ಆತಂಕದ ನಡುವೆ ಗುಡ್ನ್ಯೂಸ್; ಭಾರತಕ್ಕೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್
ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಾದ ಮೆಯೋ ಕ್ಲಿನಿಕ್ ಎದುರು ರಜನಿಕಾಂತ್ ನಡೆದುಬರುತ್ತಿರುವ ಫೋಟೋ ವೈರಲ್ ಆಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಏನಿರಬಹುದು ಎಂದು ಅಭಿಮಾನಿಗಳು ಚಿಂತೆಗೀಡಾಗಿದ್ದರು.
ನಟ ರಜನಿಕಾಂತ್ ಅವರು ಶುಕ್ರವಾರ (ಜು.9) ಭಾರತಕ್ಕೆ ಮರಳಿದ್ದಾರೆ. ಕಳೆದ ತಿಂಗಳು ಅವರು ಅಮೆರಿಕಕ್ಕೆ ತೆರಳಿದ್ದರು. ಆರೋಗ್ಯ ತಪಾಸಣೆಗಾಗಿ ಅವರು ವಿದೇಶಕ್ಕೆ ಹೋಗಿದ್ದರು. ಹಾಗಾಗಿ ಅವರ ಅಭಿಮಾನಿಗಳಲ್ಲಿ ಕೊಂಚ ಆತಂಕ ಮನೆ ಮಾಡಿತ್ತು. ಈಗ ಅವರು ಸುರಕ್ಷಿತವಾಗಿ ಚೆನ್ನೈಗೆ ವಾಪಸ್ ಬಂದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಅಮೆರಿಕದಿಂದ ತಲೈವಾ ಮರಳುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಬಹುದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ತಲೈವಾ.. ತಲೈವಾ.. ಎಂದು ಕೂಗುತ್ತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನೆರೆದಿದ್ದ ಜನರತ್ತ ರಜನಿಕಾಂತ್ ಕೈ ಮುಗಿದು ನಮಸ್ಕರಿಸುತ್ತ ತಾಯ್ನಾಡಿಗೆ ಕಾಲಿಟ್ಟಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಕೊವಿಡ್ ಎರಡನೇ ಅಲೆ ಕಡಿಮೆ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ರಜನಿಕಾಂತ್ ಅವರು ಅಮೆರಿಕಕ್ಕೆ ತೆರಳಿದ್ದರು. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಅವರು ಈ ಪ್ರಯಾಣ ಮಾಡಿದ್ದರು. ಅಷ್ಟು ತರಾತುರಿಯಲ್ಲಿ ವಿಮಾನ ಹತ್ತಲು ಅವರು ನಿರ್ಧರಿಸಿದ್ದು ಯಾಕೆ? ಕೊವಿಡ್ ಸಂದರ್ಭದಲ್ಲೂ ವಿದೇಶಕ್ಕೆ ಪ್ರಯಾಣ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅವರ ಆರೋಗ್ಯದಲ್ಲಿ ಏನೋ ಗಂಭೀರ ಸಮಸ್ಯೆ ಇರಬಹುದು ಎಂದು ಕೆಲವು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.
ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಾದ ಮೆಯೋ ಕ್ಲಿನಿಕ್ ಎದುರು ರಜನಿಕಾಂತ್ ನಡೆದುಬರುತ್ತಿರುವ ಫೋಟೋ ವೈರಲ್ ಆಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಏನಿರಬಹುದು ಎಂದು ಕೂಡ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಈಗ ಅವರು ಚೆನ್ನೈಗೆ ಮರಳಿರುವುದರಿಂದ ಎಲ್ಲ ಆತಂಕ ದೂರ ಆಗಿದೆ. ಸದ್ಯ ರಜನಿಕಾಂತ್ ನಟನೆಯ ‘ಅಣ್ಣಾತೆ’ ಚಿತ್ರಕ್ಕಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
சற்றுமுன் சென்னை வந்தடைந்தார் நம் #அன்பு_தலைவர்..❤️?? தலைவரின் தரிசனம் கோடி புண்ணியம்..???#Annaatthe @rajinikanth pic.twitter.com/udqQV1bVda
— Ragava vignesh (@Ragavavignesh1) July 8, 2021
ಅಮೆರಿಕಕ್ಕೆ ತೆರಳುವುದಕ್ಕೂ ಮುನ್ನ ರಜನಿಕಾಂತ್ 2ನೇ ಡೋಸ್ ಕೊವಿಡ್ ಲಸಿಕೆ ಪಡೆದುಕೊಂಡಿದ್ದರು. ಅಮೆರಿಕದಲ್ಲಿ ಅವರು ಅನೇಕ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ತಮ್ಮ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಮೆರಿಕದ ಬಳಿಕ ದೋಹಾ, ಖತಾರ್ಗೂ ತೆರಳಿ, ಇದೇ ಮಾರ್ಗವಾಗಿ ಚೆನ್ನೈಗೆ ಬಂದು ಇಳಿದಿದ್ದಾರೆ.
ಇದನ್ನೂ ಓದಿ:
ರಜನಿಕಾಂತ್ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ
Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್; ಅವರ ಕೊನೆಯ ಚಿತ್ರ ಯಾವುದು?