಶೆಟ್ಟಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್
ಕಿಚ್ಚ ಸುದೀಪ್ ಅವರು ಈ ವಾರ ಬರುತ್ತಿದ್ದಂತೆ ಸುಧಿ ಬಳಿ ಮಾತನಾಡಿದರು. ‘ಇಡೀ ಮನೆಯ ಶಾಂತಿಯನ್ನು ಯಾರು ಹಾಳು ಮಾಡುತ್ತಿದ್ದಾರೆ’ ಎಂದು ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಸುಧಿ ಅವರು, ‘ಅಶ್ವಿನಿ, ರಿಷಾ’ ಹೆಸರು ತೆಗೆದುಕೊಂಡರು. ವಾರವಿಡೀ ರಕ್ಷಿತಾ ಹೆಸರು ತೆಗೆದುಕೊಳ್ಳುತ್ತಿದ್ದ ಸುಧಿ ಅವರು ಸುದೀಪ್ ಎದುರು ಸೈಲೆಂಟ್ ಆದರು.

ಬಿಗ್ ಬಾಸ್ ಮನೆಯಲ್ಲಿ ಮಂಗಳೂರಿನ ರಕ್ಷಿತಾ ಶೆಟ್ಟಿ (Rakshitha Shetty) ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟ ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರನ್ನು ಮನೆಯಲ್ಲಿ ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಾ ಇದೆ. ರಕ್ಷಿತಾನ ವಿರುದ್ಧ ಸುಳ್ಳು ಆರೋಪಗಳು ಕೇಳಿ ಬಂದಾಗ ಪ್ರತಿ ವಾರ ಸುದೀಪ್ ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಈ ವಾರವೂ ಅದನ್ನು ಮುಂದುವರಿಸಿದ್ದಾರೆ ಸುದೀಪ್. ಪದೇ ಪದೇ ರಕ್ಷಿತಾನ ಟಾರ್ಗೆಟ್ ಮಾಡುತ್ತಿದ್ದ ಸುಧಿಗೆ ಪಾಠ ಕಲಿಸಿದ್ದಾರೆ ಕಿಚ್ಚ.
ಕಿಚ್ಚ ಸುದೀಪ್ ಅವರು ಈ ವಾರ ಬರುತ್ತಿದ್ದಂತೆ ಸುಧಿ ಬಳಿ ಮಾತನಾಡಿದರು. ‘ಇಡೀ ಮನೆಯ ಶಾಂತಿಯನ್ನು ಯಾರು ಹಾಳು ಮಾಡುತ್ತಿದ್ದಾರೆ’ ಎಂದು ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ಸುಧಿ ಅವರು, ‘ಅಶ್ವಿನಿ, ರಿಷಾ’ ಹೆಸರು ತೆಗೆದುಕೊಂಡರು. ವಾರವಿಡೀ ರಕ್ಷಿತಾ ಹೆಸರು ತೆಗೆದುಕೊಳ್ಳುತ್ತಿದ್ದ ಸುಧಿ ಅವರು ಸುದೀಪ್ ಎದುರು ಸೈಲೆಂಟ್ ಆದರು. ಆ ಬಳಿಕ ರಕ್ಷಿತಾ, ಹೆಸರು ಬಿಟ್ರಲ್ಲ ಎಂದು ಸುದೀಪ್ ಅವರು ಪರೋಕ್ಷವಾಗಿ ಕೇಳಿದರು.
ಆ ಬಳಿಕ ಸುಧಿ ಮಾಡಿದ ತಪ್ಪನ್ನು ಎತ್ತಿ ತೋರಿಸಿದರು ಸುದೀಪ್. ಸುಧಿ ಅವರು ಹಸಿದಾಗ, ರಕ್ಷಿತಾ ಶೆಟ್ಟಿ ಅವರ ಪೇರಲೆ ಹಣ್ಣನ್ನು ಕದ್ದು ತಿಂದಿದ್ದರು. ಈ ವಿಡಿಯೋನ ಸುದೀಪ್ ತೋರಿಸಿದರು. ಆ ಬಳಿಕ ರಕ್ಷಿತಾಗೆ ಶಾಕ್ ಆಯಿತು. ಈ ವಿಡಿಯೋ ತೋರಿಸದ ಬಳಿಕ ಸುದೀಪ್ ಅವರು ರಕ್ಷಿತಾ ಅವರಿಗೆ ವಿಶೇಷ ಅಧಿಕಾರ ನೀಡಿದರು.
ಇದನ್ನೂ ಓದಿ: ‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ ಶೆಟ್ಟಿ
ಮೂರನೇ ವಾರದಲ್ಲಿ ನಡೆದ ಮೊದಲ ಫಿನಾಲೆಯಲ್ಲಿ ಸುಧಿ ಗೆದ್ದಿದ್ದಾರೆ. ಈ ಕಾರಣಕ್ಕೆ ಅವರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಇದರ ಪ್ರಕಾರ ಅವರಿಗೆ ಒಂದು ಚೈನ್ ಕೊಡಲಾಗಿದೆ. ಇದನ್ನು ಬಳಸಿಕೊಂಡು ಅವರು ಯಾವಾಗ ಬೇಕಿದ್ದರೂ ನಾಮಿನೇಷನ್ನಿಂದ ಬಚಾವ್ ಆಗಬಹುದಾಗಿದೆ. ಈ ಚೈನ್ನ ಕದ್ದುಕೊಂಡರೆ ಆ ವಿಶೇಷ ಪವರ್ ರಕ್ಷಿತಾ ಪಾಲಾಗುತ್ತದೆ ಎಂದರು ಸುದೀಪ್. ಈ ವಿಶೇಷ ಅಧಿಕಾರ ರಕ್ಷಿತಾಗೆ ಮಾತ್ರ ಇರೋದಾಗಿ ಸುದೀಪ್ ಅವರು ಹೇಳಿದರು. ಇದನ್ನು ಕೇಳಿ ಸುಧಿ ಅವರು ಬೇಡ ಅಣ್ಣ, ಬೇಡ ಅಣ್ಣ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



