ಯೋಗಿ ಬಾಬು ಒಂದು ದಿನದ ಸಂಭಾವನೆ ಇಷ್ಟೊಂದಾ? ಬಾಡಿ ಶೇಮಿಂಗ್ ಮೆಟ್ಟಿ ನಿಂತ ಕಾಮಿಡಿಯನ್

| Updated By: ರಾಜೇಶ್ ದುಗ್ಗುಮನೆ

Updated on: Jun 05, 2024 | 11:43 AM

ಸಾಮಾನ್ಯವಾಗಿ ಹೀರೋ, ಹೀರೋಯಿನ್​ಗಳಿಗೆ ಒಂದು ಸಿನಿಮಾಗೆ ಇಷ್ಟು ಸಂಭಾವನೆ ಎಂದು ಫಿಕ್ಸ್ ಮಾಡಿರಲಾಗುತ್ತದೆ. ಆದರೆ, ಪೋಷಕ ಪಾತ್ರ, ಹಾಸ್ಯ ಕಲಾವಿದರಿಗೆ ಆ ರೀತಿ ಅಲ್ಲ. ಅವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ. ಯೋಗಿ ಬಾಬು ಅವರು ಒಂದು ದಿನಕ್ಕೆ 12 ಲಕ್ಷ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.

ಯೋಗಿ ಬಾಬು ಒಂದು ದಿನದ ಸಂಭಾವನೆ ಇಷ್ಟೊಂದಾ? ಬಾಡಿ ಶೇಮಿಂಗ್ ಮೆಟ್ಟಿ ನಿಂತ ಕಾಮಿಡಿಯನ್
ಯೋಗಿ
Follow us on

ಯೋಗಿ ಬಾಬು (Yogi Babu) ಅವರು ತಮಿಳು ಚಿತ್ರರಂಗದಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ಅವರನ್ನು ಕಾಮಿಡಿಯನ್ ಆಗಿ ಆಯ್ಕೆ ಮಾಡಲು ನಿರ್ಮಾಪಕರು ಹೆಚ್ಚು ಆದ್ಯತೆ ನೀಡುತ್ತಾರೆ. ‘ಮರ್ಸಲ್’, ‘ಡಾಕ್ಟರ್’, ‘ವಾರಿಸು’, ‘ಜೈಲರ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇದರ ಜೊತೆಗೆ ‘ಮಂಡೇಲಾ’ ರೀತಿಯ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅವರು ತೆರೆಮೇಲೆ ಬಂದರೆ ನಗು ಉಕ್ಕೋದು ಖಚಿತ. ಇಷ್ಟೆಲ್ಲ ಜನಪ್ರಿಯತೆ ಪಡೆದಿರೋ ಯೋಗಿ ಬಾಬು ಅವರು ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ನಿಮಗೆ ಅಚ್ಚರಿ ಆಗೋದು ಗ್ಯಾರಂಟಿ.

ಸಾಮಾನ್ಯವಾಗಿ ಹೀರೋ, ಹೀರೋಯಿನ್​ಗಳಿಗೆ ಒಂದು ಸಿನಿಮಾಗೆ ಇಷ್ಟು ಸಂಭಾವನೆ ಎಂದು ಫಿಕ್ಸ್ ಮಾಡಿರಲಾಗುತ್ತದೆ. ಆದರೆ, ಪೋಷಕ ಪಾತ್ರ, ಹಾಸ್ಯ ಕಲಾವಿದರಿಗೆ ಆ ರೀತಿ ಅಲ್ಲ. ಅವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ. ಯೋಗಿ ಬಾಬು ಅವರು ಒಂದು ದಿನಕ್ಕೆ 12 ಲಕ್ಷ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಮೊದಲು ಅವರು ದಿನಕ್ಕೆ 10 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಆದರೆ, ಈ ಮೊತ್ತ ಏರಿಕೆ ಆಗಿದೆ.

ಈ ವಿಚಾರದ ಬಗ್ಗೆ ಈ ಮೊದಲು ಯೋಗಿ ಅವರು ಮಾಧ್ಯಮ ಒಂದಕ್ಕೆ ಸ್ಪಷ್ಟನೆ ನೀಡಿದ್ದರು. ‘ನಾನು ಯಾರ ಬಳಿಯೂ 10-15 ಲಕ್ಷ ನೀಡಿ ಎಂದು ಕೇಳಲ್ಲ. ನಾನು ಆರಂಭದಲ್ಲಿ 2000 ರೂಪಾಯಿ ಸಂಭಾವನೆ ಪಡೆಯುತ್ತಿದ್ದೆ. ನನಗೆ ಕಷ್ಟ ಗೊತ್ತು. ನಿರ್ಮಾಪಕರು ಬಂದು ಕಷ್ಟ ಇದೆ ಎಂದರೆ ನಾನು ಅರ್ಧ ಸಂಭಾವನೆ ಮಾತ್ರ ಪಡೆಯುತ್ತೇನೆ’ ಎಂದಿದ್ದಾರೆ ಯೋಗಿ ಬಾಬು.

ಯೋಗಿ ಬಾಬು ಅವರಿಗೆ ಈಗ 38 ವರ್ಷ. ಅವರ ಬಳಿ ಹಲವು ಸಿನಿಮಾಗಳಿವೆ. ‘ಹರಾ’, ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’, ‘ನಾನ್ ವೈಲೆನ್ಸ್’, ‘ಕಂಗುವ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಎಲ್ಲಾ ಸ್ಟಾರ್​ಗಳ ಜೊತೆ ಅವರು ನಟಿಸಿದ್ದಾರೆ. ದಳಪತಿ ವಿಜಯ್ ಹಾಗೂ ಯೋಗಿ ಬಾಬು ಕೆಮಿಸ್ಟ್ರಿ ಚೆನ್ನಾಗಿದೆ.

ಇದನ್ನೂ ಓದಿ: ಯೋಗಿ ಬಾಬು ಜತೆ ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ರೂಪೇಶ್ ಶೆಟ್ಟಿ

ಯೋಗಿ ಬಾಬು ಜನಪ್ರಿಯತೆ ಜೊತೆಗೆ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಅವರ ಲುಕ್​ ನೋಡಿ ಅನೇಕರು ಬಾಡಿ ಶೇಮಿಂಗ್ ಮಾಡಿದ್ದರು. ಆದರೆ ಈ ಬಗ್ಗೆ ಅವರು ಹೆಚ್ಚಿ ಯೋಚಿಸಿಲ್ಲ. ‘ಕಾಮಿಡಿ ಮಾಡೋಕೆ ಬಾಡಿ ಲ್ಯಾಂಗ್ವೇಜ್ ತುಂಬಾನೇ ಮುಖ್ಯ. ಅದನ್ನು ನಾನು ಬಳಸಿಕೊಂಡಿದ್ದೇನೆ’ ಎಂದು ಯೋಗಿ ಬಾಬು ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.