ನಟಿ ತಮನ್ನಾ ಭಾಟಿಯಾಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ಅವರ ಮೈಮಾಟ ಹಾಗೂ ನಟನೆಗೆ ಫಿದಾ ಆಗದವರೇ ಇಲ್ಲ. ಹಲವು ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ತಮನ್ನಾಗೆ ಇದೆ. ಇಷ್ಟೊಂದು ಸ್ಟಾರ್ ಗಿರಿ ಇಟ್ಟುಕೊಂಡ ಹೊರತಾಗಿಯೂ ಅವರಿಗೆ ಮೋಸ ಆಗಿದೆ. ಈ ಕುರಿತಂತೆ ಅವರು ಕೋರ್ಟ್ ಮೆಟ್ಟಿಲು ಹತ್ತೋಕೆ ನಿರ್ಧರಿಸಿದ್ದಾರೆ.
ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಡುಗೆ ಶೋ ‘ಮಾಸ್ಟರ್ ಶೆಫ್’ಅನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಈಗ ಅವರಿಗೆ ಸಂಭಾವನೆ ಸರಿಯಾಗಿ ಸಿಕ್ಕಿಲ್ಲ. ಇದರ ಜತೆಗೆ ಸೆಟ್ನಲ್ಲಿ ಅವರ ಜತೆಗೆ ಯಾರೂ ಸರಿಯಾಗಿ ನಡೆದುಕೊಂಡಿಲ್ಲ. ಈ ಕಾರಣಕ್ಕೆ ಅವರು ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಗಸ್ಟ್ 27ರಂದು ಈ ಶೋ ಆರಂಭಗೊಂಡಿತ್ತು. 20ಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಆದರೆ, ಈಗ ವಾಹಿನಿಯವರು ತಮನ್ನಾಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ. ಇನ್ನು, ಅವರಿಗೆ ಬರಬೇಕಾದ ಸಂಭಾವನೆ ಕೂಡ ಬಂದಿಲ್ಲ. ಈ ಎಲ್ಲಾ ಕಾರಣಕ್ಕೆ ಅವರು ಶೋನಿಂದ ಹೊರ ಬಂದಿದ್ದಾರೆ. ಖ್ಯಾತ ಆ್ಯಂಕರ್ ಅನುಸೂಯಾ ಭಾರದ್ವಾಜ್ ಈ ಶೋ ಮುನ್ನಡೆಸಿಕೊಡುತ್ತಿದ್ದಾರೆ. ಸ್ಟಾರ್ ನಟಿಗೆ ಈ ರೀತಿ ಮೋಸ ಆದರೆ, ಯುವ ಕಲಾವಿದರ ಕಥೆ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಹಿಂದಿಯಲ್ಲಿ ತೆರೆಗೆ ಬಂದಿದ್ದ ಸೂಪರ್ ಹಿಟ್ ಚಿತ್ರ ‘ಅಂಧಾಧುನ್’ ಸಿನಿಮಾದ ತೆಲುಗು ರಿಮೇಕ್ನಲ್ಲಿ ತಮನ್ನಾ ನಟಿಸಿದ್ದರು. ಈ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಹಿಂದಿಯಲ್ಲಿ ಟಬು ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ತಮನ್ನಾ ಮಾಡಿದ್ದರು. ರಾಧಿಕಾ ಆಪ್ಟೆ ಮಾಡಿದ ಪಾತ್ರಕ್ಕೆ ನಭಾ ನಟೇಶ್ ಜೀವ ತುಂಬಿದ್ದರು. ಆಯುಷ್ಮಾನ್ ಖುರಾನಾ ಮಾಡಿದ ಪಾತ್ರದಲ್ಲಿ ನಿತೀನ್ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿಲ್ಲ. ತಮನ್ನಾ ಸದ್ಯ, ‘ಎಫ್3: ಫನ್ ಆ್ಯಂಡ್ ಫ್ರಸ್ಟ್ರೇಷನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಲ್ ರವಿಪುಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್
ಆರ್ಯನ್ ಖಾನ್ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್ ವಾಂಖೆಡೆ