ನಟ ಸೂರ್ಯಗಿಂತ ಮೂರು ಪಟ್ಟು ಜಾಸ್ತಿ ಸಂಬಳ ಪಡೆಯುತ್ತಿದ್ದ ಪತ್ನಿ ಜ್ಯೋತಿಕಾ

ಅದ್ದೂರಿ ಬಜೆಟ್​ನಲ್ಲಿ ‘ಕಂಗುವ’ ಸಿನಿಮಾ ತಯಾರಾಗಿದೆ. ನವೆಂಬರ್​ 14ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಈ ಚಿತ್ರಕ್ಕೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಆದರೆ ಒಂದು ಕಾಲದಲ್ಲಿ ಸೂರ್ಯ ಅವರ ಸಂಬಳ ಪತ್ನಿ ಜ್ಯೋತಿಕಾಗಿಂತಲೂ ಕಡಿಮೆ ಇತ್ತು. ಆ ಕುರಿತು ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ನಟ ಸೂರ್ಯಗಿಂತ ಮೂರು ಪಟ್ಟು ಜಾಸ್ತಿ ಸಂಬಳ ಪಡೆಯುತ್ತಿದ್ದ ಪತ್ನಿ ಜ್ಯೋತಿಕಾ
ಸೂರ್ಯ, ಜ್ಯೋತಿಕಾ

Updated on: Nov 10, 2024 | 5:13 PM

ಕಾಲಿವುಡ್ ನಟ ಸೂರ್ಯ ಅವರು ಬಹುನಿರೀಕ್ಷಿತ ‘ಕಂಗುವ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್​ 14ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಮಾಧ್ಯಮಗಳಿಗೆ ಸೂರ್ಯ ಅವರು ಸಂದರ್ಶನ ನೀಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಪತ್ನಿ ಜ್ಯೋತಿಕಾ ಬಗ್ಗೆ ಮಾತನಾಡಿದ್ದಾರೆ. ಈಗ ಸೂರ್ಯ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಒಂದು ಕಾಲದಲ್ಲಿ ಅವರ ಸಂಬಳ ಪತ್ನಿ ಜ್ಯೋತಿಕಾಗಿಂತ ಕಡಿಮೆ ಇತ್ತು. ಆ ದಿನಗಳನ್ನು ಸೂರ್ಯ ಅವರು ಈಗ ಮೆಲುಕು ಹಾಕಿದ್ದಾರೆ.

ಸೂರ್ಯ ಅವರು ಫಿಲ್ಮಿ ಕುಟುಂಬದಿಂದ ಬಂದವರು. ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತ್ತು. ಅವರ ಮಾತೃಭಾಷೆ ತಮಿಳು ಆದ್ದರಿಂದ ಅವರಿಗೆ ಡೈಲಾಗ್ ಹೇಳುವುದು ಕೂಡ ಸುಲಭ ಆಗಿತ್ತು. ಆದರೆ ಜ್ಯೋತಿಕಾ ಅವರು ಪರಭಾಷೆಯವರು. ಹಾಗಿದ್ದರೂ ಕೂಡ ಅವರು ಸೂರ್ಯಗಿಂತ ಚೆನ್ನಾಗಿ ಡೈಲಾಗ್ ಕಲಿತು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಸೂರ್ಯ ಅವರಿಗಿಂತ ಜ್ಯೋತಿಕಾ 3 ಪಟ್ಟು ಹೆಚ್ಚು ಸಂಬಳ ಪಡೆಯುತ್ತಿದ್ದರು!

ಜ್ಯೋತಿಕಾ ಅವರು ಹೆಚ್ಚು ಸಂಬಳ ಪಡೆಯುತ್ತಿದ್ದ ಕಾಲದಲ್ಲೇ ಸೂರ್ಯ ಅವರನ್ನು ಮದುವೆ ಆದರು. ನಂತರ ಪತ್ನಿಗಿಂತಲೂ ಹೆಚ್ಚು ಸಂಬಳ ಪಡೆಯುವ ಮಟ್ಟಕ್ಕೆ ಸೂರ್ಯ ಅವರು ಬೆಳೆದರು. ಜ್ಯೋತಿಕಾ ಅವರು ಕುಟುಂಬಕ್ಕಾಗಿ ಹೆಚ್ಚು ಆದ್ಯತೆ ನೀಡಿದರು. ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಯಿತು. ಈಗ ಸಿನಿಮಾಗಳ ಆಯ್ಕೆಯಲ್ಲಿ ಜ್ಯೋತಿಕಾ ಅವರು ಚ್ಯೂಸಿ ಆಗಿದ್ದಾರೆ.

ಇದನ್ನೂ ಓದಿ: ಮೆಚ್ಚಿನ ನಟನಿಗೆ ಮೋಸ, ತಮಿಳು ನಿರ್ದೇಶಕನ ಮೇಲೆ ಸೂರ್ಯ ಅಭಿಮಾನಿಗಳು ಕಿಡಿ

ಪ್ರತಿ ಸಿನಿಮಾದಲ್ಲೂ ಸೂರ್ಯ ಅವರು ಸವಾಲಿನ ಪಾತ್ರಗಳನ್ನು ನಿಭಾಯಿಸುತ್ತಾರೆ. ಈಗ ಅವರು ‘ಕಂಗುವ’ ಸಿನಿಮಾದಲ್ಲೂ ಅಂತಹ ಒಂದು ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಗೆಟಪ್ ಡಿಫರೆಂಟ್ ಆಗಿದೆ. ಈ ಸಿನಿಮಾದಲ್ಲಿ ದಿಶಾ ಪಟಾನಿ, ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ತೆರೆ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.