AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ

Anusha Hegde: ನಟಿ ಅನುಷಾ ಹೆಗಡೆ ಸಹ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಅನುಷಾ ಅವರ ವಿವಾಹ ಭಾರಿ ಸದ್ದು ಮತ್ತು ಸುದ್ದಿ ಆಗಿತ್ತು. ಆದರೆ ಅವರ ದಾಂಪತ್ಯ ಆರೇ ವರ್ಷಕ್ಕೆ ಮುರಿದು ಬಿದ್ದಿದೆ. ಅನುಷಾ ಹೆಗಡೆ ಅವರು ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ
Anusha Hegde
ಮಂಜುನಾಥ ಸಿ.
|

Updated on: Jan 25, 2026 | 4:58 PM

Share

ಸಿನಿಮಾ ರಂಗದಲ್ಲಿ (Sandalwood) ದಾಂಪತ್ಯ ವಿಚ್ಛೇದನ ಎಂಬುದು ಸಾಮಾನ್ಯ ಆಗಿಬಿಟ್ಟಿದೆ. ಇತ್ತೀಚೆಗೆ ಟಿವಿ ಲೋಕದಲ್ಲೂ ಸಹ ಇದು ಸಾಮಾನ್ಯ ಎನಿಸಿಕೊಳ್ಳುತ್ತಿದೆ. ಕಳೆದ ವರ್ಷ ಕೆಲವಾರು ಕಿರುತೆರೆ ನಟ-ನಟಿಯರು ವಿಚ್ಛೇದನ ಪಡೆದಿದ್ದು ಸುದ್ದಿ ಆಗಿತ್ತು. ಇದೀಗ ನಟಿ ಅನುಷಾ ಹೆಗಡೆ ಸಹ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಅನುಷಾ ಅವರ ವಿವಾಹ ಭಾರಿ ಸದ್ದು ಮತ್ತು ಸುದ್ದಿ ಆಗಿತ್ತು. ಆದರೆ ಅವರ ದಾಂಪತ್ಯ ಆರೇ ವರ್ಷಕ್ಕೆ ಮುರಿದು ಬಿದ್ದಿದೆ. ಅನುಷಾ ಹೆಗಡೆ ಅವರು ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಅನುಷಾ ಹೆಗಡೆ ಆ ಬಳಿಕ ಕೆಲವು ತೆಲುಗು ಧಾರಾವಾಹಿ ಹಾಗೂ ಕೆಲ ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗ ಸಹನಟರಾದ ಪ್ರತಾಪ್ ಸಿಂಗ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದ ಅನುಷಾ ಹೆಗಡೆ, ಬಳಿಕ ಅವರನ್ನೇ ವಿವಾಹವಾದರು.

ಅನುಷಾ ಹೆಗಡೆ ಮತ್ತು ಪ್ರತಾಪ್ ಸಿಂಗ್ ವಿವಾಹ ಆಗ ಬಲು ಸುದ್ದಿಯಾಗಿತ್ತು. 2020ರ ಫೆಬ್ರವರಿ ತಿಂಗಳಲ್ಲಿ ಇವರ ವಿವಾಹ ಹೈದರಾಬಾದ್​​ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಬಲು ಅದ್ಧೂರಿಯಾಗಿ ನೆರವೇರಿತ್ತು. ಟಿವಿ ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸುಮಾರು 5 ಗಂಟೆಗಳ ಕಾಲ ಇವರ ವಿವಾಹ ಶಾಸ್ತ್ರಗಳು ನಡೆದಿದ್ದು ವಿಶೇಷವಾಗಿತ್ತು. ಐದು ಗಂಟೆಗಳ ಶಾಸ್ತ್ರ ನಡೆದ ಹೊರತಾಗಿಯೂ ಇವರ ವಿವಾಹ ಆರೇ ವರ್ಷಕ್ಕೆ ಮುರಿದು ಬಿದ್ದಿದೆ.

2023ರಲ್ಲೇ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. ಆದರೆ ಅನುಷಾ ಅವರು ಇದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಅಧಿಕೃತವಾಗಿ ಅನುಷಾ ಅವರೇ ವಿಚ್ಛೇದನವನ್ನು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಅನುಷಾ, ‘2023ರಿಂದಲೂ ದಾಂಪತ್ಯದಲ್ಲಿ ಏರಿಳಿತಗಳನ್ನು ಅನುಭವಿಸುತ್ತಿರುವುದು ಹಲವರಿಗೆ ಗೊತ್ತಿದೆ. ಇದೀಗ 2025 ರಲ್ಲಿ ನಾವು ಅಧಿಕೃತವಾಗಿ, ಕಾನೂನಾತ್ಮಕವಾಗಿ ದೂರಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚು ಚರ್ಚಿಸುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಸಹ ಹೇಳಿದ್ದಾರೆ.

ಅನುಷಾ ಹೆಗಡೆ ಅವರು ‘ಎನ್​​ಎಚ್ 37’ ಸಿನಿಮಾನಲ್ಲಿ 2016 ನಟಿಸಿದ್ದರು, ಒಳ್ಳೆಯ ನೃತ್ಯಗಾರ್ತಿ ಆಗಿದ್ದ ಅನುಷಾ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು. 2017ರಲ್ಲಿ ಪ್ರಸಾರವಾದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಟಿಸಿದ್ದರು. 2018ರಲ್ಲಿ ತೆಲುಗಿನ ‘ನಿನ್ನೇ ಪೆಲ್ಲಾಡುತಾ’ ಧಾರಾವಾಹಿಯಲ್ಲಿ ನಟಿಸಿದರು. 2019 ರಲ್ಲಿ ತೆಲುಗಿನ ‘ಸೂರ್ಯಕಾಂತಂ’, 2022 ರಲ್ಲಿ ತಮಿಳಿನ ‘ಆನಂದ ರಾಗಂ’ ಧಾರಾವಾಹಿಗಳಲ್ಲಿ ನಟಿಸಿದರು. ಇದೀಗ ಕನ್ನಡದ ‘ಅನು ಪಲ್ಲವಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ