ಸಂಕಷ್ಟ ಸ್ಥಿತಿಯಲ್ಲಿದ್ದ ನಿರ್ಮಾಪಕ ದೊರೈ ನಿಧನ

|

Updated on: Oct 03, 2023 | 6:42 PM

VA Durai: ಜನಪ್ರಿಯ ನಿರ್ಮಾಪಕರಾಗಿದ್ದು ಬಳಿಕ ಹಣ ಆಸ್ತಿ ಕಳೆದುಕೊಂಡು ಚಿಕಿತ್ಸೆಗೂ ಹಣವಿಲ್ಲದೆ ಪರದಾಡಿದ್ದ ನಿರ್ಮಾಪಕ ದೊರೈ ನಿಧನ ಹೊಂದಿದ್ದಾರೆ.

ಸಂಕಷ್ಟ ಸ್ಥಿತಿಯಲ್ಲಿದ್ದ ನಿರ್ಮಾಪಕ ದೊರೈ ನಿಧನ
ದೊರೈ
Follow us on

ಒಂದು ಕಾಲದ ತಮಿಳಿನ ಜನಪ್ರಿಯ ನಿರ್ಮಾಪಕ, ಸಿನಿಮಾ ಫೈನ್ಯಾನ್ಸಿರ್ ಆಗಿದ್ದ ದೊರೈ (VA Durai) ನಿಧನ ಹೊಂದಿದ್ದಾರೆ. ಹಣ ಆಸ್ತಿ ಕಳೆದುಕೊಂಡು ನಿರ್ಗತಿಕರಂತಾಗಿದ್ದ ದೊರೈಗೆ ನಟ ರಜನೀಕಾಂತ್ ಸೇರಿ ಹಲವರು ಸಹಾಯ ಮಾಡಿದ್ದರು. ಆದರೆ ಡಯಾಬಿಟೀಸ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ದೊರೈ ಅಕ್ಟೋಬರ್ 2ರ ತಡರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ದೊರೈ, 90 ಹಾಗೂ 2000 ದಶಕದಲ್ಲಿ ಜನಪ್ರಿಯ ನಿರ್ಮಾಪಕ, ವಿತರಕ ಹಾಗೂ ಸಿನಿಮಾ ಫೈನ್ಯಾನ್ಶಿಯರ್ ಆಗಿದ್ದರು. ವಿಕ್ರಂ-ಸೂರ್ಯ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಪಿತಾಮಗನ್’, ವಿಜಯ್​ಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಗಜೇಂದ್ರ’, ಸತ್ಯರಾಜ್ ನಟನೆಯ ‘ಎನ್ನಮ್ಮ ಕನ್ನೆ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ರಜನೀಕಾಂತ್​ರ ಜನಪ್ರಿಯ ಸಿನಿಮಾ ‘ಬಾಬಾ’ಕ್ಕೆ ಫೈನ್ಯಾನ್ಸ್ ಮಾಡಿದ್ದರು, ಹಾಗೂ ವಿಕ್ರಂ ಸ್ಟಾರ್ ಆಗಲು ಕಾರಣವಾದ ‘ಸೇತು’ ಸಿನಿಮಾಕ್ಕೂ ಫೈನಾನ್ಸ್ ಮಾಡಿದ್ದರು.

ಆದರೆ ಇತ್ತೀಚೆಗೆ ನಿರ್ಗತಿಕರಂತಾಗಿದ್ದ ದೊರೈ, ಚಿಕಿತ್ಸೆಗೆ ಹಣಕಾಸಿನ ಸಮಸ್ಯೆ ಎದುರಿಸಿದ್ದರು. ಸೊಷಿಯಲ್ ಮೀಡಿಯಾನಲ್ಲಿ ವಿಡಿಯೋ ಪ್ರಕಟಿಸಿ ಸಹಾಯಕ್ಕೆ ಅಂಗಲಾಚಿದ್ದರು. ಕೂಡಲೇ ಪ್ರತಿಕ್ರಿಯಿಸಿದ್ದ ನಟ ರಜನೀಕಾಂತ್, ದೊರೈ ಅವರಿಗೆ ಚಿಕತ್ಸೆ ಕೊಡಿಸಿದ್ದಲ್ಲದೆ, ‘ಜೈಲರ್’ ಸಿನಿಮಾ ಚಿತ್ರೀಕರಣದ ಬಳಿಕ ಖುದ್ದಾಗಿ ಭೇಟಿ ಆಗುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:ಜೈಲರ್ ಸಿನಿಮಾಕ್ಕೆ ಮೊದಲ ಆಯ್ಕೆ ರಜನೀಕಾಂತ್ ಅಲ್ಲ: ಮತ್ಯಾರು?

ರಜನೀಕಾಂತ್ ನುಡಿದ ಮಾತಿನಂತೆ ದೊರೈಗೆ ಅಗತ್ಯ ಚಿಕಿತ್ಸೆಗಳನ್ನು ಒದಗಿಸುವ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಆದರೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಮಾಪಕ ದೊರೈ ಅಕ್ಟೋಬರ್ 2 ರ ರಾತ್ರಿ ನಿಧನ ಹೊಂದಿದ್ದಾರೆ. ದೊರೈ ನಿಧನಕ್ಕೆ ನಟ, ರಾಜಕಾರಣಿ ವಿಜಯ್​ಕಾಂತ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ