‘ಡ್ರ್ಯಾಗನ್’ನಲ್ಲಿ ಜೂ ಎನ್​​ಟಿಆರ್ ಹೆಸರಿನ ಹಿನ್ನೆಲೆಯೇನು? ಸ್ವಾತಂತ್ರ್ಯ ಹೋರಾಟದ ಜೊತೆ ಇದೆ ಲಿಂಕ್

Dragon movie story: ‘ಡ್ರ್ಯಾಗನ್’ ಸಿನಿಮಾ ಟೀಸರ್ ಬಿಡುಗಡೆ ಆದ ಬಳಿಕ ‘ಇದು ಮೊಟ್ಟ ಮೊದಲ ಬೃಹತ್ ಬಜೆಟ್​​ನ ದೇಶಭಕ್ತಿಯ ಕತೆ’ ಎಂದು ಪ್ರಶಾಂತ್ ನೀಲ್ ಹೇಳಿದ್ದು ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ ಜೊತೆಗೆ ಕುತೂಹಲವನ್ನೂ ಮೂಡಿಸಿತ್ತು. ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕನ ಹೆಸರಿನ ಹಿನ್ನೆಲೆ ಕೆದಕಿದರೆ ಅದರ ಲಿಂಕು ಸ್ವಾತಂತ್ರ್ಯ ಹೋರಾಟದ ಜೊತೆಗಿದೆಯೆಂಬುದು ತಿಳಿದು ಬರುತ್ತಿದೆ.

‘ಡ್ರ್ಯಾಗನ್’ನಲ್ಲಿ ಜೂ ಎನ್​​ಟಿಆರ್ ಹೆಸರಿನ ಹಿನ್ನೆಲೆಯೇನು? ಸ್ವಾತಂತ್ರ್ಯ ಹೋರಾಟದ ಜೊತೆ ಇದೆ ಲಿಂಕ್
Jr Ntr Name

Updated on: May 23, 2026 | 8:28 PM

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ಮೇ 20ರಂದು ಬಿಡುಗಡೆ ಆಗಿದೆ. ಬ್ರಿಟೀಷರು ಬಿಟ್ಟು ಹೋದ ಮಾದಕ ವಸ್ತು ಉತ್ಪಾದನೆ ಮತ್ತು ವಿತರಣೆ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳ ನಡುವೆ ನಡೆಯುವ ಭೀಕರ ಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಆದರೆ ಟೀಸರ್ ಬಿಡುಗಡೆ ಆದ ಬಳಿಕ ‘ಇದು ಮೊಟ್ಟ ಮೊದಲ ಬೃಹತ್ ಬಜೆಟ್​​ನ ದೇಶಭಕ್ತಿಯ ಕತೆ’ ಎಂದು ಪ್ರಶಾಂತ್ ನೀಲ್ ಹೇಳಿದ್ದು ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ ಜೊತೆಗೆ ಕುತೂಹಲವನ್ನೂ ಮೂಡಿಸಿತ್ತು. ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕನ ಹೆಸರಿನ ಹಿನ್ನೆಲೆ ಕೆದಕಿದರೆ ಅದರ ಲಿಂಕು ಸ್ವಾತಂತ್ರ್ಯ ಹೋರಾಟದ ಜೊತೆಗಿದೆಯೆಂಬುದು ತಿಳಿದು ಬರುತ್ತಿದೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕನ ಹೆಸರು ‘ಲೂಗರ್’. ಇದು 1900 ರಿಂದ 1970ರ ವರೆಗೆ ಅಸ್ಥಿತ್ವದಲ್ಲಿದ್ದ ಬಲು ಜನಪ್ರಿಯ ಪಿಸ್ತೂಲಿನ ಹೆಸರು. ‘ಲೂಗರ್ ಪಿ08’ ಬಂದೂಕನ್ನು ಆಧರಿಸಿ ಡ್ರ್ಯಾಗನ್ ಸಿನಿಮಾದ ನಾಯಕನ ಹೆಸರನ್ನು ಇರಿಸಲಾಗಿದೆ. ಇದನ್ನು ಖುದ್ದು ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಖಾತ್ರಿಗೊಳಿಸಿದ್ದಾರೆ. ಆದರೆ ಅದೇ ಹೆಸರನ್ನು ಏಕೆ ನಾಯಕನಿಗೆ ಇಡಲಾಗಿದೆ ಎಂಬುದನ್ನು ಪ್ರಶಾಂತ್ ನೀಲ್ ತಿಳಿಸಿಲ್ಲ. ಆದರೆ ಆ ಬಂದೂಕಿನ ಹಿನ್ನೆಲೆ ಕೆದಕಿದರೆ ಅದರ ಸಂಬಂಧ ಭಾರತದ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಲಿಂಕ್ ಆಗಿರುವುದು ಗೊತ್ತಾಗುತ್ತದೆ.

ಭಾರತದ ಬಹುತೇಕ ಸಶಸ್ತ್ರ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ್ದು ಲೂಗರ್ ಪಿ08 ಬಂದೂಕನ್ನು. ಚಂದ್ರಶೇಖರ್ ಅಜಾದ್ ಬಳಿ ಇದ್ದಿದ್ದು ಇದೇ ಬಂದೂಕು. ಆಗಿನ ಇನ್ನೂ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಇದೇ ಬಂದೂಕನ್ನು ಬಳಸಿ ಕ್ರಾಂತಿ ಮಾಡಲು ಯತ್ನಿಸಿದ್ದರು. ಪ್ರಶಾಂತ್ ನೀಲ್ ತಮ್ಮ ‘ಡ್ರ್ಯಾಗನ್’ ಸಿನಿಮಾವನ್ನು ‘ದೇಶಭಕ್ತಿ’ಯ ಸಿನಿಮಾ ಎಂದಿರುವುದಕ್ಕೂ ನಾಯಕನಿಗೆ ಲೂಗರ್ ಎಂದು ಹೆಸರಿಟ್ಟಿರುವುದಕ್ಕೂ ಲಿಂಕ್ ಇದೆ ಎಂದು ಊಹಿಸಬಹುದಾಗಿದೆ.

ಇದನ್ನೂ ಓದಿ:ಜೂನಿಯರ್ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ

ಏನೇ ಆಗಲಿ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾಕ್ಕೆ ಒಂದೊಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾವನ್ನು ಕೇವಲ ಗ್ಯಾಂಗುಗಳ ಮಧ್ಯೆ ಹೋರಾಟದ ಕತೆಯನ್ನಾಗಿ ಮಾತ್ರ ಮಾಡದೆ ದೇಶಭಕ್ತಿಯ ಅಂಶವನ್ನು ತುಂಬುವ ಮೂಲಕ ಸಿನಿಮಾ ಎಲ್ಲರಿಗೂ ಸಲ್ಲುವಂತೆ ಮಾಡಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದ್ದು, ಜೂ ಎನ್​​ಟಿಆರ್ ಅಭಿಮಾನಿಗಳು ಸಹಜವಾಗಿಯೇ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ. ಬಾಲಿವುಡ್ ನಟ ಅನಿಲ್ ಕಪೂರ್ ಸೇರಿದಂತೆ ಇನ್ನೂ ಹಲವರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಭುವನ್ ಗೌಡ ಡಿಓಪಿ, ರವಿ ಬಸ್ರೂರು ಸಂಗೀತ ಇದೆ. ಪವನ್ ಶ್ರೀ ಪ್ರಸಾದ್ ಎಡಿಟಿಂಗ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us