Updated on:Feb 20, 2023 | 11:04 AM
ಖ್ಯಾತ ಹಿರಿಯ ನಿರ್ದೇಶಕರಲ್ಲಿ ಎಸ್.ಕೆ. ಭಗವಾನ್ ಅವರು ಕೂಡ ಒಬ್ಬರು. ದೊರೈ ಭಗವಾನ್ ಎಂದೇ ಖ್ಯಾತ ಹೊಂದಿರುವ ಎಸ್.ಕೆ. ಭಗವಾನ್ ಅವರು ಇಂದು (ಫೆ. 20) ರಂದು ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.
ಎಸ್.ಕೆ. ಭಗವಾನ್ ಅವರು ನಿರ್ದೇಶಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬರು ನಿರ್ಮಾಪಕರು ಹೌದು. ಉತ್ತಮ ಸಂದೇಶಗಳನ್ನು ನೀಡುವ ಮನರಂಜನಾ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.
1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಎಸ್.ಕೆ. ಭಗವಾನ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದರು.
ವರನಟ ಡಾ. ರಾಜ್ಕುಮಾರ್ ಅವರಿಗೆ ಹಲವು ಜನಪ್ರಿಯ ಚಿತ್ರಗಳನ್ನು ಭಗವಾನ್ ಅವರು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ರಾಜ್ಕುಮಾರ್ ಅವರ ಜೊತೆ ಅತೀ ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಿರುವ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಜೊತೆಗೆ ರಾಜ್ಕುಮಾರ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿದ್ದರು.
ಕ್ಯಾಮರಾ ಮ್ಯಾನ್ ದೊರೈ ಜೊತೆ ಭಗವಾನ್ ಅವರು ಕೆಲಸ ಮಾಡಿದ್ದು, ಇವರಿಬ್ಬರ ಜೋಡಿ ದೊರೈ ಭಗವಾನ್ ಜೋಡಿ ಎಂದೇ ಫೇಮಸ್ ಆಗಿತ್ತು.
24 ಕಾದಂಬರಿಗಳನ್ನ ಸಿನಿಮಾ ಮಾಡಿದ್ದು ನಿರ್ದೇಶಕ ಎಸ್.ಕೆ. ಭಗವಾನ್ ಅವರ ಮತ್ತೊಂದು ಹೆಗ್ಗಳಿಕೆ.
'ಆಡುವ ಗೊಂಬೆ' ಭಗವಾನ್ ಅವರ ಕೊನೆಯ ಚಿತ್ರವಾಗಿದ್ದು, ನಟ ಸಂಚಾರಿ ವಿಜಯ್ ನಾಯಕರಾಗಿ ಅಭಿನಯಿಸಿದ್ದಾರೆ.
ಭಗವಾನ್ ಅವರು ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳನ್ನು ಹೊಂದಿದ್ದು, ಹಲವು ವರ್ಷಗಳ ತುಂಬು ಜೀವನವನ್ನ ನಡೆಸಿದ್ದಾರೆ.
Published On - 10:20 am, Mon, 20 February 23