ನಟ ರಜನಿಕಾಂತ್ ವೈದ್ಯಕೀಯ ಪರೀಕ್ಷೆಗಾಗಿ ಇತ್ತೀಚೆಗೆ ಏಕಾಏಕಿ ಅಮೆರಿಕಕ್ಕೆ ತೆರಳಿದ್ದರು. ಈಗ ಅವರು ಭಾರತಕ್ಕೆ ವಾಪಾಸಾಗಿದ್ದು, ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಈ ಬೆನ್ನಲ್ಲೇ ರಜನಿ ಕೋಲ್ಕತ್ತಾಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅವರು ಪಶ್ಚಿಮ ಬಂಗಾಳದ ರಾಜಧಾನಿಗೆ ತೆರಳಿದ್ದೇಕೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
‘ಅಣ್ಣಾಥೆ’ ಸಿನಿಮಾದ ಶೂಟಿಂಗ್ಗಾಗಿ ರಜನಿಕಾಂತ್ ಕೋಲ್ಕತ್ತಾಗೆ ತೆರಳಿದ್ದಾರೆ. ಕೊನೆಯ ಹಂತದ ಶೂಟಿಂಗ್ ಬಾಕಿ ಇದ್ದು ಈ ಕಾರಣಕ್ಕೆ ಅವರು ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಾರೆ. ರಜನಿ ಜತೆಗೆ ಸಿನಿಮಾದ ತಾಂತ್ರಿಕ ವರ್ಗದವರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೆಡ್ಯೂಲ್ನಲ್ಲಿ ಕೆಲ ಮುಖ್ಯ ದೃಶ್ಯಗಳನ್ನು ಶೂಟ್ ಮಾಡಲಾಗುತ್ತದೆಯಂತೆ.
‘ಅಣ್ಣಾಥೆ’ ಸಿನಿಮಾದ ಶೂಟಿಂಗ್ಗಾಗಿ ರಜನಿಕಾಂತ್ ಹೈದರಾಬಾದ್ಗೆ ತೆರಳಿದ್ದರು. ಒಂದು ತಿಂಗಳ ಕಾಲ ಅಲ್ಲಿಯೇ ಇದ್ದು, ಶೂಟ್ ಪೂರ್ಣಗೊಳಿಸಿದ್ದಾರೆ. ನಂತರ ಅವರು ಏಕಾಏಕಿ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಾದ ಮೆಯೋ ಕ್ಲಿನಿಕ್ ಎದುರು ರಜನಿಕಾಂತ್ ನಡೆದುಬರುತ್ತಿರುವ ಫೋಟೋ ವೈರಲ್ ಆಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಏನಿರಬಹುದು ಎಂದು ಕೂಡ ಅಭಿಮಾನಿಗಳು ಚಿಂತೆಗೀಡಾಗಿದ್ದರು. ‘ಅಷ್ಟು ತರಾತುರಿಯಲ್ಲಿ ವಿಮಾನ ಹತ್ತಲು ಅವರು ನಿರ್ಧರಿಸಿದ್ದು ಯಾಕೆ? ಕೊವಿಡ್ ಸಂದರ್ಭದಲ್ಲೂ ವಿದೇಶಕ್ಕೆ ಪ್ರಯಾಣ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅವರ ಆರೋಗ್ಯದಲ್ಲಿ ಏನೋ ಗಂಭೀರ ಸಮಸ್ಯೆ ಇರಬಹುದು’ ಎಂದು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದ್ದರು.
‘ಅಣ್ಣಾಥೆ’ ಸಿನಿಮಾಗೆ ‘ವಿಶ್ವಾಸಮ್’ ಖ್ಯಾತಿಯ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಪ್ರಕಾಶ್ ರಾಜ್ ಮತ್ತು ಖುಷ್ಬೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೀಪಾವಳಿ ನಿಮಿತ್ತ ನವೆಂಬರ್ 4ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ರಾಜಕೀಯದಿಂದ ದೂರವಿರುವ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆ: ರಜನಿಕಾಂತ್
ಆತಂಕದ ನಡುವೆ ಗುಡ್ನ್ಯೂಸ್; ಭಾರತಕ್ಕೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್