Pushpa 3: ‘ಕೆಜಿಎಫ್​’ ರೀತಿ ಮೂರು ಪಾರ್ಟ್​ಗಳಲ್ಲಿ ಬರಲಿದೆ ‘ಪುಷ್ಪ’ ಸಿನಿಮಾ? ಫೈನಲ್ ಆಗಿದೆ ಶೀರ್ಷಿಕೆ

‘ಕೆಜಿಎಫ್ 2’ ಸಿನಿಮಾ ಬಂದು ಸೂಪರ್ ಹಿಟ್ ಆಗಿದೆ. ಈಗ ‘ಪುಷ್ಪ 2’ ಕೂಡ ಬರುತ್ತಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ‘ಕೆಜಿಎಫ್ 3’ ಆರಂಭ ಆಗಲಿದೆ. ಇದೇ ವೇಳೆ ಸುಕುಮಾರ್ ಕೂಡ ‘ಪುಷ್ಪ 3’ಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

Pushpa 3: ‘ಕೆಜಿಎಫ್​’ ರೀತಿ ಮೂರು ಪಾರ್ಟ್​ಗಳಲ್ಲಿ ಬರಲಿದೆ ‘ಪುಷ್ಪ’ ಸಿನಿಮಾ? ಫೈನಲ್ ಆಗಿದೆ ಶೀರ್ಷಿಕೆ
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Apr 21, 2023 | 6:30 AM

‘ಕೆಜಿಎಫ್ 2’ ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಕಥೆ  ಪೂರ್ಣಗೊಂಡಿತು ಎಂದು ಎದ್ದು ಹೊರಟವರಿಗೆ ಸರ್​​ಪ್ರೈಸ್ ಸಿಕ್ಕಿತ್ತು. ‘ಕೆಜಿಎಫ್ 3’ ಸಿನಿಮಾ (KGF Chapter 3) ಕೂಡ ಬರಲಿದೆ ಎನ್ನುವ ವಿಚಾರ ಗೊತ್ತಾಯಿತು. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು. ಅಚ್ಚರಿ ವಿಚಾರ ಏನೆಂದರೆ ತೆಲುಗಿನ ಸೂಪರ್ ಹಿಟ್ ಸಿನಿಮಾಪುಷ್ಪ ಚಿತ್ರ ಕೂಡ ಮೂರು ಪಾರ್ಟ್​​ಗಳಲ್ಲಿ ಬರಲಿದೆಯಂತೆ! ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಸುಕುಮಾರ್​​ಗೆ (Sukumar) ‘ಕೆಜಿಎಫ್​’ ಸಿನಿಮಾ ಸರಣಿಯ ಚಿತ್ರಗಳು ಸ್ಫೂರ್ತಿಯೇ ಎನ್ನುವ ಪ್ರಶ್ನೆ ಮೂಡಿದೆ.

‘ಕೆಜಿಎಫ್​’ ಹಾಗೂ ‘ಪುಷ್ಪ’ ಸಿನಿಮಾ ಮಧ್ಯೆ ಒಂದು ಫೈಟ್ ಇತ್ತು. ಇದಕ್ಕೆ ಕಾರಣ ತೆಲುಗು ನಿರ್ದೇಶಕ ನೀಡಿದ ಹೇಳಿಕೆ. ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್​ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದು ‘ಪುಷ್ಪ’ ರಿಲೀಸ್​ಗೂ ಮೊದಲೇ ಹೇಳಿದ್ದರು. ಇದರಿಂದ ‘ಕೆಜಿಎಫ್​’ ಹಾಗೂ ‘ಪುಷ್ಪ’ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

‘ಕೆಜಿಎಫ್ 2’ ಸಿನಿಮಾ ಬಂದು ಸೂಪರ್ ಹಿಟ್ ಆಗಿದೆ. ಈಗ ‘ಪುಷ್ಪ 2’ ಕೂಡ ಬರುತ್ತಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ‘ಕೆಜಿಎಫ್ 3’ ಆರಂಭ ಆಗಲಿದೆ. ಇದೇ ವೇಳೆ ಸುಕುಮಾರ್ ಕೂಡ ‘ಪುಷ್ಪ 3’ಗೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೊದಲ ಚಾಪ್ಟರ್​ಗೆ ‘ಪುಷ್ಪ: ದಿ ರೈಸ್​’ ಎಂದು ಹೆಸರು ಇಡಲಾಗಿತ್ತು. ಎರಡನೇ ಪಾರ್ಟ್​​ಗೆ ‘ಪುಷ್ಪ: ದಿ ರೂಲ್​’ ಹೆಸರು ಇಡಲಾಗಿದೆ. ಮೂರನೇ ಚಾಪ್ಟರ್​ಗೆ ‘ಪುಷ್ಪ: ದಿ ರೂಲ್ ಬಿಗಿನಿಂಗ್​’ ಎಂದು ಟೈಟಲ್ ಇಡುವ ಪ್ಲ್ಯಾನ್​​ನಲ್ಲಿ ಸುಕುಮಾರ್ ಇದ್ದಾರೆ.

ಇದನ್ನೂ ಓದಿ: ‘ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಶಾಕ್​; ಮನೆ, ಕಚೇರಿ ಮೇಲೆ ಐಟಿ ದಾಳಿ

ಸದ್ಯ ಸುಕುಮಾರ್ ಅವರ ಸಂಪೂರ್ಣ ಗಮನ ‘ಪುಷ್ಪ 2’ ಚಿತ್ರದ ಮೇಲಿದೆ. ಈ ಸಿನಿಮಾ ಮುಗಿದ ಬಳಿಕ ಅಲ್ಲು ಅರ್ಜುನ್ ಬೇರೆ ಕಮಿಟ್​ಮೆಂಟ್​ನಲ್ಲಿ ಬ್ಯುಸಿ ಆಗಲಿದ್ದಾರೆ. ಇದೆಲ್ಲವೂ ಮುಗಿದ ಬಳಿಕ ‘ಪುಷ್ಪ 3’ ಸಿನಿಮಾಗಳಲ್ಲಿ ಸುಕುಮಾರ್ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ‘ಪುಷ್ಪ’ ನಿರ್ದೇಶಕ ಸುಕುಮಾರ್ ಹಾಗೂ ಈ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್​ ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ತೆರಿಗೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದರಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ