ಸುದೀಪ್ ಎದುರು ಉಪೇಂದ್ರ ವಿಲನ್? ಹರಿದ ಫೋಟೊ ಕೊಟ್ಟ ಸುಳಿವು

ಸುದೀಪ್ ನಟನೆಯ ‘ದಾದಾ ಆನ್ ಹಾಲಿಡೇ’ ಸಿನಿಮಾದ ಲಾಂಚ್ ನಿನ್ನೆಯಷ್ಟೆ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾದ ಟೈಟಲ್ ಟೀಸರ್ ಸಹ ನಿನ್ನೆ ರಿಲೀಸ್ ಆಗಿದೆ. ಟೀಸರ್​​ನಲ್ಲಿರುವ ಒಂದು ದೃಶ್ಯದಲ್ಲಿ ಉಪೇಂದ್ರ ಅವರ ಫೋಟೊ ಒಂದು ಕಾಣುತ್ತಿದೆ. ಫೋಟೊ ನೋಡಿದವರು ಉಪೇಂದ್ರ ಅವರು ಈ ಸಿನಿಮಾನಲ್ಲಿ ಸುದೀಪ್ ಎದುರು ವಿಲನ್ ಆಗಿ ನಟಿಸಲಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದೀಪ್ ಎದುರು ಉಪೇಂದ್ರ ವಿಲನ್? ಹರಿದ ಫೋಟೊ ಕೊಟ್ಟ ಸುಳಿವು
Sudeep Uppi

Updated on: Nov 28, 2026 | 4:37 PM

ಸುದೀಪ್​​ ಹೊಸ ಸಿನಿಮಾ ನಿನ್ನೆಯಷ್ಟೇ ಘೋಷಣೆ ಆಗಿದೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಸಿನಿಮಾದ ಲಾಂಚ್ ಅನ್ನು ಸಿಎಂ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಸಿನಿಮಾದ ಟೈಟಲ್ ಟೀಸರ್ ನಿನ್ನೆ ರಿಲೀಸ್ ಮಾಡಲಾಗಿದ್ದು, ಸುದೀಪ್ ಅವರು ಹಳೆ ರೌಡಿ ಗೆಟಪ್​​ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರನ್ನು ಹೊರತುಪಡಿಸಿ ಸಿನಿಮಾದ ಇತರೆ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಆದರೆ ನಿನ್ನೆ ರಿಲೀಸ್ ಆದ ಟೀಸರ್​​ನಲ್ಲಿ ಕಂಡ ಒಂದು ಹರಿದ ಫೋಟೊ ಸಿನಿಮಾದ ವಿಲನ್ ಉಪೇಂದ್ರ ಅವರೇ ಎಂಬ ಚರ್ಚೆಗೆ ಕಾರಣವಾಗಿದೆ.

ನಿನ್ನೆ ರಿಲೀಸ್ ಆದ ಟೀಸರ್​​ನಲ್ಲಿ ಸುದೀಪ್ ಅವರು ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ, ತಮ್ಮ ಫೋಟೊ ನೀಡಿ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಟೀಸರ್​​ನಲ್ಲಿ ಸುದೀಪ್ ಅವರು ಪೊಲೀಸ್ ಠಾಣೆಯಲ್ಲಿರುವ ರೌಡಿಶೀಟರ್​​ಗಳ ಫೋಟೊಗಳ ಮೇಲೆ ಒಮ್ಮೆ ಕಣ್ಣಾಡಿಸುತ್ತಾರೆ. ಅಲ್ಲಿ ಯಾರ್​ಯಾರದ್ದೋ ಫೋಟೊಗಳಿರುತ್ತವೆ. ಒಂದೇ ಸೆಕೆಂಡಿನಲ್ಲಿ ಬಂದು ಹೋಗುವ ಆ ದೃಶ್ಯದಲ್ಲಿ ಉಪೇಂದ್ರ ಅವರ ಸಣ್ಣ ಝಲಕ್ ಕಾಣುತ್ತದೆ. ಅದನ್ನು ನೆಟ್ಟಿಗರು ಹುಡುಕಿ ತೆಗೆದಿದ್ದಾರೆ.

Loading...

ಸುದೀಪ್ ಅವರು ಠಾಣೆಗೆ ಬಂದಾಗ ನೋಡುವ ನೋಟಿಸ್ ಬೋರ್ಡಿನಲ್ಲಿ ಉಪೇಂದ್ರ ಅವರ ಹರಿದ ಫೋಟೊ ಇರುತ್ತದೆ. ಆ ಫೋಟೊನಲ್ಲಿರುವ ವ್ಯಕ್ತಿ ಥೇಟ್ ಉಪೇಂದ್ರ ಅವರನ್ನೇ ಹೋಲುತ್ತಿದ್ದು, ಉಪೇಂದ್ರ ಅವರೇ ಸುದೀಪ್ ಅವರ ಈ ಹೊಸ ಸಿನಿಮಾದ ವಿಲನ್ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಉಪೇಂದ್ರ ಅವರ ಚಿತ್ರ ಗುರುತಿಸಲು ಆಗಬಾರದೆಂದೇ ನಿರ್ದೇಶಕರು ಹರಿದ ಫೋಟೊ ಅನ್ನು ಫ್ರೇಮಿನಲ್ಲಿಟ್ಟಿದ್ದಾರೆ ಎಂಬ ಅನುಮಾನವೂ ಇದೆ.

ಇದನ್ನೂ ಓದಿ:ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್

ಉಪೇಂದ್ರ ಹಾಗೂ ಸುದೀಪ್ ಈ ಹಿಂದೆ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ ಮಾಡಿದ್ದಾರೆ. ಆರ್. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾನಲ್ಲಿ ಸುದೀಪ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಉಪೇಂದ್ರ ನಾಯಕ. ಅದಕ್ಕೂ ಮುಂಚೆ ‘ಮುಕುಂದ ಮುರಾರಿ’ ಸಿನಿಮಾನಲ್ಲಿ ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದರು. ಇದೀಗ ‘ದಾದಾ ಆನ್ ಹಾಲಿಡೇ’ ಸಿನಿಮಾ ಮೂಲಕ ಉಪೇಂದ್ರ ಹಾಗೂ ಸುದೀಪ್ ಮತ್ತೆ ಒಂದಾಗುವ ಸೂಚನೆಗಳು ಸಿಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us