ಶೂಟಿಂಗ್ ವೇಳೆ ಎಡವಟ್ಟು; ತೀವ್ರವಾಗಿ ಗಾಯಗೊಂಡ ತಮಿಳು ನಟ ವಿಶಾಲ್

ವಿಶಾಲ್ ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ತಾವೇ ನಟಿಸೋಕೆ ಆದ್ಯತೆ ನೀಡುತ್ತಾರೆ. ಹಲವು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಅವಘಡಗಳು ಸಂಭವಿಸುತ್ತವೆ.

ಶೂಟಿಂಗ್ ವೇಳೆ ಎಡವಟ್ಟು; ತೀವ್ರವಾಗಿ ಗಾಯಗೊಂಡ ತಮಿಳು ನಟ ವಿಶಾಲ್
ವಿಶಾಲ್
Edited By:

Updated on: Aug 11, 2022 | 3:38 PM

ನಟ ವಿಶಾಲ್ (Vishal) ಅವರು ತಾವು ಒಪ್ಪಿಕೊಂಡ ಪ್ರತಿ ಚಿತ್ರದ ಕೆಲಸವನ್ನು ಅತೀ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ. ಎಷ್ಟೇ ರಿಸ್ಕಿ ದೃಶ್ಯಗಳಿದ್ದರೂ ಡೂಪ್ ಬಳಸದೆ ತಾವೇ ನಟಿಸುತ್ತಾರೆ. ಈಗ ‘ಮಾರ್ಕ್ ಆ್ಯಂಟನಿ’ ಸಿನಿಮಾ (Mark Antony Movie) ಶೂಟಿಂಗ್ ವೇಳೆ ಎಡವಟ್ಟು ಸಂಭವಿಸಿದೆ. ಈ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ವಿಶಾಲ್​ ಅವರ ಸಿನಿಮಾಗಳಲ್ಲಿ ಆ್ಯಕ್ಷನ್​ ದೃಶ್ಯಗಳು ಭರ್ಜರಿಯಾಗಿ ಇರುತ್ತವೆ.  ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ತಾವೇ ನಟಿಸೋಕೆ ಆದ್ಯತೆ ನೀಡುತ್ತಾರೆ. ಹಲವು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಅವಘಡಗಳು ಸಂಭವಿಸುತ್ತವೆ. ಈಗ  ‘ಮಾರ್ಕ್ ಆ್ಯಂಟನಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಅವಘಡದಿಂದ ಅವರು ತೊಂದರೆಗೆ ಸಿಲುಕಿದ್ದಾರೆ. ಅವರ ಆರೋಗ್ಯ ಚೇತರಿಕೆ ಕಾಣುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಶಾಲ್ ಅವರು ಜುಲೈ ತಿಂಗಳಲ್ಲಿ ಇದೇ ರೀತಿ ಗಾಯಗೊಂಡಿದ್ದರು. ‘ಲಾಠಿ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು. ಇದರಿಂದ ವಿಶಾಲ್ ಗಾಯಗೊಂಡಿದ್ದರು. ಈ ಕಾರಣಕ್ಕೆ ಶೂಟಿಂಗ್ ಸ್ಥಗಿತಗೊಂಡಿತ್ತು. ಅವರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಸೆಟ್​ಗೆ ಮರಳಿದ್ದರು. ಹೀಗಿರುವಾಗಲೇ ವಿಶಾಲ್​ ಮತ್ತೆ ಗಾಯಗೊಂಡಿದ್ದಾರೆ.

ಇದನ್ನೂ ಓದಿ
ಸಂಭಾವನೆ ಜತೆ ಬೋನಸ್ ಕೊಡ್ತೀನಿ ಅಂದ್ರೂ ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್; ಭೇಷ್​ ಎಂದ ಫ್ಯಾನ್ಸ್
‘ಯಶ್ ನನ್ನಿಷ್ಟದ ಪ್ಯಾನ್ ಇಂಡಿಯಾ ಸ್ಟಾರ್​’ ಎಂದ ಟಾಲಿವುಡ್​ನ ಸ್ಟಾರ್ ನಟ
Vishal: ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್
ಫೈಟಿಂಗ್​ ದೃಶ್ಯದ ಶೂಟಿಂಗ್​ ವೇಳೆ ವಿಶಾಲ್​ಗೆ ಗಾಯ; ಘಟನೆ ಬಗ್ಗೆ ವಿಡಿಯೋ ಸಮೇತ ವಿವರಿಸಿದ​ ನಟ

‘ಮಾರ್ಕ್ ಆ್ಯಂಟನಿ’ ಚಿತ್ರದಲ್ಲಿ ಎಸ್​​.ಜೆ. ಸೂರ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಹಾಗೂ ಸೂರ್ಯ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ರಿತು ವರ್ಮ, ಸುನೀಲ್ ವರ್ಮ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆ. ಈ ಚಿತ್ರಕ್ಕೆ ರವಿ ವರ್ಮ ಮೊದಲಾದವರು ಆ್ಯಕ್ಷನ್ ದೃಶ್ಯಗಳನ್ನು ಸಂಯೋಜನೆ ಮಾಡುತ್ತಿದ್ದಾರೆ. ವಿಶಾಲ್​​ಗೆ ಪೆಟ್ಟಾಗಿದ್ದು ಹೇಗೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: Vishal: ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್

‘ಲಾಠಿ’ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಟೀಸರ್​ನಲ್ಲಿ ವಿಶಾಲ್ ಅವರು ಸಖತ್ ಮಾಸ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಗ್ಗೆಯೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಲಾಠಿ’ ಚಿತ್ರಕ್ಕೆ ಎ. ವಿನೋದ್​ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಸುನೈನಾ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.