Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಪ್ರಕರಣ: ಜೂ ಎನ್​ಟಿಆರ್, ರಾಮ್ ಚರಣ್, ಶಾರುಖ್ ಅನ್ನು ಬಂಧಿಸಲಿಲ್ಲ ಏಕೆ?

Allu Arjun: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅನ್ನು ನಿನ್ನೆಯಷ್ಟೆ ಬಂಧಿಸಲಾಗಿತ್ತು. ಆದರೆ ಇದೇ ರೀತಿಯ ಪ್ರಕರಣಗಳು ಹಲವು ಬಾರಿ ಉಂಟಾಗಿವೆ. ಆದರೆ ಯಾವೊಬ್ಬ ನಟರನ್ನಾಗಲಿ, ರಾಜಕಾರಣಿಯನ್ನಾಗಲಿ, ಸ್ವಾಮೀಜಿಯನ್ನಾಗಲಿ ಬಂಧಿಸಿಲ್ಲ ಏಕೆ? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಬಲು ಜೋರಾಗಿ ನಡೆಯುತ್ತಿದೆ.

ಅಲ್ಲು ಅರ್ಜುನ್ ಪ್ರಕರಣ: ಜೂ ಎನ್​ಟಿಆರ್, ರಾಮ್ ಚರಣ್, ಶಾರುಖ್ ಅನ್ನು ಬಂಧಿಸಲಿಲ್ಲ ಏಕೆ?
ಅಲ್ಲು ಅರ್ಜುನ್ ಬಂಧನ
Follow us
ಮಂಜುನಾಥ ಸಿ.
|

Updated on:Dec 14, 2024 | 6:06 PM

ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ಬೆಳಿಗ್ಗೆ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 4 ರಂದು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಇನ್ನೂ ಕೆಲವರು ಹೈದರಾಬಾದ್​ನ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಂಟಾದ ನೂಕಾಟದಿಂದ ರೇವತಿ ಎಂಬ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್, ಸಂಧ್ಯಾ ಚಿತ್ರಮಂದಿರದ ಮಾಲೀಕರು, ಮ್ಯಾನೇಜರ್ ಮತ್ತು ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಆದರೆ ಅಲ್ಲು ಅರ್ಜುನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.

ಆದರೆ ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ ದುರುದ್ದೇಶ ಇದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಹಿಂದೆ ಯಾವೆಲ್ಲ ನಟರ ಕಾರ್ಯಕ್ರಮಗಳಲ್ಲಿ ಇಂಥಹಾ ಘಟನೆಗಳು ನಡೆದಿದ್ದವು, ಆಗೆಲ್ಲ ಅವರನ್ನು ಬಂಧಿಸಲಿಲ್ಲ ಏಕೆ ಎಂದು ಪ್ರಶ್ನೆ ಮಾಡಲಾಗಿದೆ.

ರಾಮ್ ಚರಣ್​ ಸಿನಿಮಾ

ರಾಮ್ ಚರಣ್ ನಟನೆಯ ‘ಮಗಧೀರ’ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿತ್ತು. ವಿಜಯನಗರಂ ಜಿಲ್ಲೆಯ ಸಲೂರಿನ ಲಕ್ಷ್ಮಿ ಚಿತ್ರಮಂದಿರದಲ್ಲಿ ಸಿನಿಮಾದ ಟಿಕೆಟ್ ಖರೀದಿ ಮಾಡಲು ಸುಮಾರು 2000 ಜನ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಒಂಬತ್ತು ಮಂದಿ ಅಸುನೀಗಿದರು. 15 ಮಂದಿ ತೀವ್ರವಾಗಿ ಅಸ್ವಸ್ಥರಾದರು. ಆದರೆ ಆ ಸಂದರ್ಭದಲ್ಲಿ ರಾಮ್ ಚರಣ್ ಅವರ ಬಂಧನ ಆಗಿರಲಿಲ್ಲ. ಯಾರ ಬಂಧನವೂ ಆಗಿರಲಿಲ್ಲ.

ಜೂ ಎನ್​ಟಿಆರ್ ಸಿನಿಮಾ

ಜೂ ಎನ್​ಟಿಆರ್ ನಟನೆಯ ‘ಬಾದ್​ಶಾ’ ಸಿನಿಮಾದ ಆಡಿಯೋ ಲಾಂಚ್​ನಲ್ಲಿಯೂ ಕಾಲ್ತುಳಿತ ಉಂಟಾಗಿತ್ತು. 2013 ರ ಫೆಬ್ರವರಿ 27ರಂದು ರಾಮಾನಾಯ್ಡು ಸ್ಟುಡಿಯೋನಲ್ಲಿ ಬೃಹತ್ ಆಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ ಕಾರಣ ಉಂಟಾದ ಕಾಲ್ತುಳಿತದಲ್ಲಿ ಒಬ್ಬ ಯುವಕ ಮೃತಪಟ್ಟಿದ್ದ. ಆಗಲೂ ಸಹ ಜೂ ಎನ್​ಟಿಆರ್ ಬಂಧನ ಆಗಿರಲಿಲ್ಲ.

ಶಾರುಖ್ ಖಾನ್

ಶಾರುಖ್ ಖಾನ್ ನಟನೆಯ ‘ರಯೀಸ್’ ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಶಾರುಖ್ ಖಾನ್ ಮತ್ತು ಚಿತ್ರತಂಡ ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಆ ವೇಳೆ ರೈಲ್ವೆ ಸ್ಟೇಷನ್​ನಲ್ಲಿ ಶಾರುಖ್ ಖಾನ್, ಟೀ-ಶರ್ಟ್, ಸ್ಮೈಲಿ ಬಾಲ್​ಗಳನ್ನು ಜನಗಳತ್ತ ಎಸೆಯುತ್ತಿದ್ದರು. ಹೀಗೆ ಎಸೆದಾಗ ಅದನ್ನು ಎತ್ತುಕೊಳ್ಳಲು ಭಾರಿ ಸಂಖ್ಯೆಯ ಜನ ನುಗ್ಗಿನ ಕಾರಣ ಕಾಲ್ತುಳಿತದಲ್ಲಿ ಒಬ್ಬ ವ್ಯಕ್ತಿಯ ಸಾವಾಗಿತ್ತು. ಈ ಪ್ರಕರಣದಲ್ಲಿ ಶಾರುಖ್ ಖಾನ್ ವಿರುದ್ಧ ದೂರು ದಾಖಲಾಗಿತ್ತು. ಆದರೆ ಬಂಧನ ಆಗಿರಲಿಲ್ಲ.

ಇದನ್ನೂ ಓದಿ:ಜೈಲಿಂದ ಹೊರಬಂದ ಅಲ್ಲು ಅರ್ಜುನ್ ಅನ್ನು ಭೇಟಿಯಾದ ನಟ ಉಪೇಂದ್ರ

ರಾಜಕಾರಣಿಗಳು

ದೇಶದ ರಾಜಕಾರಣಿಗಳು ನಡೆಸುವ ಪ್ರಚಾರ ಕಾರ್ಯಕ್ರಮದಲ್ಲಿ, ಸ್ವಾಮೀಜಿಗಳ ಕಾರ್ಯಕ್ರಮದಲ್ಲಿ ಹಲವು ಬಾರಿ ಕಾಲ್ತುಳಿತದಲ್ಲಿ ಜೀವಗಳು ಹೋಗಿವೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಏಳು ಮಂದಿ ಜೀವ ಕಳೆದುಕೊಂಡಿದ್ದರು. ಅಷ್ಟೆ ಏಕೆ ಕೆಲವೇ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಕಾಲ್ತುಳಿತದಲ್ಲಿ 121 ಮಂದಿ ಪ್ರಾಣ ಕಲೆದುಕೊಂಡರು. ಇದು ವಿಶ್ವದಾದ್ಯಂತ ಸುದ್ದಿಯಾಯ್ತು. ಆದರೆ ಕಾರ್ಯಕ್ರಮ ಆಯೋಜಿಸಿದ್ದ ಸ್ವಾಮೀಜಿಯ ಬಂಧನ ಆಗಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Sat, 14 December 24

ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್